‘ಉಮಾಲಿಯಾ-5’ ಬಾರ್ಜ್‌ನಿಂದ ಸಮುದ್ರಸೇರದ ಮಳೆ ನೀರು
ಪಡುಬಿದ್ರಿ : ಅತ್ತ ಕಡಲು ಕೊರೆತದ ಭಯವಿದ್ದರೆ, ಇತ್ತ ಕೂಲಿಂಗ್ ಪ್ಲಾಂಟ್ ಬಾರ್ಜ್ ಸಮುದ್ರ ದಂಡೆಯಲ್ಲಿ ಠಿಕಾಣಿ ಹೂಡಿದ್ದು, ಪಡುಬಿದ್ರಿಯ ರೈತರನ್ನು ಇಕ್ಕಳದಲ್ಲಿ ಅರೆಯುತ್ತಿದೆ.
ಕಳೆದ ತಿಂಗಳ 23ರಂದು ಯೂವುದೇ ಪೂರ್ವ ಸೂಚನೆ ಇಲ್ಲದೆ ಅನಿರೀಕ್ಷಿತವಾಗಿ ಸಮುದ್ರ ದಂಡೆಗೆ ಬಂದು ತಂಗಿರುವ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಕೂಲಿಂಗ್ ಪ್ಲಾಂಟ್ ‘ಉಮಾಲಿಯಾ- 5’ ಬಾರ್ಜ್, ಮಳೆ ನೀರನ್ನು ಸಮುದ್ರಕ್ಕೆ ಸೇರಲು ಬಿಡುತ್ತಿಲ್ಲ . ಇದರಿಂದ ಪಡುಬಿದ್ರಿಯ ಭತ್ತದ ಗದ್ದೆಗಳು ಮಳೆ ಹೆಚ್ಚಾದಂತೆಲ್ಲಾ ನೀರು ತುಂಬಿಕೊಳ್ಳುತ್ತಿವೆ.
ಮಳೆಗಾಲ ಇನ್ನೂ ಆರಂಭದ ಹಂತದಲ್ಲಿ ಇರುವುದರಿಂದ ಸಮಸ್ಯೆ ಇನ್ನೂ ಗಂಭೀರವಾಗಿಲ್ಲ . ಆದರೆ ಮುಂಬೈ ಸೇರಬೇಕಿದ್ದ ಬಾರ್ಜ್ ಸಮುದ್ರ ದಡ ಸೇರಿ 23 ದಿನಗಳಾದರೂ ಅಲ್ಲಿಂದ ಕದಲದೇ ಇರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಯಂತ್ರಾಗಾರದ ಸಾಗಾಣಿಕೆ ಹೊಣೆ ಹೊತ್ತಿರುವ ರೇಷಮ್ ಸಿಂಘ್ ಕಂಪೆನಿ ವಕ್ತಾರ ಕ್ಯಾಪ್ಟನ್ ಸವಾರಾ ಪ್ರಕಾರ, ಬಾರ್ಜ್‌ನ್ನು ಒಂದು ವಾರದ ಹಿಂದೆಯೇ ಟಗ್ ಮೂಲಕ ಎಳೆಯ ಬೇಕಿತ್ತು. ಆದರೆ ಬಾರ್ಜ್‌ನ್ನು ಅಲ್ಲಿಂದ ಸ್ಥಳಾಂತರಿಸುವ ಕುರಿತು ಯಾವುದೇ ಕೆಲಸ ನಡೆಯುತ್ತಿಲ್ಲ.
ಈ ನಡುವೆ ಪಡುಬಿದ್ರಿಯಲ್ಲಿ ಒನಕೆ ಧಾರೆ ಸುರಿಯುತ್ತಿದೆ. ಗಾಳಿ ಮಳೆಯಿಂದಾಗಿ ಪಡುಬಿದ್ರಿ ಕಂಚಿನಡ್ಕದ ಶಕುಂತಳಾ ಎಂಬುವರ ಮನೆ ಕುಸಿದು ಬಿದ್ದಿದೆ. ಇಕ್ಬಾಲ್ ಎಂಬುವರ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications