ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ ಮಾದರಿಯಲ್ಲಿ ರಂಗಶಾಲೆ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಯ ಮಾದರಿಯಲ್ಲಿ ರಾಜ್ಯದಲ್ಲಿಯೂ ನಾಟಕ ಶಾಲೆಯಾಂದನ್ನು ಆರಂಭಿಸಲು ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು , ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಾಟಕಶಾಲೆ ಮೈಸೂರಿನಲ್ಲಿ ಪ್ರಾರಂಭವಾಗಲಿದೆ.

ರಂಗಾಯಣದ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ಪ್ರಸನ್ನ , ಮುಂದಿಟ್ಟ ಪ್ರಸ್ತಾಪವನೆಗೆ ಸರಕಾರ ಒಪ್ಪಿಗೆ ನೀಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಗುರುವಾರ ತಿಳಿಸಿದ್ದಾರೆ. ಬಹುಕಾಲದ ಬೇಡಿಕೆ ಈಗ ಈಡೇರುತ್ತಿದ್ದು ರಂಗಾಯಣದ ಅಡಿಯಲ್ಲಿಯೇ ಈ ನಾಟಕ ಶಾಲೆ ಆರಂಭವಾಗಲಿದೆ, ಆದರೆ ಸರಕಾರದಿಂದ ಯಾವುದೇ ಆರ್ಥಿಕ ನೆರವು ಈ ಶಾಲೆಗೆ ದೊರಕುವುದಿಲ್ಲ ಎಂದು ಸಚಿವೆ ತಿಳಿಸಿದರು.

ಹಣಕಾಸು ಸೇರಿದಂತೆ ಇತರ ಸಂಪನ್ಮೂಲಗಳನ್ನು ಸ್ಥಳೀಯವಾಗಿಯೇ ಕ್ರೋಢೀಕರಿಸಿಕೊಳ್ಳುವುದಾಗಿ ಪ್ರಸನ್ನರು ತಮ್ಮ ಪ್ರಸ್ತಾವನೆಯಲ್ಲಿಯೇ ಹೇಳಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ದುಡಿದಿರುವ ಪ್ರಸನ್ನ ಅವರೇ ಈ ನಾಟಕ ಶಾಲೆಯ ರೂವಾರಿಯಾಗಿರುತ್ತಾರೆ. ಎಷ್ಟು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬೇಕು ಮತ್ತು ತರಬೇತಿಯ ಅವಧಿ ಎಷ್ಟಿರಬೇಕು ಎಂಬ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದ ಬಳಿಕ ತೀರ್ಮಾನವಾಗಲಿದೆ ಎಂದು ಸಚಿವೆ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X