ನಾನು ವರ್ಷ ಪೂರ್ತಿ ರಾಜಕೀಯ ಮಾಡೊಲ್ಲ - ಅಂಬರೀಷ್
ಮಂಡ್ಯ : ಅಂಬಿ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಹೇಳಿಕೊಂಡು ಸಂತೋಷ ಪಡುತ್ತಿದ್ದರೆ, ವರ್ಷ ಪೂರ್ತಿ ರಾಜಕೀಯ ಮಾಡುವುದು ತಮ್ಮ ಉದ್ದೇಶವಲ್ಲವೆಂದು ಅಂಬರೀಷ್ ಹೇಳಿದ್ದಾರೆ.
ಒಳಗೆರೆ ಎಂಬುದೊಂದು ಮದ್ದೂರು ತಾಲ್ಲೂಕಿನ ಹಳ್ಳಿ. ಅಲ್ಲಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹಾಗೂ ಸಂಸದ ಅಂಬರೀಷ್ ಅವರ 49 ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಹಮ್ಮಿಕೊಂಡಿದ್ದರು. ಹುಟ್ಟುಹಬ್ಬದ ವೇದಿಕೆ 9 ಜೋಡಿಗಳಿಗೆ ಹಸೆಮಣೆಯೂ ಆಗಿದ್ದುದು ಕಾರ್ಯಕ್ರಮದ ವಿಶೇಷ.
ದೇಶ ಸೇವೆ ಮಾಡುವುದು ನನ್ನ ಉದ್ದೇಶ
ಅದಕ್ಕಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಪ್ರಸ್ತುತ ಸಿನಿಮಾದಿಂದ ಅಘೋಷಿತ ನಿವೃತ್ತಿ ತೆಗೆದುಕೊಂಡು ವೃತ್ತಿಪರ ರಾಜಕಾರಣಿಯಾಗಿರುವ ಅಂಬರೀಷ್ ಅಭಿಮಾನಿಗಳ ಚಪ್ಪಾಳೆಗಳ ನಡುವೆ ಘೋಷಿಸಿದರು. ಆದರೆ, ಪಕ್ಷ ರಾಜಕಾರಣಿಗಳಂತೆ ವರ್ಷ ಪೂರ್ತಿ ರಾಜಕೀಯ ಮಾಡುವುದು ತಮ್ಮ ಜಾಯಮಾನವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ದಾವಣಗೆರೆ ಅಭಿಮಾನಿಗಳಷ್ಟು ಒಳಗೆರೆಯ ಅಭಿಮಾನಿಗಳು ಶ್ರೀಮಂತರಲ್ಲವಾದ್ದರಿಂದ ಅಲ್ಲಿ ಕಿರೀಟ ತೊಡಿಸುವ ಕಾರ್ಯಕ್ರಮ ಇರಲಿಲ್ಲ . ಸಿನಿಮಾ ನಟನಾಗಲೇಬೇಕೆಂದು ಪಟ್ಟು ಹಿಡಿದಿರುವ ಐಎಎಸ್ ಶಿವರಾಂ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೋಲಿಸಿದರೆ ಇಲ್ಲಿನದು ಸರಳ ಸನ್ಮಾನ ಕಾರ್ಯಕ್ರಮ. ನಟನಿಗೆ ಹೂ ಹಾರ ಹಾಕಿ ಅಭಿಮಾನಿಗಳು ಖುಷಿಪಟ್ಟರು.
ಅಂಬರೀಷ್ ಅವರಂತೆಯೇ ಡಬ್ಬಲ್ ರೋಲ್ ಮಾಡುವಲ್ಲಿ ಪಳಗಿರುವ ಶಾಸಕ ಹಾಗೂ ನಾಯಕ ಸಿ.ಪಿ. ಯೋಗೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ.ಎಸ್. ಸಿದ್ಧರಾಜು, ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications