Get Updates
Get notified of breaking news, exclusive insights, and must-see stories!

‘ತನ್ನ ಮನೆ ಹೇಗಿದೆ ಎನ್ನುವುದನ್ನುರಾಜ್ಯ ಸರ್ಕಾರ ನೋಡಿಕೊಳ್ಳಬೇಕು’

ಮಂಗಳೂರು : ಎಲ್ಲ ರಂಗಗಳಲ್ಲಿಯೂ ವಿಫಲವಾಗಿರುವ ರಾಜ್ಯ ಸರ್ಕಾರ ತನ್ನ 18 ತಿಂಗಳ ಆಡಳಿತವನ್ನು ಆತ್ಮಾವಲೋಕನ ಮಾಡಿಕೊಳ್ಳದಿದ್ದಲ್ಲಿ ಜನ ಜಾಗೃತಿ ಆಂದೋಲನ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ ಎಚ್ಚರಿಕೆ ನೀಡಿದ್ದಾರೆ.

ಎಲ್ಲದಕ್ಕೂ ಕೇಂದ್ರವನ್ನು ದೂರುತ್ತಿರುವ ರಾಜ್ಯ ಸರ್ಕಾರ ತನ್ನ ಮನೆ ಹೇಗಿದೆ ಎನ್ನುವುದನ್ನು ನೋಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಂತೂ ತುಘಲಕ್‌ ದರ್ಬಾರ್‌ ನಡೆದಿದೆ. ಸಮವಸ್ತ್ರ , ಪುಸ್ತಕ ವಿತರಣೆ ಸರಿಯಾಗಿ ನಡೆದಿಲ್ಲ . ಅಯೋಗ್ಯ ಹಣಕಾಸು ಮಂತ್ರಿಯಿಂದಾಗಿ ಆರ್ಥಿಕ ಕ್ಷೇತ್ರವೂ ಸಂಪೂರ್ಣವಾಗಿ ಕುಸಿದಿದೆ ಎಂದು ಸೇಡಂ ತೀವ್ರವಾಗಿ ಟೀಕಿಸಿದರು. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರದ ಲೋಪಗಳನ್ನು ಎತ್ತಿ ಆಡಿದ ಸೇಡಂ, ತಮ್ಮ ಪಕ್ಷ ದುರಾಡಳಿತವನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದರು. ಅವರ ಮಾತಿನ ಮುಖ್ಯಾಂಶಗಳು-

  • ಅಭಿವೃದ್ಧಿ ಕಾಮಗಾರಿಗಾಗಿ ರಾಜ್ಯ ಸರ್ಕಾರ 1300 ಕೋಟಿ ರು. ಸಾಲ ಪಡೆಯುತ್ತಿದೆ. ಆದರೆ ಸೋರಿಕೆಯಾಗುತ್ತಿರುವ ಹಣವನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿಲ್ಲ . ಅಬಕಾರಿ ಬಾಬ್ತಿನಲ್ಲೇ ಸುಮಾರು 1450 ಕೋಟಿ ರು. ಸೋರಿಕೆಯಾಗುತ್ತಿದೆ. ವಿದ್ಯುತ್‌ ಕ್ಷೇತ್ರದಲ್ಲಿ ಶೇ.38.2 ರಷ್ಟು ಸೋರಿಕೆಯಾಗುತ್ತಿದೆ. ಇದನ್ನು ಶೇ. 10 ರಷ್ಟು ಇಳಿಸಿದರೂ 1000 ಕೋಟಿ ರುಪಾಯಿ ಉಳಿತಾಯವಾಗುತ್ತದೆ.
  • ಮಾಹಿತಿ ತಂತ್ರಜ್ಞಾನ, ಕೋಕಾಕೋಲಾಗಳಿಗೆ ತೆರಿಗೆ ವಿನಾಯಿತಿ ನೀಡುವ ಸರ್ಕಾರ ರೈತರ ಸಾಲದ ಬಡ್ಡಿ ಮನ್ನಾ ಮಾಡಲು ಒಪ್ಪುತ್ತಿಲ್ಲ.
  • ನಗರಸಭೆ, ಪುರಸಭೆ ಚುನಾವಣೆಗಳಲ್ಲಿ ಮೀಸಲಾತಿಯನ್ನು ಕಾಂಗ್ರೆಸ್‌ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆ.
  • ವಿಶ್ವ ವಿದ್ಯಾಲಯ ಮಟ್ಟದಲ್ಲಿ ಜ್ಯೋತಿಷ್ಯ ಶಾಸ್ತ್ರ ಬೋಧನೆಯನ್ನು ಬಿಜೆಪಿ ಬೆಂಬಲಿಸುತ್ತದೆ.
  • ಮಹಾಜನ್‌ ವರದಿಗೆ ಬಿಜೆಪಿ ಬದ್ಧ . ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಗಡಿ ಸಮಸ್ಯೆ ವಿಷಯದಲ್ಲಿ ರಾಜ್ಯ ಬಿಜೆಪಿ ಘಟಕ ರಾಜ್ಯ ಸರ್ಕಾರದೊಂದಿಗಿದೆ.
(ಮಂಗಳೂರು ಪ್ರತಿನಿಧಿಯಿಂದ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+