ಏಷ್ಯದ 3ನೇ ಶ್ರೀಮಂತ ವ್ಯಕ್ತಿ ಅಜೀಮ್ ಪ್ರೇಮ್‌ಜೀ
ನ್ಯೂಯಾರ್ಕ್: ಇತ್ತೀಚೆಗಷ್ಟೇ ವಿಶ್ವದ 100 ಅಗ್ರ ಐ.ಟಿ. ಕಂಪನಿಗಳ ಸಾಲಿನಲ್ಲಿ ಸ್ಥಾನಪಡೆದು, ಸಾಧನೆ ಮೆರೆದಿದ್ದ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಮ್ ಪ್ರೇಮ್‌ಜೀ ಈಗ ಇನ್ನೂ ಒಂದು ಸಾಧನೆಯ ಮೆಟ್ಟಿಲೇರಿದ್ದಾರೆ. ಫೋರ್ಬ್ಸ್ ಪತ್ರಿಕೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ರೀತ್ಯ ಅಜೀಮ್ ಈಗ ಏಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತರು.
ಏಷ್ಯಾದ ಮೊದಲ ಭಾರೀ ಸಿರಿವಂತನ ಸ್ಥಾನವನ್ನು ಹಾಂಕಾಂಗ್‌ನ ಉದ್ಯಮಿ ಲಿ ಕಾ ಷಿಂಗ್ ಪಡೆದಿದ್ದರೆ, ಎರಡನೇ ಸ್ಥಾನ ಜಪಾನಿನ ಯಾಸುಓ ತಾಕಾಯಿ ಅವರ ಪಾಲಾಗಿದೆ. ಏಷ್ಯಾಖಂಡದಲ್ಲಿ ಒಟ್ಟು 73 ಶತಕೋಟ್ಯಧಿಪತಿಗಳಿದ್ದು (ಬಿಲಿಯನರ್ಸ್) ಈ ಪೈಕಿ ಅಜೀಮ್ ಮೂರನೆಯವರು.
ಮಾಹಿತಿ - ತಂತ್ರಜ್ಞಾನ ಮಾರುಕಟ್ಟೆಯ ಕುಸಿತದಿಂದ ಮತ್ತು ಷೇರು ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ಕೆಲವು ಸಿರಿವಂತರು ತಾವು ಕಳೆದ ವರ್ಷ ಪಡೆದಿದ್ದ ಸ್ಥಾನಕ್ಕಿಂತ ಒಂದೆರಡು ಹಂತ ಕೆಳಗಿಳಿದಿದ್ದಾರೆ ಎಂದೂ ಪತ್ರಿಕೆಯ ಸಮೀಕ್ಷೆ ತಿಳಿಸಿದೆ.
ಕಳೆದ ವರ್ಷದ 11.3 ಶತಕೋಟಿ ಡಾಲರ್ ಇದ್ದ ಹಾಂಗಾಂಗ್‌ನ ಉದ್ಯಮಿ ಲಿ ಕಾ ಷಿಂಗ್‌ರ ಆಸ್ತಿಯ ಮೌಲ್ಯ ಈ ವರ್ಷ 12.6 ಶತಕೋಟಿ ಡಾಲರ್ ಮುಟ್ಟಿದೆ. ಏಷ್ಯಾದಲ್ಲಿ ನಂ 1 ಶ್ರೀಮಂತ ಆಗಿರುವ ಲೀ ವಿಶ್ವದ ಅತಿ ದೊಡ್ಡ ಶ್ರೀಮಂತರ ಸಾಲಿನಲ್ಲಿ 18ನೇ ಸ್ಥಾನ ಪಡೆದಿದ್ದಾರೆ.
ಏಷ್ಯಾ ಖಂಡದ ಸಿರಿವಂತರ ಸಾಲಿನಲ್ಲಿ 2 ನೇ ಸ್ಥಾನ ಅಲಂಕರಿಸಿರುವ ಜಪಾನ್‌ನ ಯಾಸುಓ ಅವರು ವಿಶ್ವ ಶ್ರೇಯಾಂಕದಲ್ಲಿ 37ನೆಯವರಾಗಿದ್ದಾರೆ. ಬಿಲ್ ಗೇಟ್ಸ್ ತಮ್ಮ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು. ವಿಶ್ವಾಗ್ರೇಸಸರಾಗಿ ಮುಂದುವರಿದಿದ್ದಾರೆ.
ಧೀರೂಬಾಯಿ ಅಂಬಾನಿ ಅವರು 10 ಸ್ಥಾನದಲ್ಲಿದ್ದಾರೆ. 73 ಶತಕೋಟ್ಯಧಿಪತಿಗಳ ಸಾಲಿನಲ್ಲಿ ನಾಲ್ವರು ಭಾರತೀಯರಿದ್ದಾರೆ. (ಐ.ಎ.ಎನ್.ಎಸ್. /ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications