ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಸಂಬಂಧಿತ ಸೇವೆಗಳಲ್ಲಿ ಹೆಚ್ಚು ಉದ್ಯೋಗ ಹಾಗೂ ಆದಾಯ

By Staff
|
Google Oneindia Kannada News

ವಿಜಯವಾಡ : 2008 ರ ವೇಳೆಗೆ ಅಮೇರಿಕಾದಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು 140 ಬಿಲಿಯನ್‌ ಡಾಲರ್‌ ತಲುಪುವ ನಿರೀಕ್ಷೆಯಿದ್ದು , ಇದರಲ್ಲಿ ಭಾರತದ ಪಾಲು ಕನಿಷ್ಠ 17 ಬಿಲಿಯನ್‌ ಡಾಲರ್‌ (81 ಸಾವಿರ ಕೋಟಿ ರು.) ಗಳಷ್ಟಿರುತ್ತದೆ ಹಾಗೂ 1.1 ಮಿಲಿಯನ್‌ ಮಂದಿಗೆ ಉದ್ಯೋಗವಾಕಾಶ ಲಭ್ಯವಾಗುತ್ತದೆಂದು ಭಾರತೀಯ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ನ ನಿರ್ದೇಶಕ ಕರ್ನಲ್‌ ಎಂ. ವಿಜಯಕುಮಾರ್‌ ತಿಳಿದ್ದಾರೆ.

ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಶ್ರಮಶಕ್ತಿ ಲಭ್ಯವಿದೆ ಹಾಗೂ ಇಂಗ್ಲೀಷ್‌ ಮಾತನಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಅಕೌಂಟಿಂಗ್‌, ಇನ್ಷೂರೆನ್ಸ್‌ , ಬ್ಯಾಂಕಿಂಗ್‌, ವೈದ್ಯಕೀಯ, ಟೆಲಿ ಮೆಡಿಸಿನ್‌ ಹಾಗೂ ಸಂಪರ್ಕ ಮಾಧ್ಯಮ ಕ್ಷೇತ್ರಗಳು ಕೂಡ ಕನಿಷ್ಠ ಕಂಪ್ಯೂಟರ್‌ ಜ್ಞಾನ ಹೊಂದಿರುವ ಕಲಾ ಹಾಗೂ ವಾಣಿಜ್ಯ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುತ್ತವೆ ಎಂದು ವಿಜಯಕುಮಾರ್‌ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ - ಐಟಿ ಸಂಬಂಧಿತ ಸೇವೆಗಳಲ್ಲಿ ವಾಣಿಜ್ಯ ಅವಕಾಶಗಳು ಎನ್ನುವ ಸೆಮಿನಾರ್‌ನಲ್ಲಿ ಜೂನ್‌ 15 ರಂದು ವಿಜಯಕುಮಾರ್‌ ಮಾತನಾಡುತ್ತಿದ್ದರು. ಅಮೇರಿಕಾದಲ್ಲಿನ ಐಟಿ ಸ್ಲೋಡೌನ್‌ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಹೊಸ ಅಭಿವೃದ್ಧಿ ಹಾಗೂ ಸಂಶೋಧನಾ ವಲಯಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಹೊಸ ಅವಕಾಶಗಳಿಗೆ ಉತ್ತೇಜನ ನೀಡುತ್ತದೆ ಎಂದರು.

ಐಟಿ ಸಂಬಂಧಿತ ಸೇವೆಗಳು ಮುಖ್ಯವಾಗಿ ವಿಜಯವಾಡಾದಂಥ ಎರಡನೆ ದರ್ಜೆಯ ನಗರಗಳಲ್ಲಿ ವಾಣಿಜ್ಯವಕಾಶಗಳನ್ನು ಕಲ್ಪಿಸುತ್ತವೆ. 2001 ನೇ ಸಾಲಿನಲ್ಲಿ 1.1 ಲಕ್ಷ ಉದ್ಯೋಗಾವಕಾಶ ಹಾಗೂ 6500 ಕೋಟಿ ರುಪಾಯಿ ಆದಾಯ ಐಟಿ ಸಂಬಂಧಿತ ಸೇವೆಗಳಿಂದ ರೂಪಿತಗೊಳ್ಳುತ್ತದೆ ಎಂದು ವಿಜಯಕುಮಾರ್‌ ತಿಳಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X