Get Updates
Get notified of breaking news, exclusive insights, and must-see stories!

ಜುಲೈ 9, ಪಾಕ್‌ ಮಿಲಿಟರಿ ಅಧಿಕಾರಿ ಮುಷರ್ರಫ್‌ ದೆಹಲಿಗೆ-ಜಂಗ್‌

ಇಸ್ಲಮಾಬಾದ್‌ : ಪಾಕಿಸ್ತಾನದ ಮಿಲಿಟರಿ ಅಧಿಕಾರಿ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರು ಭಾರತದ ಪ್ರಧಾನಿ ವಾಜಪೇಯಿ ಅವರೊಂದಿಗಿನ ಉನ್ನತ ಮಟ್ಟದ ಮಾತುಕತೆಗಳ ಹಿನ್ನೆಲೆಯಲ್ಲಿ ಜುಲೈ 9 ರಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳುವರು ಎಂದು ಪಾಕಿಸ್ತಾನದ ಉರ್ದು ದೈನಿಕ್‌ ‘ಜಂಗ್‌’ ವರದಿ ಮಾಡಿದೆ.

ಉನ್ನತ ಮೂಲಗಳನ್ನುದ್ದೇಶಿಸಿ ವರದಿಯನ್ನು ಪ್ರಕಟಿಸಿರುವ ಜಂಗ್‌, ಜನರಲ್‌ ಮುಷರ್ರಫ್‌ ಅವರ ಭೇಟಿಯ ದಿನಾಂಕ ನಿಗದಿಯಾಗಿದೆ. ಈ ದಿನಾಂಕಗಳ ಬಗ್ಗೆ ಒಪ್ಪಿಗೆಗೆ ಭಾರತದ ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ. ಭಾರತದ ಪ್ರತಿಕ್ರಿಯೆಯ ನಂತರವಷ್ಟೇ ಇಸ್ಲಮಾಬಾದ್‌ ಹಾಗೂ ದೆಹಲಿಯಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಜಂಗ್‌ ವರದಿ ತಿಳಿಸಿದೆ.

ಆದರೆ, ಇಸ್ಲಮಾಬಾದ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ವಕ್ತಾರರೊಬ್ಬರು ಹೇಳುವಂತೆ-ಭೇಟಿಯ ದಿನಾಂಕದ ತೀರ್ಮಾನ ಇನ್ನೂ ನಡೆಯುತ್ತಿದೆ. ಈ ಬಗ್ಗೆ ನವದೆಹಲಿ ಹಾಗೂ ಇಸ್ಲಮಾಬಾದ್‌ಗಳಿಂದ ಏಕ ಕಾಲದಲ್ಲಿ ಪ್ರಕಟಣೆ ಹೊರಬೀಳಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನದ ಅಧಿಕಾರಿಗಳು ಲಭ್ಯರಾಗಿಲ್ಲ .

ಜಂಗ್‌ ತಿಳಿಸಿರುವ ಪ್ರಕಾರ- ಮುಷರ್ರಫ್‌ ಅವರು ಎರಡು ರಾತ್ರಿ ಹಾಗೂ ಮೂರು ಹಗಲುಗಳನ್ನು ದೆಹಲಿಯಲ್ಲಿ ಕಳೆಯುವರು. ಈ ನಡುವೆ ಮುಷರ್ರಫ್‌ ಅವರ ಉದ್ದೇಶಿತ ಭೇಟಿಯ ವಿವರಗಳನ್ನು ಅಂತಿಮಗೊಳಿಸಲು ಯಾವುದೇ ಭಾರತೀಯ ನಿಯೋಗ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಇಸ್ಲಮಾಬಾದ್‌ನಲ್ಲಿನ ಭಾರತೀಯ ರಾಯಭಾರಿ ಸುಧೀರ್‌ ವ್ಯಾಸ್‌ ಹೇಳಿದ್ದಾರೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+