Get Updates
Get notified of breaking news, exclusive insights, and must-see stories!

ಮೊಬೈಲ್‌ ಫೋನ್‌ ಬಳಸುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ

ನವದೆಹಲಿ : ದಶಕವೊಂದರ ಹಿಂದೆ ಫೋನ್‌ ಶ್ರೀಮಂತಿಕೆಯ ಪ್ರತೀಕವಾಗಿತ್ತು. ಈಗ ಹಳ್ಳಿಯಿಂದ ದಿಲ್ಲಿಯ ವರೆಗೆ ಸಾಮಾನ್ಯವರ್ಗದ ಮನೆಗಳಲ್ಲೂ ಫೋನ್‌ ರಾರಾಜಿಸುತ್ತಿದೆ. ಫೋನ್‌ ಅಷ್ಟೆ ಏಕೆ ಮೊಬೈಲ್‌ ಫೋನ್‌ಗಳೂ ರಾರಾಜಿಸುತ್ತಿವೆ.

ದೇಶದಲ್ಲಿ ಮೇ ತಿಂಗಳ ಅಂತ್ಯಕ್ಕೆ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ 3.87 ದಶಲಕ್ಷ ಮುಟ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಮೊಬೈಲ್‌ ಫೋನ್‌ ಹೊಂದಿದ್ದವರ ಸಂಖ್ಯೆ ಕೇವಲ 2.04 ದಶಲಕ್ಷ ಮಾತ್ರ ಆಗಿತ್ತು. ಅಂದರೆ ಕೇವಲ ಒಂದೇ ಒಂದು ವರ್ಷದ ಅವಧಿಯಲ್ಲಿ ಮೊಬೈಲ್‌ ಫೋನ್‌ ಬಳಸುವವರ ಸಂಖ್ಯೆ 1.83 ದಶಲಕ್ಷ ಹೆಚ್ಚಳವಾಗಿದೆ.

ಮೇ ತಿಂಗಳೊಂದರಲ್ಲೇ ಸುಮಾರು 1,68,680 ಮಂದಿ ಹೊಸದಾಗಿ ಮೊಬೈಲ್‌ ಫೋನ್‌ ಬಳಸಲು ಆರಂಭಿಸಿದ್ದಾರೆ. ಇದರಿಂದಾಗಿ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ಶೇಕಡಾ 88.7ರಷ್ಟು ಹೆಚ್ಚಿದೆ. ಭಾರತಿ ಸೆಲ್ಯುಲಾರ್‌ ರಾಷ್ಟ್ರದ ರಾಜಧಾನಿಯಾಂದರಲ್ಲೇ 3,45,386 ಗ್ರಾಹಕರನ್ನು ಹೊಂದಿದೆ.

(ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+