ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಪ್ರವೀಣ್‌ ಕುಮಾರ್‌ಗೆ ಎಎಫ್‌ಐಎಪಿ ಪದವಿ

By Staff
|
Google Oneindia Kannada News

ಬೆಂಗಳೂರು : ನಗರದ ಹವ್ಯಾಸಿ ಛಾಯಾಗ್ರಾಹಕ ಎಚ್‌.ವಿ.ಪ್ರವೀಣ್‌ ಕುಮಾರ್‌ ಅವರನ್ನು ಲಕ್ಸಂಬರ್ಗ್‌ನ ಅಂತರರಾಷ್ಟ್ರೀಯ ಛಾಯಾಗ್ರಹಣ ಸಂಸ್ಥೆ 2000ನೇ ಸಾಲಿನ ಎಎಫ್‌ಐಎಪಿ ಪದವಿಗೆ ಆಯ್ಕೆ ಮಾಡಿದೆ.

ಪ್ರಕೃತಿ ವಿಭಾಗದ ಈ ಏಕೈಕ ಪ್ರಶಸ್ತಿ ಕರ್ನಾಟಕದ ಪಾಲಾಗಿರುವುದು, ಕನ್ನಡನಾಡು ಛಾಯಾಗ್ರಾಹಕರ ತಾಣ ಎಂಬ ಕೀರ್ತಿಗೆ ಮೂಡಿರುವ ಮತ್ತೊಂದು ಗರಿಯಾಗಿದೆ. ಎಫ್‌ಐಎಪಿ ಸಂಸ್ಥೆ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಗಿಟ್ಟಿಸಿರುವ ಭಾರತೀಯ ಛಾಯಾಗ್ರಾಹಕರಲ್ಲಿ ಕರ್ನಾಟಕದವರೇ ಹೆಚ್ಚು.

ಯಾರೀ ಪ್ರವೀಣ್‌ ? : ಕೇಂದ್ರೀಯ ಎಕ್ಸೈಸ್‌ ಇಲಾಖೆಯಲ್ಲಿ ನೌಕರಿ. ಛಾಯಾಗ್ರಹಣ ಮಾಡುವ ಹವ್ಯಾಸಕ್ಕೆ ಒಂದು ಐಡೆಂಟಿಟಿ ಸಿಕ್ಕಿದ್ದು 1995ರಲ್ಲಿ ; ವನ್ಯಜೀವಿ ಛಾಯಾಗ್ರಾಹಕರಾಗಿ. ಬಹುಮುಖ ಪ್ರತಿಭೆಯ ಈ ಮೇಧಾವಿ ಚುರುಕಾದರು. 450ಕ್ಕೂ ಹೆಚ್ಚು ಛಾಯಾಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಸ್ವೀಕೃತವಾಗಿದ್ದು, ಈ ಪೈಕಿ 50ಕ್ಕೆ ಪ್ರಶಸ್ತಿ ಸಂದಿದೆ. ಎಕ್ಸೈಸ್‌ ಇಲಾಖೆಯಲ್ಲಿ ಈ ಸಾಧನೆ ಮಾಡಿರುವ ಏಕೈಕ ಎಂಬ ಕೀರ್ತಿಯೂ ಪ್ರವೀಣ್‌ರದ್ದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X