ಚಿಕಾಗೊ ಲೊಯಾಲ್ಲಾ ವಿವಿ ಜೊತೆ ಅಲೋಷಿಯಸ್ ಕಾಲೇಜು ಒಪ್ಪಂದ
ಮಂಗಳೂರು : ಸೈಂಟ್ ಅಲೋಶಿಯಸ್ ಇನ್‌ಸ್ಟಿಟ್ಯೂಷನ್ ಆಫ್ ಕಂಪ್ಯೂಟರ್ ಸಾಯನ್ಸ್ (ಎಐಸಿಎಸ್) ಕಾಲೇಜು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಚಿಕಾಗೋದ ಲೊಯೆಲ್ಲಾ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ.
ಬಿಸಿನೆಸ್ ಇನ್ಫರ್ಮೇಶನ್ ಸಿಸ್ಟಮ್ಸ್‌ನಲ್ಲಿ ಎಂ ಎಸ್ ಕೋರ್ಸ್ ಆರಂಭಿಸುವ ಉದ್ದೇಶದಿಂದ ಈ ಒಪ್ಪಂದ ಜಾರಿಗೆ ಬರಲಿದೆ. ಮಾಹಿತಿ ತಂತ್ರಜ್ಞಾನ ಶಿಕ್ಷಣದಲ್ಲಿ ಹೆಚ್ಚಿನ ಆಯ್ಕೆಗಳನ್ನು ವಿದ್ಯಾರ್ಥಿಗಳ ಮುಂದಿಡಲು ಮುಂದಿನ ವರ್ಷದಿಂದ ಕಂಪ್ಯೂಟರ್ ಆಪ್ಲಿಕೇಷನ್‌ನಲ್ಲಿ ಹೆಚ್ಚುವರಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಾಗುವುದು.
ಪ್ರಸ್ತುತ, ಕಾಲೇಜಿನ ಮಾಹಿತಿ ತಂತ್ರಜ್ಞಾನ ಭವನ ನಿರ್ಮಾಣ ಹಂತದಲ್ಲಿದೆ. ಎಐಸಿಎಸ್‌ನ ನಿರ್ದೇಶಕ ಡೆನ್ಸಿಲ್ ಲೋಬೋ ಹೇಳುವ ಪ್ರಕಾರ ಕಂಪ್ಯೂಟರ್ ಕ್ಷೇತ್ರದ ಮಲ್ಟಿ ಮೀಡಿಯಾ ಅಪ್ಲಿಕೇಷನ್ಸ್ , ಆಟೋಕ್ಯಾಡ್ ಕೋರ್ಸ್‌ಗಳಲ್ಲದೆ, ಬಿಸಿನೆಸ್ ಕಂಪ್ಯೂಟಿಂಗ್ ಆಫೀಸ್ ಆಟೋಮೇಷನ್, ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣಾ ಕೋರ್ಸ್‌ಗಳನ್ನು ಸಂಸ್ಥೆ ಒದಗಿಸಲಿದೆ.
ಕಳೆದ ವರ್ಷವಷ್ಟೇ ಎಂಸಿಎ ಕೋರ್ಸ್‌ನ್ನು ಆರಂಭಿಸಿದ ಕಾಲೇಜು, ಮಂಗಳೂರು ವಿಶ್ವ ವಿದ್ಯಾಲಯ ಮತ್ತು ಎಐಸಿಟಿಇ ಯಿಂದ ಮಾನ್ಯತೆ ಪಡೆದಿದೆ. ಈ ಬಾರಿ ಜೂನ್ 23 ರಂದು ಎಂಸಿಎಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಸ್ನಾತಕ ಪದವಿ ತರಗತಿಗಳನ್ನೂ ಆರಂಭಿಸಲಾಗುವುದು ಎಂದು ಡೆನ್ಸಿನ್ ಲೋಬೋ ಹೇಳಿದ್ದಾರೆ. ಕಾಲೇಜಿನ ಕುರಿತ ಯಾವುದೇ ಮಾಹಿತಿಗಳು www.staloysiuscollege.net ವೆಬ್‌ಸೈಟಿನಲ್ಲಿ ಲಭ್ಯವಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications