ಭಾಷಣ ಬಿಡಿ, ಏಡ್ಸ್ ನಿರ್ಮೂಲನೆಗೆ ಠರಾವು ಮಾಡಿ- ಅನ್ನಾನ್ ಕರೆ
ನ್ಯೂಯಾರ್ಕ್ : ವಿಶ್ವಾದ್ಯಂತ 22 ಮಿಲಿಯನ್ ಮಂದಿ ಈ ರೋಗದಿಂದ ಸತ್ತಿದ್ದಾರೆ. ಆದರೂ ಜನ ಪಾಠ ಕಲಿತಿಲ್ಲ. ಸುಮ್ಮನೆ ನೈತಿಕ ಫೈಸಲು ಕೊಟ್ಟರಾದೀತೆ? ಸರ್ವಸಿದ್ಧತೆ ಬೇಕು, ಈ ಏಡ್ಸ್ ಎಂಬ ಮಹಾಮಾರಿಯನ್ನು ಹೋಗಲಾಡಿಸಲು.
ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಕೋಫಿ ಅನ್ನಾನ್ ಈ ಮಾತುಗಳನ್ನಾಡಿದಾಗ ಕಂಠ ಬಿಗುವಾಗಿತ್ತು, ಅದರಲ್ಲಿ ತುಂಬು ಕಳಕಳಿ ಇತ್ತು. ಏಡ್ಸ್/ಎಚ್‌ಐವಿ ಕುರಿತ ಮೊದಲನೆಯ ಅಂತರರಾಷ್ಟ್ರೀಯ ಸಮಾವೇಶಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತಾಡುತ್ತಿದ್ದರು.....
ಆಷಾಢಭೂತಿಗಳಾಗದಿರಿ : ಕಷ್ಟಗಳಿಗೆ ಬೆನ್ನು ತೋರಿಸಿ, ಸುಮ್ಮನೆ ಶುಷ್ಕ ನೈತಿಕತೆಯ ಪುಗ್ಗ ಬಿಟ್ಟರೆ ಈ ಸಮಸ್ಯೆ ಬಗೆಹರಿಯದು. ಅದಕ್ಕೆ ಪಕ್ಕಾ ಪ್ರಿಪೇರ್ಡ್‌ನೆಸ್ ಬೇಕು ಎಂದು ಅನ್ನಾನ್ ಇಸ್ಲಾಮಿಕ್ ದೇಶಗಳು, ವ್ಯಾಟಿಕನ್ ಹಾಗೂ ಇನ್ನಿತರ ದೇಶಗಳನ್ನು ಉದ್ದೇಶಿಸಿ ಹೇಳಿದರು. ಇವತ್ತು ಏಡ್ಸ್ ಸಮಸ್ಯೆಯನ್ನು ಜಗತ್ತು ಎದುರಿಸುತ್ತಿರುವುದಾದರೂ ಹೇಗೆ ? ಅದರಿಂದ ಪೀಡಿತರಾದವರನ್ನು ಬೆನ್ನಹಿಂದೆ ಥೂ ಛೀ ಅನ್ನುತ್ತದೆ, ಅಸ್ಪೃಶ್ಯರಂತೆ ಕಾಣುತ್ತದೆ. ಆದರೆ ಹೊರನೋಟಕ್ಕೆ ಕಣ್ಣೊರೆಸಲೋ ಎಂಬಂತೆ ಸೋಗುಹಾಕಿ ಒಂದಿಷ್ಟು ಮುಫತ್ತು ಭಾಷಣ ಹೊಡೆದು ಬಿಡುತ್ತದೆ.
ವಿಷಯದ ಬಗ್ಗೆ ಇನ್ನಷ್ಟು ಮುಕ್ತವಾಗಿ ಚರ್ಚೆಗಳಾಗಬೇಕು. ರೋಗವನ್ನು ಅಂಟಿಸಿಕೊಳ್ಳದಿರುವುದು ಹೇಗೆ ಅನ್ನೋದನ್ನ ಜನರಿಗೆ ಮನಬಿಚ್ಚಿ ತಿಳಿಸಬೇಕು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಂತೂ ಈ ಕೆಲಸಕ್ಕೆ ಮಾಡುತ್ತಿರುವ ಖರ್ಚನ್ನು 5 ಪಟ್ಟು ಹೆಚ್ಚಿಸಬೇಕು. ಇತರರಿಗೆ ಹಾಗೆ ಇರು ಹೀಗೆ ಇರು ಅಂತ ಪಾಠ ಹೇಳುವ ಮುನ್ನ ಆತ್ಮವಿಮರ್ಶೆ ಅಗತ್ಯ.
ನೀವೂ ಸಹಾಯ ಮಾಡಿ : ಜಾಗತಿಕ ಏಡ್ಸ್ ಹಾಗೂ ಆರೋಗ್ಯ ನಿಧಿ (ಇದನ್ನು ಸ್ಥಾಪಿಸಿರುವುದು ಖುದ್ದು ಅನ್ನಾನ್) ಗೆ ಶ್ರೀಮಂತರು ಹೆಚ್ಚು ಹೆಚ್ಚು ಧನ ಸಹಾಯ ಮಾಡಬೇಕು. ಏಡ್ಸ್ ಹೋಗಲಾಡಿಸಲು ವರ್ಷಕ್ಕೆ ಕನಿಷ್ಠ 7ರಿಂದ 10 ಬಿಲಿಯನ್ ಡಾಲರ್ ಹಣ ಬೇಕಾಗಿದೆ. ಈ ನಿಧಿಯ ಉಸ್ತುವಾರಿಯನ್ನು ಇನ್ನೂ ಆಯ್ಕೆ ಮಾಡಬೇಕಿರುವ ಸ್ವತಂತ್ರ ಮಂಡಳಿ ವಹಿಸಿಕೊಳ್ಳಲಿದೆ. ಈವರೆಗೆ ನಿಧಿಗೆ 550 ದಶಲಕ್ಷ ಡಾಲರ್ ಹಣ ಸೇರಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನಿಧಿಗೆ ಹಣ ಕೊಡುವುದು ಇಷ್ಟ. ಆದರೆ ಅವು ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿಲ್ಲ. ಹೀಗಾಗಿ ಶ್ರೀಮಂತ ರಾಷ್ಟ್ರಗಳು ನೆರವಿನ ಕೈ ದೊಡ್ಡ ದಾಗಬೇಕು.
ಏಡ್ಸ್ ಸರಪಳಿ : ರಾಷ್ಟ್ರಗಳು, ಅವುಗಳ ಕೇಂದ್ರ ಸರ್ಕಾರಗಳು, ರಾಜ್ಯ ಸರ್ಕಾರಗಳು, ಇನ್ನೂ ಆಳಕ್ಕಿಳಿದು ಸ್ಥಳೀಯ ಆಡಳಿತಗಳು ಏಡ್ಸ್ ನಿರ್ಮೂಲನೆಗೆ ಸರಪಳಿಯಾಗಬೇಕು. ಏಡ್ಸನ್ನು ನಾವು ಓಡಿಸಿಯೇ ತೀರುತ್ತೇವೆ ಎಂದು ಪ್ರತಿ ರಾಷ್ಟ್ರ ಸಂಕಲ್ಪ ಮಾಡಬೇಕು. ಅದು ಬಿಟ್ಟು ಬರೇ ಭಾಷಣದಲ್ಲೇ ಎಲ್ಲಾ ಮುಗಿಸಿದರೆ ಎಳ್ಳಷ್ಟೂ ಪ್ರಯೋಜನವಿಲ್ಲ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications