ಅಮೆರಿಕೆಯ ವಿಗತಿ ಭಾರತಕ್ಕೆ ಅವಕಾಶದ ಬುತ್ತಿ - ವಿನೋದ್ ಧಾಮ್
* ಸುಖ್ಜಿತ್ ಪುರೇವಾಲ್
ಸಾಂತಕ್ಲಾರ : ಅಮೆರಿಕೆಯ ಆರ್ಥಿಕ ವಿಗತಿ ಹಾಗೂ ಡಾಟ್ಕಾಂ ಉದ್ಯಮ ಕರಗುವಿಕೆ ಭಾರತಕ್ಕೆ ವರದಾನವಾಗಲಿದೆ ಎಂಬ ಮಾತು 8ನೇ ವಾರ್ಷಿಕ ಟಿಐಇಕಾನ್ನ ಎರಡನೇ ದಿನವಾದ ಸೋಮವಾರ ಕೇಳಿಬಂತು.
ಬ್ರಾಡ್ಕಾಮ್ ಕಾರ್ಪೊರೇಷನ್ನಿನ ಉಪಾಧ್ಯಕ್ಷ ವಿನೋದ್ ಧಾಮ್ ಸುದ್ದಿಗೋಷ್ಠಿಯಲ್ಲಿ ನಗುನಗುತ್ತಾ ಮಾತಾಡಿದರು. ಐಟಿ ನಕಾಶೆಯಲ್ಲಿ ಭಾರತಕ್ಕೆ ಇನ್ನಷ್ಟು ಹೊಳಹು ಸಿಗುವ ಸದವಕಾಶವಿದು. ಭಾರತಕ್ಕೆ ಕೇವಲ ಸಾಫ್ಟ್ವೇರ್ ಉತ್ಪಾದನೆ ಮಾಡುವುದಷ್ಟೇ ಅಲ್ಲದೆ, ಇಡೀ ಉಪಕರಣ ತಯಾರಿಸುವ ಸಾಮರ್ಥ್ಯವಿದೆ ಎಂದರು.
ಭಾರತ ಐಟಿ ಪರಿಣತರ ತಾಣ ಅನ್ನೋದು ಸಾಬೀತಾಗಿದೆ. ಹೀಗಿರುವಾಗ ನಾವು ತಾಂತ್ರಿಕ ನೆರವನ್ನಷ್ಟೇ ಯಾಕೆ ಕೊಡಬೇಕು? ಸಾಫ್ಟ್ವೇರ್ ವಿನ್ಯಾಸವಷ್ಟೇ ನಮ್ಮ ಕೆಲಸವಾ? ನಮಗೆ ಬುದ್ಧಿ ಇದೆ. ತಾಕತ್ತಿದೆ. ನಮ್ಮ ಸಹಾಯ ಪಡೆವ ಇತರೆ ರಾಷ್ಟ್ರಗಳು ಯಾವ ದರದಲ್ಲಿ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತವೋ ಅದಕ್ಕಿಂತ ಕಡಿಮೆ ದರದಲ್ಲಿ ನಾವೇ ಉತ್ಪಾದಿಸಿದ ಉಪಕರಣಗಳನ್ನು ಮಾರುಕಟ್ಟೆಗೆ ತರುವ ಒಳ್ಳೆ ಅವಕಾಶವಿದು ಎಂದು ವಿನೋದ್ ಅಭಿಪ್ರಾಯಪಟ್ಟರು.
2010ನೇ ಇಸವಿ ಹೊತ್ತಿಗೆ ಸಾಫ್ಟ್ವೇರ್ ವಿನ್ಯಾಸ ಮೊದಲುಗೊಂಡು ಐಟಿ ಕ್ಷೇತ್ರದ ಉತ್ಪಾದನೆಯ ದಿಗ್ಗಜ ಎಂದು ಭಾರತ ಗುರ್ತಿಸಿಕೊಳ್ಳಲಿದೆ ಎಂಬ ಒಕ್ಕೊರಲು ಟಿಐಇಕಾನ್ನಲ್ಲಿ ಕೇಳಿಬಂತು.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications