Get Updates
Get notified of breaking news, exclusive insights, and must-see stories!

ಗುಜರಾತ್‌ನಲ್ಲಿ ಮತ್ತೆ ಲಘು ಭೂಕಂಪ : 4 ರಿಕ್ಟಾರ್‌ ತೀವ್ರತೆ

ನವದೆಹಲಿ : ಕಳೆದ ಗಣರಾಜ್ಯೋತ್ಸವದಂದು ಭೂಮಿ ಗಡಗಡ ನಡುಗಿ 20 ಸಾವಿರ ಜನರನ್ನು ನುಂಗಿಹಾಕಿಕೊಂಡ ಗುಜರಾತ್‌ನಲ್ಲಿ ಬುಧವಾರ ಮತ್ತೆ ಭೂಮಿ ಸಣ್ಣಗೆ ನಡುಗಿದೆ. ಅದೃಷ್ಟವಶಾತ್‌ ಯಾವುದೇ ಹಾನಿಯಾಗಿರುವ ವರದಿಯಾಗಿಲ್ಲ.

ಹವಾಮಾನ ಇಲಾಖೆಯ ಪ್ರಕಾರ ಈ ಲಘು ಭೂಕಂಪದ ತೀವ್ರತೆ ರಿಕ್ಟಾರ್‌ ಮಾಪಕದಲ್ಲಿ 4 ರಷ್ಟಿತ್ತು. ಬುಧವಾರ ಮೊದಲ ಜಾವ 00.44 ಗಂಟೆಗೆ ಕಂಪನ ಸಂಭವಿಸಿದೆ. ಕರಾವಳಿ ಪ್ರದೇಶ ಕಛ್‌ ಭೂಕಂಪದ ಕೇಂದ್ರವಾಗಿತ್ತು.

ಈ ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲವಾದರೂ ಜನರಲ್ಲಿ ಆತಂಕ ಮಡುಗಟ್ಟಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+