ಭಾರತೀಯ ವಾಯು ಪಡೆಯಲ್ಲಿ ನುರಿತ ಪೈಲಟ್‌ಗಳ ಕೊರತೆ
ಬೆಂಗಳೂರು: ನುರಿತ ಹಾಗೂ ತರಬೇತಿ ಹೊಂದಿದ ಪೈಲಟ್‌ಗಳ ಕೊರತೆ ಭಾರತೀಯ ವಾಯುಪಡೆಯನ್ನು ಬಹುವಾಗಿ ಕಾಡುತ್ತಿದೆ. ಕೇಂದ್ರ ಸರಕಾರವು 220 ವಿಮಾನ ಚಾಲಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆಯಾದರೂ, ವಾಯುಪಡೆ ಪ್ರತಿವರ್ಷ 110ರಿಂದ 120 ಜನರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದೆ.
ಇದಕ್ಕೆ ಕಾರಣ ಕೌಶಲ್ಯದ ಕೊರತೆ. ಭಾರತೀಯ ವಾಯುಪಡೆ ಅತ್ಯುನ್ನತ ಗುಣಮಟ್ಟ ಕಾಪಾಡಿಕೊಳ್ಳಲು, ನಿಯಮಾನುಸಾರ ಪರೀಕ್ಷೆಗಳನ್ನು ನಡೆಸುತ್ತದೆ. ಅರ್ಹರನ್ನು ಮಾತ್ರ ಆಯ್ಕೆ ಮಾಡುತ್ತದೆ. ವಾಯುಪಡೆಯ ಗುಣಮಟ್ಟದ ಸಮೀಪಕ್ಕೂ ಬಾರದವರನ್ನು ತಿರಸ್ಕರಿಸುತ್ತದೆ. ಈ ವಿಷಯವನ್ನು ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಟಿ.ಜೆ. ಮಾಸ್ಟರ್ ತಿಳಿಸಿದ್ದಾರೆ.
ಪ್ರಾಥಮಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ತರಬೇತಿಗೆ ಆಯ್ಕೆಯಾದ ತಂಡದಲ್ಲಿ ಇರುವ 110 ಅಭ್ಯರ್ಥಿಗಳ ಪೈಕಿ 85 ರಿಂದ 93 ರಷ್ಟು ಮಂದಿ ಮಾತ್ರ ಸಾಮಾನ್ಯವಾಗಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸುತ್ತಾರೆ. ಆದರೆ, ಈ ಬಾರಿ ಆಯ್ಕೆಯಾಗಿರುವ ತಂಡದಲ್ಲಿ ತರಬೇತಿ ಪೂರೈಸಿದ ಪೈಲಟ್‌ಗಳ ಸಂಖ್ಯೆ ಕೇವಲ 55.
ಭಾರಿ ಪ್ರಮಾಣದ ಈ ನಷ್ಟದಿಂದ ವಾಯುಪಡೆ ತರಬೇತಿ ಹೊಂದಿದ ನುರಿತ ಪೈಲಟ್‌ಗಳ ಕೊರತೆ ಅನುಭವಿಸುವ ಸ್ಥಿತಿ ಬಂದೊದಗಿದೆ. ಟಿ.ಜೆ. ಮಾಸ್ಟರ್ ಪ್ರಕಾರ ಪೈಲಟ್ ಆಗುವವರಿಗೆ ಕೆಲವು ಮೂಲಭೂತ ಕೌಶಲ್ಯಗಳಿರಬೇಕು. ದೈಹಿಕವಾಗಿಯೂ ಅವರು ಸಮರ್ಥರಾಗಿರಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಗುಣಮಟ್ಟ ಕಾಯ್ದುಕೊಳ್ಳಬೇಕು.
ನಾವು ಬ್ಯಾಚ್ ಒಂದರಲ್ಲಿ 110 ಚಾಲಕರನ್ನು ನೇಮಕ ಮಾಡಿಕೊಂಡರೆ, ನಮಗೆ ಪೈಲಟ್‌ಗಳ ಕೊರತೆಯೇ ಇರುವುದಿಲ್ಲ. ಆದರೆ, ನಾವು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪೈಲಟ್‌ಕೈಗೆ ನಾವು 2 ಕೋಟಿ ರುಪಾಯಿ ಮೌಲ್ಯದ ವಿಮಾನ ನೀಡುತ್ತೇವೆ. ಐದು ವರ್ಷಗಳ ಸುದೀರ್ಘ ತರಬೇತಿಗೆ ಸುಮಾರು 6 ಕೋಟಿ ರುಪಾಯಿ ವೆಚ್ಚ ತಗುಲುತ್ತದೆ. ವಸ್ತುಸ್ಥಿತಿ ಹೀಗಿರುವಾಗ ನಾವು ಅನರ್ಹರನ್ನು ಆಯ್ಕೆ ಮಾಡುವುದು ಸಾಧ್ಯವೇ ಇಲ್ಲ ಎಂಬುದು ಅವರ ಅನಿಸಿಕೆ.
(ಯು.ಎನ್.ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications