ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ಹಕ್ಕು ಮಸೂದೆ- 2000. ಹಾಗಂದರೇನು ?

By Staff
|
Google Oneindia Kannada News

ಬೆಂಗಳೂರು : ಮಾಹಿತಿ ಹಕ್ಕು ಮಸೂದೆ- 2000ನ್ನು ಕರ್ನಾಟಕ ವಿಧಾನಸಭೆ ಜಾರಿಗೆ ತಂದು ತಿಂಗಳುಗಳೇ ಕಳೆದಿವೆ. ಇದರನ್ವಯ ಸಚಿವ ಸಂಪುಟದ ತೀರ್ಮಾನಗಳೂ ಸೇರಿದಂತೆ ಸರ್ಕಾರದ ಅಧಿಕೃತ ದಾಖಲೆಗಳ ಪ್ರತಿಯನ್ನು ಪ್ರತಿಯಾಬ್ಬ ನಾಗರಿಕನೂ ಪಡೆಯಬಹುದು. ಇದನ್ನು ಆಚರಣೆಗೆ ತರುವುದೆಂತು ಎಂಬುದರ ತರಪೇತಿ ಈಗ ಶುರುವಾಗಿದೆ.

ಸದ್ದು..ಚರ್ಚೆ ನಡೆಯುತ್ತಿದೆ : ಅಪರ ಮುಖ್ಯ ಕಾರ್ಯದರ್ಶಿ ಎ.ರವೀಂದ್ರ ನೇತೃತ್ವದಲ್ಲಿ ಒಂದು ಸಮಿತಿ ರಚಿತವಾಗಿದೆ. ಮಾಹಿತಿ, ಆದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾನೂನು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಐಟಿ ಕಾರ್ಯದರ್ಶಿಗಳು ಸಮಿತಿಯಲ್ಲಿದ್ದಾರೆ. ಆಂಗ್ಲ ಪತ್ರಿಕೆಯಾಂದಕ್ಕೆ ರವೀಂದ್ರ ಈ ವಿಷಯ ತಿಳಿಸಿದ್ದಾರೆ.

ಜನರಿಗಾಗೇ ಜಾರಿಗೆ ತಂದಿರುವ ಈ ಮಸೂದೆಯ ಬಗ್ಗೆ ಅವರಿಗೆ ತಿಳಿಸುವವರು ಯಾರು ? ಹೇಗೆ ? ಮಾಹಿತಿ ಕೋರಿ ಬಂದವರ ವಿವರ ಪಡೆಯುವುದೆಂತು ? ಹಾಗೆ ಮಾಹಿತಿ ಕೊಡುವ ಮೊದಲು ಆಯಾ ಅಧಿಕಾರಿಗಳು ವಹಿಸಬೇಕಾದ ಎಚ್ಚರಿಕೆಗಳೇನು? ಅಧಿಕಾರಯುತ ದಾಖಲೆಗಳ ಮೂಲ ಪ್ರತಿಗಳನ್ನು ಯಾವ ರೀತಿ ಕಾಪಿಡಬೇಕು? ಮೊದಲಾದ ವಿಷಯಗಳೇ ಸಮಿತಿಯ ಚರ್ಚೆಯ ವಸ್ತುಗಳು.

ಇಂತಿಷ್ಟು ದಿನಗಳಲ್ಲಿ ಹೀಗೇ ಮಾಡ್ತೇವೆ ಅಂತ ಹೇಳಬೇಕು
ಒಂದು ನಿಗಮ ಅಥವಾ ಇಲಾಖೆ ತನ್ನ ಕಾರ್ಯ ವ್ಯಾಪ್ತಿಯನ್ನು ಇಂಚಿಂಚೂ ಮನಗಂಡು, ತನ್ನ ಅಸ್ಥಿತ್ವಕ್ಕೆ ತಕ್ಕ ಕೆಲಸ ಮಾಡಬೇಕು. ಜನರಿಗೆ ತಾನು ಏನು ಹೇಳುತ್ತದೋ ಅದನ್ನು ಕೊಡಬೇಕು. ಇದಕ್ಕೆ ಪೂರಕವಾದ ದಾಖಲೆಗಳನ್ನೂ ಇಡಬೇಕು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಹೊರತುಪಡಿಸಿ, ಬಹುತೇಕ ಇಲಾಖೆಗಳು ಇಂತಿಷ್ಟು ಕಾಲದಲ್ಲಿ ಇಷ್ಟು ಕೆಲಸ ಮಾಡುತ್ತೇವೆ ಅಂತ ಸ್ಪಷ್ಟವಾದ ಕಾರ್ಯಸೂಚಿಯನ್ನು ಗೊತ್ತುಪಡಿಸಿಲ್ಲ. ನಾವು ನಿರೀಕ್ಷೆಯಿತ್ತಿರುವುದೂ ಇಂಥಾ ಶಿಸ್ತನ್ನು ಎನ್ನುತ್ತಾರೆ ರವೀಂದ್ರ.

ಜನರು ಮಾಹಿತಿ ಪಡೆಯಲು ಯಾವ ರೀತಿ ಅರ್ಜಿ ಹಾಕಬೇಕು? ಎಷ್ಟು ಶುಲ್ಕ ಕಟ್ಟಬೇಕು ? ಎಂಬ ಬಗೆಗೆ ಚರ್ಚೆ ನಡೆಯುತ್ತಿದೆ. ಜೂನ್‌ 20ರಂದು ಕೆಲವು ಸರ್ಕಾರೇತರ ಸಂಸ್ಥೆಗಳೊಡನೆ ಈ ಬಗ್ಗೆ ಮಾತುಕತೆ ಕಾರ್ಯಕ್ರಮವನ್ನೂ ಆಯೋಜಿಸಿದ್ದೇವೆ ಎಂದು ರವೀಂದ್ರ ವಿವರಿಸಿದರು.

ಈ ಅನಕ್ಷರಸ್ಥರ ನಡುವೆ ಈ-ಆಡಳಿತ ಹೇಗೆ ಬಂದೀತು ?
ಭಾರತದ ಐಟಿ ರಾಜ್ಯ ಈ ಹೊಸ ಮಸೂದೆಯನ್ನೇನೋ ಜಾರಿಗೆ ತಂದಿದೆ. ಆದರೆ ಇಂಟರ್ನೆಟ್‌ ಅಥವಾ ಇ- ಮೇಲ್‌ ಮೂಲಕ ಈ ಬಗ್ಗೆ ಮಾಹಿತಿ ಹೆಕ್ಕಬಲ್ಲ ಇ- ಅಕ್ಷರಸ್ಥರ ಪ್ರಮಾಣವೆಷ್ಟು? ಖುದ್ದು ಮುಖ್ಯಮಂತ್ರಿ ಕೃಷ್ಣ ಅವರಿಗೇ ಗೊತ್ತಿಲ್ಲವೇನೋ. ಸರ್ಕಾರಿ ಅಧಿಕಾರಿಗಳಿಗೇ ಕಂಪ್ಯೂಟರ್‌ ಆಫ್‌/ಆನ್‌ ಮಾಡುವುದು ಹೇಗೆ ಎಂಬ ತರಪೇತಿ ನೀಡುವಿಕೆ ಇನ್ನೂ ಮುಂದುವರೆದಿದೆ. ಇನ್ನು ಸಾಮಾನ್ಯ ನಾಗರಿಕರಿಗೆ ಈ ಬಗ್ಗೆ ಅರಿವು ಎಷ್ಟರ ಮಟ್ಟಿಗಿದೆ?

ಭೂದಾಖಲೆಗಳನ್ನು ಕಂಪ್ಯೂಟರ್‌ಗೆ ತುಂಬಿಸಿರುವ ಸರ್ಕಾರ ಅದನ್ನು ಪಡೆವುದು ಹೇಗೆ ಅಂತ ಜನರಿಗೆ ತಿಳಿಸಲು ಇನ್ನೊಂದು ಕಾರ್ಯಕ್ರಮ ಆಯೋಜಿಸಬೇಕಾದ ಪರಿಸ್ಥಿತಿ ನಮ್ಮಲ್ಲಿ. ಇಂಥಾದರಲ್ಲೂ ಇನ್ನು 6 ತಿಂಗಳೊಳಗಾಗಿ ಇ- ಆಡಳಿತ ಜಾರಿಗೆ ಬರುತ್ತದೆಂಬ ನಂಬುಗೆ ರವೀಂದ್ರ ಅವರದು. ಇದನ್ನು ಹುಂಬತನ ಅನ್ನುವುದೋ ಏನನ್ನುವುದೋ? ನೀವೇ ಹೇಳಿ.

(ಇನ್ಫೋ ವಾರ್ತೆ)

What do you think about this article?

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X