ಪಾಕ್ ಮಾರುಕಟ್ಟೆ ಬಾಗಿಲು ಮುಷರ್ರಫ್ ತೆರೆಯುವರೇ?
*ಸುಮಿತ್ ಚಟರ್ಜಿ
ನವದೆಹಲಿ : ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರ ಭಾರತ ಭೇಟಿಯ ಬಗ್ಗೆ ಹೆಚ್ಚು ಆಸಕ್ತರಾಗಿರುವವರು ಯಾರು ?
ದೇಶವೇ ಮುಷರ್ರಫ್ ಅವರ ಭೇಟಿಯ ಫಲಶ್ರುತಿಯನ್ನು ಎದುರು ನೋಡುತ್ತಿರುವುದು ನಿಜವಾದರೂ, ಭಾರತೀಯ ವ್ಯಾಪಾರಿಗಳು ಈ ಭೇಟಿಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ಮಾರುಕಟ್ಟೆಯತ್ತ ಅಗಲಗಣ್ಣಾಗಿರುವ ಭಾರತೀಯ ವಣಿಕರು, ಪಾಕಿಸ್ತಾನದ ಮಾರುಕಟ್ಟೆಯ ಬಾಗಿಲನ್ನು ಮುಷರ್ರಫ್ ಭಾರತ ಭೇಟಿ ತೆರೆದೀತೆ ಎಂದು ಕಾಯುತ್ತಿದ್ದಾರೆ. ಅದಕ್ಕಾಗಿಯೇ ಮುಷರ್ರಫ್ ಅವರೊಂದಿಗೆ ತಮಗೂ ಮಾತುಕತೆಗೆ ವೇದಿಕೆ ಕಲ್ಪಿಸಿಕೊಡಬೇಕೆಂದು ಬಿಜಿನೆಸ್ ಲಾಬಿಗಳು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸುತ್ತಿವೆ.
ಮುಷರ್ರಫ್ ಅವರು ನಮ್ಮನ್ನುದ್ದೇಶಿಸಿ ಮಾತನಾಡಲು ಅವಕಾಶ ಕಲ್ಪಿಸಿಕೊಡುವ ಪ್ರಸ್ತಾವನೆಯನ್ನು ಸಚಿವಾಲಯದ ಮುಂದಿಟ್ಟಿದ್ದೇವೆ. ಸರ್ಕಾರ ನಮ್ಮ ಪ್ರಸ್ತಾವನೆಯನ್ನು ಒಪ್ಪಿದ್ದೇ ಆದಲ್ಲಿ ಉಭಯ ದೇಶಗಳ ನಡುವಣ ವ್ಯಾಪಾರ ಸಂಬಂಧ ಬಲಗೊಳ್ಳುತ್ತದೆ, ವ್ಯಾಪಾರ ಒಪ್ಪಂದಗಳು ಸಾಧ್ಯವಾಗುತ್ತವೆ ಎನ್ನುತ್ತಾರೆ ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟ (ಎಫ್‌ಐಸಿಸಿಐ) ದ ಎ.ಎಸ್. ಕಸ್ಲಿವಾಲ್.
ಐದು ದಶಕಗಳಿಂದ ಹೆಪ್ಪುಗಟ್ಟಿರುವ ವಾಣಿಜ್ಯ ಮುನಿಸು ಕರಗೀತೆ?
ಭಾರತೀಯ ವಾಣಿಜ್ಯ ಲಾಬಿಗಳಲ್ಲಿ ಎಫ್‌ಐಸಿಸಿಐ ಪ್ರಮುಖವಾದುದು. ಕಳೆದ ತಿಂಗಳಷ್ಟೇ 35 ಕೈಗಾರಿಕೋದ್ಯಮಿಗಳನ್ನು ಇಸ್ಲಮಾಬಾದ್‌ಗೆ ಕರೆದೊಯ್ದಿದ್ದ ಎಫ್‌ಐಸಿಸಿಐ, ಇಂಥದ್ದೇ ಭೇಟಿಯನ್ನು 1995 ರಲ್ಲೂ ನಡೆಸಿತ್ತು . ವ್ಯಾಪಾರಾಭಿವೃದ್ಧಿ ಈ ಭೇಟಿಗಳ ಉದ್ದೇಶ. ಆದರೆ, ಉಭಯ ದೇಶಗಳ ನಡುವಣ ವ್ಯಾಪಾರ ಸಂಬಂಧ ಕಳೆದ 5 ದಶಕಗಳಿಂದ ಗಡ್ಡೆ ಕಟ್ಟಿದೆ. ಈ ಸಂಬಂಧ ಸುಧಾರಿಸಲು ಹಾಗೂ ಪಾಕಿಸ್ತಾನದೊಂದಿಗೆ ಪುನಃ ವ್ಯಾಪಾರದ ಮಾರ್ಗಗಳನ್ನು ತೆರೆಯಲು ಮುಷರ್ರಫ್ ಅವರೊಂದಿಗಿನ ಭೇಟಿ ಸಹಾಯಕವಾಗಬಹುದು ಎನ್ನುವುದು ಕಸ್ಲಿವಾಲ್ ಆಶಾವಾದ.
