ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಂದು ಮಾರುಕಟ್ಟೆಗೆ ಹೊಸ ಸ್ಕೂಟರ್‌ ‘ಹೋಂಡಾ ಆ್ಯಕ್ಟಿವಾ’

By Staff
|
Google Oneindia Kannada News

ಬೆಂಗಳೂರು : ಹೋಂಡಾ ಮೋಟಾರ್‌ ಸೈಕಲ್‌ ಅಂಡ್‌ ಸ್ಕೂಟರ್‌ ಇಂಡಿಯಾ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ಸ್ಕೂಟರೊಂದನ್ನು ತರುತ್ತಿದೆ. ಅದರ ಹೆಸರು ಹೋಂಡಾ ಆ್ಯಕ್ಟಿವಾ.

ಜಪಾನಿನ ಹೋಂಡಾ ಕಂಪನಿಯ ಅಂಗ ಸಂಸ್ಥೆಯಾದ ಹೋಂಡಾ ಮೋಟಾರ್‌ ಸೈಕಲ್‌ ಅಂಡ್‌ ಸ್ಕೂಟರ್‌ ಇಂಡಿಯಾದ ಈ ಹೊಸ ಸ್ಕೂಟರ್‌ 102 ಸಿಸಿ ಎಂಜಿನ್‌ ಹೊಂದಿರುತ್ತದೆ. ಲೀಟರ್‌ಗೆ 50 ಕಿ.ಮೀ. ಮೈಲೇಜ್‌ ಕೊಡುವ ಇದರ 97 ಪ್ರತಿಶತ ಬಿಡಿಭಾಗಗಳು ಸ್ವದೇಶೀ ಉತ್ಪನ್ನಗಳು. ಮೆಕ್ಸಿಕೋ, ಟರ್ಕಿ ಮತ್ತು ನೇಪಾಳಗಳಿಗೂ ಸ್ಕೂಟರನ್ನು ರಫ್ತು ಮಾಡಲಾಗುವುದು.

ದಕ್ಷಿಣ ಭಾರತದಲ್ಲಿ ಜುಲೈ 1ರಂದು, ಪಶ್ಚಿಮದಲ್ಲಿ ಜುಲೈ 21 ಹಾಗೂ ಉತ್ತರದಲ್ಲಿ ಆಗಸ್ಟ್‌ 17ರಂದು ಈ ಸ್ಕೂಟರ್‌ ರಸ್ತೆಗಿಳಿಯಲಿದೆ. 200 ಕೋಟಿ ರುಪಾಯಿ ಬಂಡವಾಳ ಹೂಡಿರುವ ಕಂಪನಿ ಮೊದಲ ವರ್ಷ ಭಾರತದಲ್ಲಿ 40 ಸಾವಿರ ಸ್ಕೂಟರ್‌ ಮಾರಾಟದ ಗುರಿ ಹೊಂದಿದೆ ಎಂದು ಹೋಂಡಾ ಕಂಪನಿ ಅಧ್ಯಕ್ಷ ಹರುವೋ ತಕಿಗುಚಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸ ಸ್ಕೂಟರ್‌ನ ಆನ್‌ ರೋಡ್‌ ದರ ಇಂತಿದೆ....

ಬೆಂಗಳೂರಲ್ಲಿ- 38,684 ರುಪಾಯಿ
ಮಂಗಳೂರಲ್ಲಿ- 38,821 ರುಪಾಯಿ
ಮೈಸೂರಲ್ಲಿ- 38,746 ರುಪಾಯಿ

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X