ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಅಧ್ಯಕ್ಷ ಬುಷ್‌ ಮುಂದಿನ ವರ್ಷ ಭಾರತಕ್ಕೆ ಬರುತ್ತಾರೆ

By Staff
|
Google Oneindia Kannada News

George W. Bushವಾಷಿಂಗ್ಟನ್‌ : ಭಾರತ ಹಾಗೂ ಅಮೆರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟನಲ್ಲಿ ಅಮೆರಿಕೆಯ ಅಧ್ಯಕ್ಷ ಜಾರ್ಜ್‌ ಬುಷ್‌ ಅವರು ಮುಂದಿನ ವರ್ಷದ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಬುಷ್‌ ಆಡಳಿತ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ - ಭಾರತ ಬಾಂಧವ್ಯದ ಹೊಸ ಶಕೆ ಎಂಬ ಸಮಾವೇಶದಲ್ಲಿ ಮಾತನಾಡುತ್ತಿದ್ದ ನ್ಯಾಷನಲ್‌ ಸೆಕ್ಯೂರಿಟಿ ಕೌನ್ಸಿಲ್‌ನ ಏಷ್ಯದ ನಿರ್ದೇಶಕ ಟಾರ್ಕಲ್‌ ಪ್ಯಾಟರ್‌ಸನ್‌ ಹಾಗೂ ರಕ್ಷಣಾ ಇಲಾಖೆಯ ಡೋವ್‌ ಝಕೀಮ್‌ ಅವರು ಈ ವಿಷಯ ತಿಳಿಸಿದ್ದಾರೆ.

ಬುಷ್‌ ಅವರು 2002ನೇ ಇಸವಿಯ ಆದಿಯಲ್ಲೇ ಭಾರತಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಸಮಾವೇಶದಲ್ಲಿ ಪ್ಯಾಟರ್‌ಸನ್‌ ತಿಳಿಸಿದರು. ಫೆಡರೇಷನ್‌ ಆಫ್‌ ಇಂಡಿಯನ್‌ ಛೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರೀ ಹಾಗೂ ಇಂಡಿಯನ್‌ ಅಮೆರಿಕನ್‌ ಫೋರಂ ಫಾರ್‌ ಪೊಲೀಟಿಕಲ್‌ ಎಜುಕೇಷನ್‌ ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಭಾರತವು - ರಷ್ಯಾದೊಂದಿಗೆ ಬೆಸೆದುಕೊಂಡಿದೆ ಎಂದು ಎಣಿಸಿದ್ದ ಶೀತಲ ಸಮರದ ಕಾಲ ಅಳಿದ ನಂತರ ಭಾರತ - ಅಮೆರಿಕಾ ಬಾಂಧವ್ಯ ಉತ್ತಮವಾಗಿದೆ. ಕಳೆದ ವರ್ಷ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭೇಟಿಯ ನಂತರ ಎರಡೂ ರಾಷ್ಟ್ರಗಳ ಸಂಬಂಧ ಬಲಗೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವರ್ಧನೆಗೆ ಈಗ ಯಾವುದೇ ತೊಡಕಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ದಕ್ಷಿಣ ಏಷ್ಯಾ ಭೂ ಭಾಗವು ಸದಾ ಒಂದಿಲ್ಲೊಂದು ತೊಡಕಿನಿಂದ ಕೂಡಿದ ಪ್ರದೇಶ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ, ನಮ್ಮ ಹಾಲಿ ಅಧ್ಯಕ್ಷರ ಯೋಚನಾ ಲಹರಿಯೇ ಬೇರೆ. ಅವರು ಈ ವಿಷಯದ ಬಗ್ಗೆ ಚಿಂತಿಸುವ ಬಗೆಯೇ ಬೇರೆ. ಈ ಭೂಭಾಗದಲ್ಲಿನ ಬೆಳವಣಿಗೆ ಹಾಗೂ ಪ್ರಗತಿಯ ಬಗ್ಗೆ ಅವರು ಯೋಚಿಸುತ್ತಿದ್ದಾರೆ ಎಂದೂ ಅವರು ಹೇಳಿದರು.

ಪ್ರಸ್ತುತ ಭಾರತ ಹಾಗೂ ಅಮೆರಿಕದ ಬಾಂಧವ್ಯ ಉತ್ತಮ ಹಾದಿಯಲ್ಲಿದೆ ಎಂದು ಹೇಳಿದ ಝಕೀಮ್‌ ಅವರು, ರೇಗನ್‌ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಪಾಕಿಸ್ತಾನವು ಅಮೆರಿಕದ ಮಿತ್ರ ಹಾಗೂ ಭಾರತವು ರಷ್ಯದ ಗೆಳೆಯ ಎನ್ನುವ ಸ್ಥಿತಿ ಇತ್ತು. ಆದರೆ, ನಾವು ವಿಶ್ವವನ್ನು ನೋಡುವ ಕೋನವೇ ಬೇರೆ. ಈಗ ಎಲ್ಲ ಬದಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಅಮೆರಿಕಾ ಸಂಬಂಧ ಬಲಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕದಲ್ಲಿನ ಭಾರತದ ರಾಯಭಾರಿ ಲಲಿತ್‌ ಮಾನ್‌ಸಿಂಗ್‌ ಅವರು ಮಾತನಾಡಿ ಈಗ ಹೊಸ ಅಧ್ಯಾಯವೇ ಆರಂಭವಾಗಿದೆ. ನಾವು ಈಗ ನಮ್ಮನ್ನು ಯಾವುದು ಹೆಚ್ಚು ಬೆಸೆಯುತ್ತದೆ ಹಾಗೂ ಯಾವ ವಿಚಾರ ನಮ್ಮನ್ನು ಬೇರ್ಪಡಿಸುತ್ತದೆ ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ಸಂಬಂಧ ವರ್ಧನೆಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ ಎಂದರು.

(ಐ.ಎ.ಎನ್‌.ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X