ಸೋನಿಯಾ ಅಮೇರಿಕಾ ಯಾತ್ರೆ ಉದ್ದೇಶ ಬ್ಯಾಂಕ್ ವ್ಯವಹಾರವಾ?
ಸೋನಿಯಾ ಅವರು ಕೈಗೊಳ್ಳುತ್ತಿರುವ ಅಮೇರಿಕಾ ಯಾತ್ರೆಯ ಉದ್ದೇಶವಾದರೂ ಏನು ? ವಿದೇಶದಲ್ಲಿನ ಬ್ಯಾಂಕ್ ಖಾತೆಗಳ ವ್ಯವಹಾರಕ್ಕಾಗಿ ಅನ್ನುತ್ತಾರೆ ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಹ್ಮಣ್ಯಂ ಸ್ವಾಮಿ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ವಿದೇಶಗಳಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆಯುವಂತೆ ಕೇಂದ್ರ ಸರ್ಕಾರವನ್ನು ಸುಬ್ರಹ್ಮಣ್ಯಂ ಸ್ವಾಮಿ ಒತ್ತಾಯಿಸಿದ್ದಾರೆ. ಈ ಕುರಿತು ವಿತ್ತ ಸಚಿವ ಯಶವಂತ ಸಿನ್ಹಾ ಅವರಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಬಿಡುಗಡೆ ಮಾಡಿದರು.
ಅಮೇರಿಕೆಯಲ್ಲಿನ ಕ್ರೆಡಿಟ್ ಸ್ವಿಸ್ ಫಸ್ಟ್ ಬೋಸ್ಟನ್ ಬ್ಯಾಂಕ್ (ಸಿಎಸ್‌ಎಫ್‌ಬಿ) ನಲ್ಲಿರುವ ರಾಹುಲ್ ಖಾತೆಗೆ ಇತ್ತೀಚೆಗಷ್ಟೇ ಭಾರೀ ಮೊತ್ತದ ಹಣ ಜಮೆಯಾಗಿದೆ. ಈ ಬಗ್ಗೆ ಅಮೇರಿಕೆಯಲ್ಲಿನ ರಕ್ಷಣೆ ಹಾಗೂ ವಿನಿಮಯ ಮಂಡಳಿಗಳು ಸೇರಿದಂತೆ ಇತರ ಆದಾಯ ಪ್ರಾಧಿಕಾರಗಳು ತನಿಖೆ ನಡೆಸುವಂತೆ ಸ್ವಾಮಿ ಒತ್ತಾಯಿಸಿದರು.
ಎಂ.ಎಸ್.ಕೆ. ರಿkುೕಜರ್ ಎನ್ನುವ ವ್ಯಕ್ತಿ ರಾಹುಲ್‌ನ ಖಾತೆಗೆ ಹಣವನ್ನು ತುಂಬಿದ್ದು , ಈ ಹಣ ಮಾಫಿಯಾದ ಡ್ರಗ್ ಡೀಲಿಂಗ್‌ಗೆ ಸಂಬಂಧಿಸಿದ್ದು ಎಂದು ಸ್ವಾಮಿ ತಮ್ಮ ಪತ್ರದಲ್ಲಿ ಆಪಾದಿಸಿದ್ದಾರೆ. ಭಾರತದ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್‌ನ ಮೂಲಕ ಅಮೆರಿಕ ಅಧಿಕಾರಿಗಳ ನೆರವು ಪಡೆಯಬೇಕು, ಈ ಮೂಲಕ ಅಮೇರಿಕಾ ಹಾಗೂ ಲಂಡನ್‌ನಲ್ಲಿ ರಾಹುಲ್ ಗಾಂಧಿ ಹೊಂದಿರುವ ಖಾತೆಗಳ ವಿವರಗಳು ಹಾಗೂ ರಿkುೕಜರ್‌ನನ್ನು ಪತ್ತೆ ಹಚ್ಚಬೇಕೆಂದು ಸ್ವಾಮಿ ಸಿನ್ಹಾ ಅವರಿಗೆ ಸೂಚಿಸಿದ್ದಾರೆ.
ಐಸ್‌ಲ್ಯಾಂಡ್‌ನಲ್ಲಿ ಎಲ್‌ಟಿಟಿಇ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವ ಸೋನಿಯಾ, ಭಯೋತ್ಪಾದಕ ಸಂಘಟನೆಯಾಂದಿಗೆ ತಮ್ಮ ತಾಯಿ ಹೊಂದಿದ್ದ ಸಂಪರ್ಕಗಳನ್ನು ಅಳಿಸಿಹಾಕುವ ಯತ್ನದಲ್ಲಿದ್ದಾರೆ ಎಂದೂ ಸ್ವಾಮಿ ಆಪಾದಿಸಿದ್ದಾರೆ.
(ಯುಎನ್‌ಐ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications