Get Updates
Get notified of breaking news, exclusive insights, and must-see stories!

‘ಜಿಎಸ್‌ಎಸ್‌ ಗೌರವಿಸಿ ಸರಕಾರ ಮರ್ಯಾದೆ ಉಳಿಸಿಕೊಳ್ಳಬೇಕಿತ್ತು’

ಬೆಂಗಳೂರು : ಕವಿ ಜಿ.ಎಸ್‌. ಶಿವರುದ್ರಪ್ಪ ಅವರಿಗೆ ವಿಧಾನ ಪರಿಷತ್‌ನ ಸದಸ್ಯತ್ವ ನೀಡದೇ ರಾಜ್ಯ ಸರಕಾರ ತನ್ನ ಗೌರವವನ್ನು ತಾನೇ ಕಡಿಮೆ ಮಾಡಿಕೊಂಡಿದೆ ಎಂದು ಕಥೆಗಾರ ದೇವನೂರು ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.

ಜಿ. ಎಸ್‌. ಶಿವರುದ್ರಪ್ಪ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನ ಹೊರತಂದಿರುವ ಹಣತೆ ಅಭಿನಂದನಾ ಗ್ರಂಥವನ್ನು ಭಾನುವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ವಿಧಾನ ಪರಿಷತ್ತಿಗೆ ನೇಮಕ ಮಾಡುವಾಗ ಸರಕಾರಕ್ಕೆ ಶಿವರುದ್ರಪ್ಪ ಅವರಿಗಿಂತ ಹಿರಿಯ ಸಾಹಿತಿ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಇಂತಹ ಸಾಂಸ್ಕೃತಿಕ ಚೇತನವನ್ನು ಗೌರವಿಸಿ ಸರಕಾರ ತನ್ನ ಮಾನ ಮರ್ಯಾದೆ ಕಾಪಾಡಿಕೊಳ್ಳಬೇಕಿತ್ತು ಎಂದರು.

ಈ ಸಂದರ್ಭದಲ್ಲಿ ಸಂಶೋಧಕ, ಡಾ.ಎಂ. ಚಿದಾನಂದ ಮೂರ್ತಿ , ಕೆ.ಕೆ. ಸಿದ್ಧಯ್ಯ ಹಾಗೂ ಕೆ. ರಾಮದಾಸ್‌ ಅವರು ಜಿಎಸ್‌ಎಸ್‌ ಅವರನ್ನು ಅಭಿನಂದಿಸಿದರು. ಸಾಹಿತ್ಯ ಹಾಗೂ ಸಾಹಿತ್ಯ ಪರಿಷತ್ತು ಕೊಳೆತು ಗೊಬ್ಬರವಾಗಿದೆ ಎಂದು ರಾಮದಾಸ್‌ ವಿಷಾದಿಸಿದರೆ, ಜಿಎಸ್ಸೆಸ್‌ ಕುವೆಂಪು ಅವರ ಉತ್ತರಾಧಿಕಾರಿ ಎಂದು ಚಿದಾನಂದ ಮೂರ್ತಿ ಬಣ್ಣಿಸಿದರು.

ಅಭಿನಂದನೆಗೆ ಉತ್ತರಿಸಿದ ಶಿವರುದ್ರಪ್ಪ ಅವರು ನನ್ನನ್ನು ದಡ್ಡನಾಗಿಸುವ ಶಿಷ್ಯವೃಂದ ಬೆಳೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+