Get Updates
Get notified of breaking news, exclusive insights, and must-see stories!

ಭಾಗಮಂಡಲ ಪ್ರದೇಶದದಲ್ಲಿ ಮಳೆ, ಕನ್ನಂಬಾಡಿ ಕಟ್ಟೆಗೆ ನೀರು

ಮೈಸೂರು : ಕಾವೇರಿ ಜಲಾನಯನ ಪ್ರದೇಶದ ಜನರ ಕನಸುಗಳಿಗೆ ಮತ್ತೆ ಮಳೆ ಬಿದ್ದಿದೆ. ತಲ ಕಾವೇರಿ ಭಾಗಮಂಡಲ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಕನ್ನಂಬಾಡಿಗೆ ನೀರು ಹರಿದುಬರುತ್ತಿದೆ, ಜಲಾಶಯದ ನೀರಿನ ಮಟ್ಟವೂ ಹೆಚ್ಚುತ್ತಿದೆ.

ಕಳೆದ ಎರಡು ದಿನಗಳಲ್ಲಿ ಭಾಗಮಂಡಲದಲ್ಲಿ ಬಿದ್ದ ಮಳೆಯ ಪ್ರಮಾಣ 10 ಸೆಂಮೀ. ಜೂನ್‌ 6 ರಿಂದ ಈ ಪ್ರದೇಶದಲ್ಲಿ ಒಟ್ಟು 60 ಸೆಂಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತಮ ಮಳೆಯಿಂದಾಗಿ ಈ ಭಾಗದ ಕೃಷಿಕರು ನೆಮ್ಮದಿಯ ಉಸಿರುಬಿಟ್ಟರೆ, ಮೈಸೂರಿನ ಜನತೆ ಕುಡಿಯುವ ನೀರಿನ ಆತಂಕದಿಂದ ಬಿಡುಗಡೆ ಹೊಂದಿದ್ದಾರೆ.

ಇಳಿಮುಖವಾಗುತ್ತಿರುವ ನೀರಿನ ಮಟ್ಟದಿಂದಾಗಿ ಕನ್ನಂಬಾಡಿಯಲ್ಲಿನ ವೇಣುಗೋಪಾಲ ದೇವಸ್ಥಾನ ಮತ್ತೆ ಗೋಚರವಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.ಕನ್ನಂಬಾಡಿ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 73.10 ಅಡಿ ನೀರಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+