ಕಾಲ್ಬೆರಳುಗಳಿಂದ ಭವಿಷ್ಯ ಬರೆದ ಮಂಜುಳಾ
ನವದೆಹಲಿ : ಈ ಹುಡುಗಿಯ ಹೆಸರು ಮಂಜುಳಾ. ಮೊನ್ನೆಯಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸು ಮಾಡಿದ್ದಾಳೆ. ಈಕೆಯಂತೆಯೇ ಲಕ್ಷಾಂತರ ವಿದ್ಯಾರ್ಥಿಗಳು 10 ನೇ ಇಯತ್ತೆಯ ಪರೀಕ್ಷೆ ಪಾಸು ಮಾಡಿದ್ದಾರೆ, ಉನ್ನತ ದರ್ಜೆಗಳನ್ನು ಪಡೆದಿದ್ದಾರೆ. ಆದರೆ ಮಂಜುಳಾ ಸಾಧನೆಯೇ ಬೇರೆ. ಆಕೆ ಪರೀಕ್ಷೆ ಬರೆದದ್ದು ಕಾಲ ಬೆರಳುಗಳಿಂದ !
ಕೂಲಿ ಕೆಲಸದಲ್ಲಿ ತೊಡಗಿರುವ ಕರ್ನಾಟಕದ ದಲಿತ ಕುಟುಂಬವೊಂದರಿಂದ ಬಂದು ಹತ್ತನೇ ಇಯತ್ತೆ ಪಾಸು ಮಾಡಿರುವ ಮಂಜುಳಾಗೆ ಕಂಪ್ಯೂಟರ್ ಕಲಿಯುವ ಆಸೆ. ಆದರೆ ಹಳ್ಳಿ ಹುಡುಗಿಯಾಬ್ಬಳು, ಅದೂ ಅಂಗವಿಕಲೆ ಕಂಪ್ಯೂಟರ್ ಕಲಿಯುವುದೆಂದರೆ ತಮಾಷೆಯಾ! ಮಂಜುಳಾಗೆ ಕಟು ವಾಸ್ತವ ಚೆನ್ನಾಗಿ ಗೊತ್ತು . ತನ್ನ ಹಳ್ಳಿಯಲ್ಲಿ ಕಂಪ್ಯೂಟರ್ ಕಲಿಸುವ ಶಿಕ್ಷಕರಿಲ್ಲ ಎಂದು ನೋವಿನಿಂದ ಮಂಜುಳಾ ಹೇಳುತ್ತಾಳೆ. ಹತ್ತಿರದ ಊರಿನಲ್ಲಿ ಕಂಪ್ಯೂಟರ್ ಕಲಿಕೆಯ ಸೌಲಭ್ಯ ಉಂಟಾದರೂ, ಶುಲ್ಕವನ್ನು ಭರಿಸುವ ಶಕ್ತಿ ಮಂಜುಳಾ ಅಪ್ಪನಿಗಿಲ್ಲ .
ಮಂಜುಳಾಗೆ ಎರಡೂ ಕೈಗಳಿಲ್ಲ
ಹಾಗಂತ ಆಕೆಗೆ ಶಾಲೆಯಲ್ಲಿ ವಿಶೇಷ ಉಪಚಾರ ಸಿಕ್ಕಿದೆಯೆಂದು ನೀವು ಭಾವಿಸಿದ್ದಲ್ಲಿ , ಅದು ಸುಳ್ಳು. ಕಾಲ ಬೆರಳುಗಳಿಂದ ಪರೀಕ್ಷೆ ಬರೆಯುವ ಹುಡುಗಿ 30 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನೂ ಬೇಡಿದರೂ ಶಾಲಾ ಆಡಳಿತ ಮಂಡಳಿ ಹ್ಞೂಂ ಅನ್ನಲಿಲ್ಲ . ಇತರ ವಿದ್ಯಾರ್ಥಿಗಳಂತೆಯೇ ಮಂಜುಳಾ ಕೂಡ ನಿಗದಿತ ಸಮಯದಲ್ಲಿಯೇ ಪರೀಕ್ಷೆ ಬರೆದಳು, ಕಾಲ ಬೆರಳುಗಳಲ್ಲಿ . ಈ ವಿವರಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸುದ್ದಿಯನ್ನುಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.
