ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನನ್ನ ಭಾರತ ಪ್ರವಾಸ ಇತಿಹಾಸ ಬದಲಿಸುತ್ತದೆ’- ಮುಷರ್ರಫ್‌

By Staff
|
Google Oneindia Kannada News

ಇಸ್ಲಮಾಬಾದ್‌ : ತಾವು ಮುಕ್ತ ಮನಸ್ಸಿನಿಂದ ಭಾರತಕ್ಕೆ ತೆರಳುತ್ತಿದ್ದು , ಈ ಭೇಟಿ ಇತಿಹಾಸವನ್ನು ಬದಲಿಸುತ್ತದೆಂದು ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್‌ ಪವ್ರೇಜ್‌ ಮುಷರ್ರಫ್‌ ತಮ್ಮ ಮೂರು ದಿನಗಳ ಭಾರತ ಪ್ರವಾಸವನ್ನು ಶುಕ್ರವಾರ ರಾತ್ರಿ ಬಣ್ಣಿಸಿಕೊಂಡಿದ್ದಾರೆ. ಮುಷರ್ರಫ್‌ ಭಾರತ ಭೇಟಿಯಿಂದ ಅಷ್ಟೇನೂ ಉಪಯೋಗವಿಲ್ಲ ಎಂದು ಭಾರತೀಯ ಜನತಾಪಕ್ಷದ ನಾಯಕರು ಹೇಳುತ್ತಿರುವ ಬೆನ್ನಿಗೇ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ.

ನಾನು ಮುಕ್ತ ಮನಸ್ಸಿನಿಂದ ಭಾರತಕ್ಕೆ ತೆರಳುತ್ತಿದ್ದೇನೆ. ಅವರು ಕೂಡ ನನ್ನಷ್ಟೇ ಮುಕ್ತವಾಗಿ ಮಾತುಕತೆಯಲ್ಲಿ ಪಾಲ್ಗೊಳ್ಳುವರೆಂದು ನಂಬಿದ್ದೇನೆ ಎಂದು ಶುಕ್ರವಾರ ರಾತ್ರಿ ದೂರದರ್ಶನ ಹಾಗೂ ಆಕಾಶವಾಣಿಯ ಪ್ಯಾನಲ್‌ ಡಿಸ್ಕಷನ್‌ನ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

ಮುಕ್ತ ಮಾತುಕತೆ- ಕಾಶ್ಮೀರ ವಿಷಯವೇ ಪ್ರಧಾನ
ಭಾರತ ಸರ್ಕಾರ ಹಾಗೂ ನಾಯಕರು ಮುಕ್ತ ಮನಸ್ಸಿನಿಂದ ಮಾತುಕತೆಯಲ್ಲಿ ತೊಡಗುವರೆಂದು ನಾನು ನಂಬಿದ್ದೇನೆ. ಈ ಸಾರಿ ನಾವು ಇತಿಹಾಸವನ್ನು ಬದಲಾಯಿಸುತ್ತೇವೆ. ನಾನು ಭಾರತಕ್ಕೆ ಹೋಗುತ್ತಿರುವುದು ಇದೇ ಉದ್ದೇಶಕ್ಕಾಗಿಯೇ. ಸಹಕಾರ ಮನೋಭಾವ ಸಾಧ್ಯವಾಗಿಸುವ ಮೂಲಕ ಹೊಸ ಶಕೆಯನ್ನು ಪ್ರಾರಂಭಿಸುತ್ತೇವೆ ಎಂದು ಮುಷರ್ರಫ್‌ ವಿಶ್ವಾಸ ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವಣ ಮಾತುಕತೆಯಲ್ಲಿ ಕಾಶ್ಮೀರ ವಿಷಯವೇ ಪ್ರಧಾನವಾದುದು ಎನ್ನುವುದನ್ನು ಒತ್ತಿ ಹೇಳಿದ ಅವರು, ಈ ಬಗ್ಗೆ ನನ್ನ ನಿಲುವು ಅತ್ಯಂತ ಸ್ಪಷ್ಟವಾಗಿದೆ, ಕಾಶ್ಮೀರ ವಿಷಯವನ್ನು ಸರಳಗೊಳಿಸುವುದು ಮಾತುಕತೆಯ ಯಶಸ್ಸಿಗೆ ಪೂರಕವಾಗುವುದಿಲ್ಲ ಎಂದು ಒತ್ತಿ ಹೇಳಿದರು.

ಅನಿಲ ಕೊಳವೆ ಪ್ರಸ್ತಾವನೆಗೆ ಅಡ್ಡಿಯಿಲ್ಲ : ಇರಾನ್‌ನಿಂದ ಭಾರತಕ್ಕೆ ಪಾಕಿಸ್ತಾನದ ಮೂಲಕ ಅನಿಲ ಕೊಳವೆಯನ್ನು ಅಳವಡಿಸುವ ಪ್ರಸ್ತಾವನೆಯ ಕುರಿತು ಉತ್ತರಿಸಿದ ಅವರು, ಈ ವಿಷಯದಲ್ಲಿ ಸಹಕರಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದರು. ಪ್ರವಾಸ ಕಾಲದಲ್ಲಿ ಶ್ರೀನಗರದಿಂದ ಮುಝಾಪ್ಪರಾಬಾದ್‌ವರೆಗೆ ಬಸ್‌ನಲ್ಲಿ ಪ್ರಯಾಣಿಸಲು ಯಾವುದೇ ಅಭ್ಯಂತರವಿಲ್ಲವೆಂದು ಹೇಳಿದ ಅವರು, ಈ ಪ್ರಯಾಣವನ್ನು ನಾನು ಇಷ್ಟಪಡುತ್ತೇನೆ ಎಂದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X