ಮುಷರ್ರಫ್ ಜೊತೆ ಭೇಟಿಗೆ ಎಫ್‌ಐಸಿಸಿಐ ರೀತಿಯೇ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮತ್ತು ಭಾರತೀಯ ಕೈಗಾರಿಕಾ ಹಾಗೂ ವಾಣಿಜ್ಯ ಸಹಕಾರ ಮಂಡಳಿ(ಎಎಸ್‌ಎಸ್‌ಒಸಿಎಚ್‌ಎಎಂ)ಗಳೂ ವಿದೇಶಾಂಗ ಸಚಿವಾಲಯಕ್ಕೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಮುಷರ್ರಫ್ ಅವರು ಭಾರತೀಯ ವಾಣಿಜ್ಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವುದನ್ನು ಹಾಗೂ ಸಹಕಾರ ಸಾಧ್ಯವಿರುವ ಕ್ಷೇತ್ರಗಳ ಬಗ್ಗೆ ಚರ್ಚಿಸುವುದನ್ನು ನಾವು ಬಯಸುತ್ತೇವೆ ಎನ್ನುತ್ತಾರೆ ಸಿಐಐ ವಕ್ತಾರರು.
ಕಳ್ಳ ಸಾಗಾಣಿಕೆ- ಪಾಕಿಸ್ತಾನಕ್ಕೆ ಹೆಚ್ಚು ನಷ್ಟ
ಪ್ರತಿವರ್ಷ ಭಾರತ ಹಾಗೂ ಪಾಕಿಸ್ತಾನಗಳ ನಡುವೆ 1 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಕಳ್ಳ ಸಾಗಾಣಿಕೆಯಾಗುತ್ತವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ದೊಡ್ಡ ಹೊಡೆತ ಅನುಭವಿಸುತ್ತಿರುವುದು, ವಾರ್ಷಿಕ 500 ಮಿಲಿಯನ್ ಡಾಲರ್ ಆದಾಯವನ್ನು ಕಳೆದುಕೊಳ್ಳುತ್ತಿರುವ ಪಾಕಿಸ್ತಾನ ಎಂದು ಎಫ್‌ಸಿಸಿಐ ಅಂಕಿ-ಅಂಶಗಳು ಹೇಳುತ್ತವೆ.
ಸಾಗಣೆ ನಿರ್ಬಂಧ ಹಾಗೂ ಸಂಕುಚಿತ ವಾಯು ಗಡಿಗಳಿಂದಾಗಿ ಉಭಯ ದೇಶಗಳ ನಡುವಣ ವ್ಯಾಪಾರ ನಶಿಸುತ್ತಿದೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಉಭಯ ದೇಶಗಳ ನಾಯಕರ ನಡುವಣ ಶೃಂಗಸಭೆಯಲ್ಲಿ ಗಡಿ ಕುರಿತಾದ ಚರ್ಚೆ ಪ್ರಮುಖವಾಗಲಿದ್ದು , ಇದರಿಂದಾಗಿ ವ್ಯಾಪಾರ ಸಂಬಂಧಗಳಿಗೆ ಅನುಕೂಲವಾಗಬಹುದೆನ್ನುವ ನಿರೀಕ್ಷೆಯಲ್ಲಿ ಭಾರತೀಯ ಉದ್ಯಮಿಗಳಿದ್ದಾರೆ. ಬಹುಶಃ ಆ ಬದಿಯ ಪಾಕಿಸ್ತಾನ ಉದ್ಯಮಿಗಳಲ್ಲೂ ಇಂಥದ್ದೇ ನಿರೀಕ್ಷೆಗಳು ಚಾಲ್ತಿಯಲ್ಲಿರಬಹುದು !
(ಐಎಎನ್‌ಎಸ್)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications