ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು : ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ

By Staff
|
Google Oneindia Kannada News

ರಾಯಚೂರು : ದೇಶದಲ್ಲಿಯೇ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿರುವ ಜಿಲ್ಲೆಯೆಂದು ರಾಜ್ಯದ ರಾಯಚೂರು ಜಿಲ್ಲೆಯನ್ನು ಗುರುತಿಸಲಾಗಿದೆ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಹೇಳಿದೆ.

ಪ್ರಾದೇಶಿಕ ಅಸಮತೋಲನಾ ಸಮಿತಿಯ ಸದಸ್ಯ, ಡಾ. ಬಿ. ಶೇಷಾದ್ರಿ ಈ ವಿಷಯವನ್ನು ಜಿಲ್ಲಾ ಅಧಿಕಾರಿಗಳು ಮತ್ತು ನಾಗರಿಕ ಪ್ರತಿನಿಧಿಗಳ ಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ. ರಾಜ್ಯದಲ್ಲಿರುವ 175 ತಾಲ್ಲೂಕುಗಳ ಪಟ್ಟಿಯಲ್ಲಿ ರಾಯಚೂರಿನ ತಾಲ್ಲೂಕುಗಳು ಕೊನೆಯ ಸ್ಥಾನದಲ್ಲಿವೆ. ಅಲ್ಲದೆ ಕೆಲವು ತಾಲ್ಲೂಕುಗಳು ಆರ್ಥಿಕವಾಗಿ ಪರವಾಗಿಲ್ಲ ಎನಿಸಿದರೂ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವು ತೀರಾ ಹಿಂದುಳಿದಿವೆ.

ಇಲ್ಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿದರೆ ಅತೀ ಹೆಚ್ಚು ಅನಕ್ಷರಸ್ಥರಿರುವುದೂ ರಾಯಚೂರಿನಲ್ಲಿಯೇ. ಕೃಷಿಯನ್ನೇ ಹೊಟ್ಟೆಪಾಡಿಗಾಗಿ ಅವಲಂಬಿಸಿಕೊಂಡಿರುವ ಇಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಅತೀ ಹೆಚ್ಚು ಮಂದಿ ಕೂಲಿ ಕಾರ್ಮಿಕರಿದ್ದಾರೆ.

ಶಾಲೆ, ಆಸ್ಪತ್ರೆ, ಬೋಧಕರ ಅಗತ್ಯ ಜಿಲ್ಲೆಗಿದೆ
ಹೆಚ್ಚು ಹೆಚ್ಚು ಕೈಗಾರಿಕೆಗಳು ಬಂದಂತೆಲ್ಲಾ ಉದ್ಯೋಗಾವಕಾಶ ಜಾಸ್ತಿಯಾಗುತ್ತದೆ. ಕೃಷಿಯಲ್ಲಿಯೂ ಆಧುನಿಕ ಪದ್ಧತಿಗಳನ್ನು ಇಲ್ಲಿನ ಜನರು ಅನುಸರಿಸುವುದನ್ನು ಕಲಿಯಬೇಕಾಗಿದೆ.

ರಾಯಚೂರಿನ ಗಂಭೀರ ಸ್ಥಿತಿಯ ಬಗ್ಗೆ ಶೇಷಾದ್ರಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿರುವ ಹೈದರಾಬಾದ್‌ ಕರ್ನಾಟಕದ ಜನಾಂದೋಲನ ಕೇಂದ್ರದ ರಾಘವೇಂದ್ರ ಕುಷ್ಟಗಿ, ಜಿಲ್ಲೆಯ ಅಧಿಕಾರಿಗಳು ಈ ದುಸ್ಥಿತಿಯನ್ನು ನಿವಾರಿಸುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಈ ಸಾರಿ ಜಿಲ್ಲೆಗೆ ಅತೀ ಹೆಚ್ಚು ಅನುದಾನ ಮತ್ತು ಯೋಜನೆಗಳು ಮಂಜೂರಾಗಿವೆ ಎಂಬುದನ್ನು ಅವರು ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ರಾಮಚಂದ್ರ ಪ್ರಭು ರಾಯಚೂರು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲ, ಜಿಲ್ಲೆಯ ಕುರಿತಾದ ದೂರು ದುಮ್ಮಾನಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತೋಚುತ್ತಿಲ್ಲ ಎಂದು ವಿಷಾದಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X