ಮಂಜುಳಾ ಹುಟ್ಟಿದ್ದು ಅಪ್ಪೇನಹಳ್ಳಿಯಲ್ಲಿ . ಅಕ್ಷರ ಗಂಧವಿಲ್ಲದ ತಾಯಿ ಚೌಡಮ್ಮ ಮಗಳನ್ನು ಶಾಲೆಗೆ ಹಚ್ಚಿದಳು. ಆರು ಮಕ್ಕಳಲ್ಲಿ ಕಿರಿಯವಳಾಗಿ ಕೈಗಳಿಲ್ಲದೆ ಹುಟ್ಟಿದ ಮಂಜುಳಾಗೆ ಊರುಗೋಲಾಗಿ ನಿಂತದ್ದು , ಕಲಿಕೆಯ ಆಸಕ್ತಿ ಕುಂದದಂತೆ ಹೆಜ್ಜೆ ಹೆಜ್ಜೆಗೂ ನೀರೆರೆದದ್ದು ಇದೇ ಚೌಡಮ್ಮನೇ. ಹಳ್ಳಿಯ ಇತರ ಮಕ್ಕಳಂತೆ ನನ್ನ ಮಗಳೂ ಅಗಬೇಕೆನ್ನುವ ಹಟದಿಂದ ಇಷ್ಟೆಲ್ಲಾ ಮಾಡಿದೆ ಎನ್ನುತ್ತಾಳೆ ಚೌಡಮ್ಮ .
350 ರು ವಿದ್ಯಾರ್ಥಿ ವೇತನ ಪಡೆಯಲು 100 ರು. ಖರ್ಚು
ಅಂಗವಿಕಲರಿಗೆ ಸರ್ಕಾರ ಒದಗಿಸುವ ಸವಲತ್ತುಗಳು ಕೂಡ ಮಂಜುಳಾಗೆ ಸಿಕ್ಕಿಲ್ಲ . ಅಧಿಕಾರಿಗಳಿಂದ ಅಂಗವಿಕಲತೆಯ ಕುರಿತಾದ ಪ್ರಮಾಣಪತ್ರ ಪಡೆಯಲು ಮಂಜುಳಾ ಹೆಣಗುತ್ತಿದ್ದಾಳೆ. ಮಗಳಿಗೆ ಉಚಿತ ಬಸ್ ಪಾಸ್ ಕೊಡಿಸಲು ಎರಡು ಬಾರಿ ಯತ್ನಿಸಿದ ತಿಮ್ಮರಾಯಪ್ಪ ಈಗ ಸುಮ್ಮನಾಗಿದ್ದಾರೆ. 350 ರುಪಾಯಿಗಳ ವಿದ್ಯಾರ್ಥಿ ವೇತನವನ್ನು ಪಡೆಯಲಿಕ್ಕಾಗಿ- ಕೆಜಿಎಫ್ ಆಸ್ಪತ್ರೆಯಿಂದ ಪ್ರಮಾಣ ಪತ್ರ ಪಡೆಯಲು ತಿಮ್ಮರಾಯಪ್ಪ ಎರಡು ಬಾರಿ ತಲಾ 50 ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.
ಮನೆಯವರು ಮಾತ್ರವಲ್ಲದೆ ಗೆಳೆಯರು, ಹಿತೈಷಿ- ಬಂಧುಗಳೂ ಸಾಧ್ಯವಾದಾಗಲೆಲ್ಲ ಮಂಜುಳಾಗೆ ನೆರವಿನ ಹಸ್ತ ಚಾಚಿದ್ದಾರೆ. ಪುಸ್ತಕಗಳನ್ನು ಬಸ್‌ಸ್ಟಾಪ್ ಹಾಗೂ ಶಾಲೆಗೊಯ್ಯಲು ನೆರವಾದ ಎಲ್ಲರ ನೆರವನ್ನು ಮಂಜುಳಾ ನೆನೆಯುತ್ತಾಳೆ. ಗೆಳೆಯರು, ಸಂಬಂಧಿಗಳೊಂದಿಗೆ ಬೆರೆಯುವುದೆಂದರೆ ನನಗೆ ಯಾವಾಗಲೂ ಮುಜುಗರವೇ. ಆದರೆ ಅವರ ನಡವಳಿಕೆ ನಾನು ಅಂಗವಿಕಲೆ ಅನ್ನುವುದನ್ನು ಮರೆಯಲು ನೆರವಾಗಿದೆ ಎಂದು ಹೇಳಲು ಮಂಜುಳಾ ಮರೆಯುವುದಿಲ್ಲ.
ಸಚಿವೆ ಮೋಟಮ್ಮ ಚಾಚಿರುವ ನೆರವಿನ ಹಸ್ತ
ಕಂಪ್ಯೂಟರ್ ಕಲಿಯಲು ಆಸಕ್ತಿ ವ್ಯಕ್ತಪಡಿಸಿರುವ ಮಂಜುಳಾಗೆ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಭರವಸೆ ನೀಡಿದ್ದಾರೆ. ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಕಂಪ್ಯೂಟರ್ ಕಲಿಯಲು ಮಂಜುಳಾಗೆ ಅವಕಾಶ ಕಲ್ಪಿಸಿಕೊಡಲಾಗುವುದೆಂದೂ ಮೋಟಮ್ಮ ತಿಳಿಸಿದ್ದಾರೆ.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications