ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಅಧ್ಯಕ್ಷರಾಗಿ ತಮ್ಮನ್ನು ತಾವೇ ನೇಮಿಸಿಕೊಂಡ ಮುಷರ್ರಫ್‌

By Staff
|
Google Oneindia Kannada News

ಇಸ್ಲಮಾಬಾದ್‌ : ಪಾಕಿಸ್ತಾನದ ಮಿಲಿಟರಿ ಆಡಳಿತಾಧಿಕಾರಿ ಜನರಲ್‌ ಪರ್ವೇಜ್‌ ಮುಷರ್ರಫ್‌ ಬುಧವಾರ ಸಂಜೆ 4 ಗಂಟೆಗೆ ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಭಾರತದ ಪ್ರಧಾನಿ ವಾಜಪೇಯಿ ಅವರೊಂದಿಗಿನ ಶೃಂಗಸಭೆ ಸಂದರ್ಭದಲ್ಲಿ ದೇಶದ ಪರವಾಗಿ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಅವರು ಅಧ್ಯಕ್ಷರಾಗಲು ನಿರ್ಧರಿಸಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಈ ನಡುವೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ರಫಿಕ್‌ ತರಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು , ಅವರು ದೇಶವನ್ನು ತ್ಯಜಿಸುವ ಸಿದ್ಧತೆಯಲ್ಲಿದ್ದಾರೆ.

ಉರ್ದು ದೈನಿಕ ‘ಜಂಗ್‌’ ಹಾಗೂ ಅದರ ಸೋದರ ಪತ್ರಿಕೆ ಇಂಗ್ಲೀಷ್‌ನ ‘ದಿ ನ್ಯೂಸ್‌’ ಪತ್ರಿಕೆಗಳು ಮುಷರ್ರಫ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವಿವರಗಳನ್ನು ಪ್ರಕಟಿಸಿವೆ. ನೆರೆ ದೇಶದ ಪ್ರಧಾನಿಯಾಂದಿಗೆ ಮಾತುಕತೆ ನಡೆಸುವಾಗ ಸಮಾನ ಸಂವಿಧಾನತ್ಮಕ ಹಾಗೂ ನಾಗರಿಕ ಅಧಿಕಾರವನ್ನು ಹೊಂದುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪತ್ರಿಕೆಗಳು ಹೇಳಿವೆ.

ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ಇರ್ಷಾದ್‌ ಹಸನ್‌ ಖಾನ್‌ ಅವರು ಮುಷರ್ರಫ್‌ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 1999 ರ ಅಕ್ಟೋಬರ್‌ನಲ್ಲಿ ಅಧಿಕಾರ ಸ್ಥಾನ ಗ್ರಹಣ ಮಾಡಿದ ಮುಷರ್ರಫ್‌ ಪ್ರಸ್ತುತ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಿಕೊಂಡಿದ್ದಾರೆ. ಮುಷರ್ರಫ್‌ ಅವರು ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿ ತರಲು ಸಂವಿಧಾನ ತಜ್ಞ ಷರೀಫುದ್ದೀನ್‌ ಪಿರ್ಜಾದಾ ದುಡಿಯುತ್ತಿದ್ದಾರೆಂದು ಪತ್ರಿಕೆ ತಿಳಿಸಿದೆ.

ಮಿಲಿಟರಿ ಆಳ್ವಿಕೆ ಹೆಚ್ಚುಕಾಲ ಮುಂದುವರಿಯುವುದು ಕಷ್ಟ ಎನ್ನುವ ಹಿನ್ನೆಲೆಯಲ್ಲಿ ಮುಷರ್ರಫ್‌ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದಾರೆ ಎಂದೂ ಪತ್ರಿಕೆ ಹೇಳುತ್ತಿದೆ. ಪ್ರಸ್ತುತ ಮುಷರ್ರಫ್‌ ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ತಾವೇ ನೇಮಿಸಿಕೊಂಡಿರುವ ಬಗೆಗೆ ಪಾಕಿಸ್ತಾನದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X