ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್‌ ಆಗಿ ಕಾಂಗ್ರೆಸ್‌ನ ಫಿರ್ದೋಸ್‌

By Staff
|
Google Oneindia Kannada News

ಹುಬ್ಬಳ್ಳಿ : ಅವಳಿ ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಯುವ ಸದಸ್ಯ ಫಿರ್ದೋಸ್‌ ಕೊಣ್ಣೂರ ಮೇಯರ್‌ ಸ್ಥಾನಕ್ಕೆ ಆಯ್ಕೆಯಾಗಿದ್ದರೆ, ಜಾತ್ಯತೀತ ಜನತಾ ದಳದ ಅಭ್ಯರ್ಥಿ ಧಾರವಾಡದ ಸುನೀಲ ಪಾಟೀಲ್‌ ಉಪಮೇಯರ್‌ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಬಿಜೆಪಿಯ ರಂಗಾ ಬುದ್ದಿ ಮತ್ತು ಕಾಂಗ್ರೆಸ್‌ನ ಫಿರ್ದೋಸ್‌ ಕೊಣ್ಣೂರ ನಡುವೆ ಏರ್ಪಟ್ಟ ಹಣಾಹಣಿಯಲ್ಲಿ ಒಟ್ಟು 73 ಸದಸ್ಯರ ಪೈಕಿ 44 ಮಂದಿಯ ಮತ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿತ್ತು. ಉಪಮೇಯರ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಸುನೀಲ ಪಾಟೀಲ ಎದುರಾಳಿ ಬಿಜೆಪಿಯ ಮಲ್ಲಿಕಾರ್ಜುನ ಅವರನ್ನು 19 ಮತಗಳ ಅಂತರದಿಂದ ಸೋಲಿಸಿದರು.

ಸಂಯುಕ್ತ ಜನತಾದಳದ ಮೂವರು ಸದಸ್ಯರು ಹಾಗೂ ಈ ಪಕ್ಷದ ಬೆಂಬಲಿತ ಪಕ್ಷೇತರ ಸದಸ್ಯರೊಬ್ಬರು ಮತ ಹಾಕದೇ ತಟಸ್ಥ ರಾಗಿ ಉಳಿದರು. ಕಾಂಗ್ರೆಸ್‌ ಸದಸ್ಯೆ ಗೌರಿ ಅಗ್ನಿಹೋತ್ರಿ ಅವರ ಮತ ನ್ಯಾಯಾಲಯದ ಆದೇಶದಂತೆ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

ಮೇಯರ್‌ ಆಗಿ ಆಯ್ಕೆಯಾದ ಫಿರ್ದೋಸ್‌ ಕೊಣ್ಣೂರ ಅವರು ರಸ್ತೆ ಸುಧಾರಣೆ, ಒಳಚರಂಡಿ ಸೇರಿದಂತೆ ಅವಳಿ ನಗರದ ಸೌಂದರ್ಯದ ಕಡೆಗೆ ಹೆಚ್ಚಿನ ಮಹತ್ವ ಕೊಡುವುದಾಗಿ ಪತ್ರಕರ್ತರ ಬಳಿ ಮಾತನಾಡುತ್ತಾ ಹೇಳಿದರು. ಹಿಂದಿನ ಮೇಯರ್‌ ಅವರಂತೆ ಸನ್ಮಾನಗಳಲ್ಲಿ ಕಾಲ ಕಳೆಯದೆ ಪ್ರತಿ ವಾರ್ಡಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡುವುದಲ್ಲದೆ, ಕುಂದುಕೊರತೆ ಪರಿಹಾರಕ್ಕೆ ವಾರ್ಡಿಗೊಂದು ಕಚೇರಿ ತೆರೆಯಲಾಗುವುದು ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X