ಗುಲ್ಬರ್ಗಾದಲ್ಲಿ ಬಾರ್ ಉದ್ಘಾಟಿಸಿದ ಸ್ವಾಮೀಜಿ ತರಾಟೆಗೆ !
ಗುಲ್ಬರ್ಗಾ : ಸ್ವಾಮೀಜಿಗಳು ವಿದ್ಯಾಸಂಸ್ಥೆಗಳನ್ನ, ಸೇತುವೆಗಳನ್ನ, ಧಾರ್ಮಿಕ ಸಂಸ್ಥೆಗಳ ಕಟ್ಟಡಗಳನ್ನ ಕೊನೆಗೆ ಕಂಪ್ಯೂಟರ್ ಕೇಂದ್ರವನ್ನ ಉದ್ಘಾಟನೆ ಮಾಡಿರುವುದನ್ನು ಕೇಳಿದ್ದೇವೆ. ಹೊಸತೆಂದರೆ- ಬಡದಾಳದ ಚೆನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಬಾರೊಂದನ್ನು ಉದ್ಘಾಟಿಸಿದ್ದಾರೆ!
ನಗರದ ಹೊರ ವಲಯದಲ್ಲಿ ಕ್ರಿಸ್ಟಲ್ ಎಂಬ ಹೆಸರಿನ ಬಾರೊಂದನ್ನು ಕಳೆದ ತಿಂಗಳು ಸ್ವಾಮೀಜಿ ಉದ್ಘಾಟಿಸಿದ್ದರು. ಸತ್ಯ, ಧರ್ಮ, ಅಹಿಂಸೆ, ಆಧ್ಯಾತ್ಮಿಕತೆ, ನೈತಿಕತೆ ಕುರಿತಾದ ಅಂಶಗಳನ್ನು ಸಾರಬೇಕಾದ ಸ್ವಾಮೀಜಿ ಬಾರ್ ಉದ್ಘಾಟಿಸೋದು ಅಂದರೆ ಎಂಥಾ ಅನಾಚಾರ ? ಇಂಥಾ ಢೋಂಗಿ ಸ್ವಾಮಿಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಹಾಗೂ ಸಂಯುಕ್ತ ಜನತಾ ದಳದ ನಾಯಕ ಬಿ.ಆರ್.ಪಾಟೀಲ್ ಕರೆ ಕೊಟ್ಟಿದ್ದಾರೆ.
ಚೆನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಬಾರ್ ಉದ್ಘಾಟಿಸಿರುವುದರ ಕುರಿತು ಅಖಿಲ ಬಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದೇನೆ. ಇಂಥಾ ಸ್ವಾಮೀಜಿಗಳ ಬಗ್ಗೆ ಬಗ್ಗೆ ಜನತೆ ಎಚ್ಚರದಿಂದಿರಬೇಕು ಎಂದರು.
ಮೇ 31ರಂದು ಕ್ರಿಸ್ಟಲ್ ಬಾರನ್ನು ಉದ್ಘಾಟಿಸಲಾಗಿತ್ತು. ಅಂದಹಾಗೆ, ಆ ಸಮಾರಂಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಹಾಜರಿದ್ದರು !
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications