Get Updates
Get notified of breaking news, exclusive insights, and must-see stories!

ನಂಜಾವಧೂತ ಸ್ವಾಮಿ ದಶಮಾನೋತ್ಸವ ಹಾಗೂ ಮಾಯಾ ಬಜಾರ್‌ ಮದುವೆ ಮೇಳ

* ಹ.ಚ. ನಟೇಶ್‌ಬಾಬು

ಶಿರಾ : ಸ್ವಾಮೀಜಿಗಳ ದಶಮಾನೋತ್ಸವ, ರಜತ ಮಹೋತ್ಸವಗಳ ಜೊತೆಗೇ ಸ್ವಾಮೀಜಿಯನ್ನು ಮೆರೆಸುವ ತುಲಾಭಾರ, ಅಡ್ಡ ಪಲ್ಲಕ್ಕಿ ಉತ್ಸವಗಳು ಹಾಗೂ ಅವುಗಳ ಆಡಂಬರ ನೆನಪಾಗುತ್ತದಲ್ಲವೇ. ಇಲ್ಲಿನದು ಸಾಮಾನ್ಯವಾದ ನಮ್ಮ ನಿಮ್ಮ ಪರಿಕಲ್ಪನೆಗೆ ಹೊರತಾದ ಕಾರ್ಯಕ್ರಮ. ಧರ್ಮಗುರು ಜನಮುಖಿಯಾಗುತ್ತಿರುವ ಹಾಗೂ ಆಧುನಿಕ ಸಂದರ್ಭಕ್ಕೆ ಮಡಿವಂತಿಕೆ ತೊರೆದು ಸ್ಪಂದಿಸುತ್ತಿರುವ ಉದಾಹರಣೆ.

ವಿಷಯ ಇಷ್ಟೇ- ಶ್ರೀ ನಂಜಾವಧೂತ ಸ್ವಾಮೀಜಿ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಶ್ರೀಮಠದ ಪೀಠಾಧ್ಯಕ್ಷರಾಗಿ ಹ ತ್ತು ವರ್ಷಗಳು ತುಂಬಿದ ನೆನಪಿಗಾಗಿ ದಶಮಾನೋತ್ಸವ ಕಾರ್ಯಕ್ರಮವನ್ನು ಜೂನ್‌ 17 ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

20 ಲಕ್ಷ ರುಪಾಯಿ ವೆಚ್ಚದಲ್ಲಿ 500 ವಿದ್ಯಾರ್ಥಿಗಳಿಗೆ ಅನುಕೂಲವಿರುವ ಉಚಿತ ವಿದ್ಯಾರ್ಥಿ ನಿಲಯ ಕಟ್ಟಡ, ಕಂಪ್ಯೂಟರ್‌ ಕೇಂದ್ರ ಹಾಗೂ ಗ್ರಂಥಾಲಯ ಮತ್ತು ವಾಚನಾಲಯಗಳನ್ನು ದಶಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗುವುದು. ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲೆ ರಮಾದೇವಿ ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ 25 ಲಕ್ಷ ರುಪಾಯಿ ಅಂದಾಜಿನಲ್ಲಿ ನಿರ್ಮಾಣಗೊಳ್ಳಲಿರುವ ಪ್ರಾರ್ಥನಾ ಮಂದಿರ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡದ ಶಂಕುಸ್ಥಾಪನೆಯೂ ನಡೆಯಲಿದೆ. ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣ ಶಿಕ್ಷಣ ಕ್ಷೇತ್ರಗಳಿಗೆ ಒತ್ತು ಕೊಡುವ ಮೂಲಕ ಸಮಾಜದಲ್ಲಿ ಸಮಾನತೆ ಸಾಧ್ಯ ಎನ್ನುವ ನಂಜಾವಧೂತ ಸ್ವಾಮೀಜಿ, ಗ್ರಾಮೀಣ ವಿದ್ಯಾರ್ಥಿಗಳಿಗೂ ಕಂಪ್ಯೂಟರ್‌ ಶಿಕ್ಷಣ ಕಲಿಕೆ ಅವಕಾಶ ಕಲ್ಪಿಸಲಿಕ್ಕಾಗಿ ಕಂಪ್ಯೂಟರ್‌ ಕೇಂದ್ರ ತೆರೆದಿದ್ದಾರೆ.

ವಿವಾಹ ಮೇಳವಿದು ಮಾಯಾ ಬಜಾರ್‌ ಹೋಲುತಿಹುದು
ದಶಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ಸುಮಾರು 300 ಜೋಡಿಗಳು ಭಾಗವಹಿಸುತ್ತಿವೆ. ಈ ಪೈಕಿ 25 ಜೋಡಿಗಳು ಆಂಧ್ರ ಪ್ರದೇಶಕ್ಕೆ ಸೇರಿರುವುದು ವಿಶೇಷ. ರಾಜ್ಯದಲ್ಲಿ ನಡೆದಿರುವ ಅತ್ಯಂತ ದೊಡ್ಡ ಸಾಮೂಹಿಕ ವಿವಾಹಗಳಲ್ಲೊಂದು ಎನ್ನುವ ಹೆಗ್ಗಳಿಕೆಯನ್ನು ಈ ಮೇಳ ಹೊಂದಿದೆ.

ಗಿಡ ನೆಡುವ ಕಾರ್ಯಕ್ರಮ : ರಾಜ್ಯದಲ್ಲಿ 5 ಕೋಟಿ ಮರಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕರ್ನಾಟಕ ವನ ಸಂವರ್ಧಕ ಟ್ರಸ್ಟ್‌ನ ಯೋಜನೆ, ತಾಲ್ಲೂಕಿನಲ್ಲಿ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಜಾರಿಯಾಗುವುದು. ದಶಮಾನೋತ್ಸವ ಸಮಾರಂಭದಲ್ಲಿ ಗಿಡ ನೆಡುವ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆ ನಡೆಯಲಿದೆ. ಮಠಕ್ಕೆ ಸೇರಿದ 100 ಎಕರೆ ಜಮೀನು ಸೇರಿದಂತೆ ತಾಲ್ಲೂಕಿನ 750 ಎಕರೆ ಪ್ರದೇಶದಲ್ಲಿ ಗಿಡ ನೆಡಲಾಗುವುದು ಎಂದು ಕನ್ನಡ.ಇಂಡಿಯಾಇನ್ಫೋ.ಕಾಂಗೆ ಸ್ವಾಮೀಜಿ ತಿಳಿಸಿದ್ದಾರೆ.

ಸಚಿವರು- ಶಾಸಕರ ಹಿಂಡು : ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್‌, ರಾಜ್ಯ ಸರ್ಕಾರದ ಸಚಿವರುಗಳಾದ ಎಚ್‌.ಕೆ. ಪಾಟೀಲ್‌, ಶ್ರೀಕಂಠಯ್ಯ, ಡಾ.ಜಿ. ಪರಮೇಶ್ವರ್‌, ಟಿ.ಬಿ.ಜಯಚಂದ್ರ, ಸಂಸದರಾದ ಅಂಬರೀಷ್‌, ಶಶಿಕುಮಾರ್‌, ಬಸವರಾಜು ಹಾಗೂ ಆರ್‌.ಎಲ್‌. ಜಾಲಪ್ಪ , ಸಿನಿಮಾ ನಟ ದೇವರಾಜ್‌, ಮಾಜಿ ಸಚಿವ ಬಿ. ಸತ್ಯನಾರಾಯಣ ಹಾಗೂ ವಿವಿಧ ಶಾಸಕರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಪ್ರಮುಖರು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ಥಳೀಯ ಶಾಸಕ ರಂಗನಾಥಪ್ಪ ಎಲ್ಲ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಪಿ. ಮೂಡ್ಲೇಗೌಡ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+