ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು, ಗುಲ್ಬರ್ಗಾ ಮೇಯರ್‌ ಸ್ಥಾನ ಕಾಂಗ್ರೆಸ್‌ ಪಾಲು

By Staff
|
Google Oneindia Kannada News

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಯಾರಾಗಬಹುದು ಎಂಬ ಹಲವು ದಿನಗಳ ಕುತೂಹಲದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಿ.ಕೆ. ಪ್ರಕಾಶ್‌ 17ನೇ ಮೇಯರ್‌ ಆಗಿ ಹಾಗೂ ಪುಷ್ಪ ವಲ್ಲಿ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಮೈಸೂರು ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿರಲಿಲ್ಲ . ಆದಾಗ್ಯೂ ಅಧಿಕಾರ ಹಿಡಿಯಲು ಅವಿರತ ಹೋರಾಟ ನಡೆಸಿದ ಕಾಂಗ್ರೆಸ್‌ ಮೆಯರ್‌ ಹಾಗೂ ಉಪಮೇಯರ್‌ ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಹಾನಗರ ಪಾಲಿಕೆಯ ಒಟ್ಟು ಸದಸ್ಯ ಬಲ 65. ಕಾಂಗ್ರೆಸ್‌ ಗೆದ್ದಿದ್ದು ಕೇವಲ 23. ಕಾಂಗ್ರೆಸ್‌ಗೆ ಮೂವರು ಪಕ್ಷೇತರರ ಬೆಂಬಲವೂ ಇತ್ತು. ಆದರೆ, ಜಾತ್ಯತೀತ ಜನತಾದಳ 18 ಸ್ಥಾನ ಮತ್ತು ಬಿಜೆಪಿ 16 ಸ್ಥಾನಗಳಲ್ಲಿ ಜಯಗಳಿಸಿತ್ತು. ಜನಮೋರ್ಚಾ 5 ಸ್ಥಾನ ತನ್ನದಾಗಿಸಿಕೊಂಡಿತ್ತು.

ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಹಾಗೂ ಪುಷ್ಪ ವಲ್ಲಿ ಅವರು ತಲಾ 28 ಮತಗಳಿಸುವ ಮೂಲಕ ಬಿ.ಜೆ.ಪಿ. ಬೆಂಬಲ ಪಡೆದಿದ್ದ, ಜನಮೋರ್ಚಾದ ಭರತೇಶ್‌ ಹಾಗೂ ಲಲಿತಾ ಅವರನ್ನು ಪರಾಭವಗೊಳಿಸಿ ಮೇಯರ್‌ ಹಾಗೂ ಉಪಮೇಯರ್‌ ಆಗಿ ಆಯ್ಕೆಯಾದರು.

ಗುಲ್ಬರ್ಗಾದಲ್ಲೂ ಕಾಂಗ್ರೆಸ್‌ ಜಯಭೇರಿ: ಪ್ರತಿಪಕ್ಷಗಳ ಒಗ್ಗೂಡುವಿಕೆಯಿಂದ ಭಾರೀ ಕುತೂಹಲ ಕೆರಳಿಸಿದ್ದ, ಗುಲ್ಬರ್ಗಾ ನಗರಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕೂಡ ಕಾಂಗ್ರೆಸ್‌ ಪಾಲಾಗಿದೆ. ಮಾತಿನ ಚಕಮಕಿಯ ನಡುವೆಯೂ ನಡೆದ ಚುನಾವಣೆಯಲ್ಲಿ ಕೇವಲ 1 ಮತದ ಅಂತರದಿಂದ ಜಯಸಾಧಿಸಿದ ಕಾಂಗ್ರೆಸ್‌ನ ದಶರತ್‌ ಒಂಟಿ ಅವರು ಮೇಯರ್‌ ಆಗಿಯೂ, ಅದೇ ಪಕ್ಷದ ಸಂತೋಷ್‌ ಪಾಟೀಲ್‌ ಅವರು ಉಪ ಮೇಯರ್‌ ಆಗಿಯೂ ಆಯ್ಕೆಯಾದರು.

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X