ಅಕ್ರಮ ಸಂತಾನಕ್ಕೆ ಪೌರತ್ವ ?!ಅಮೆರಿಕೆಯಲ್ಲೀಗ ವಿವಾದದ ಬಿಸಿ
*ಅಜೀಜ್ ಹನೀಫಾವಾಷಿಂಗ್ಟನ್ : ಅಮೆರಿಕೆಯ ಪುರುಷನಿಂದ ವಿದೇಶಿ ಮಹಿಳೆಗೆ ವಿವಾಹ ಬಾಹಿರ ಸಂಬಂಧದಲ್ಲಿ ಜನಿಸಿದ ಮಗುವಿಗೆ ದೇಶದ ಪೌರತ್ವ ನೀಡುವ ವಿಧಿಗಳನ್ನು ಹೆಚ್ಚು ಕಠಿಣಗೊಳಿಸುವ ತೀರ್ಪನ್ನು ನೀಡುವ ಮೂಲಕ ಅಮೇರಿಕೆಯ ಸುಪ್ರಿಂಕೋರ್ಟ್ ಚರ್ಚಾಸ್ಪದ ವಿಷಯವೊಂದಕ್ಕೆ ವೇದಿಕೆ ಕಲ್ಪಿಸಿದೆ. ಆದರೆ, ವಿದೇಶಿ ಪುರುಷನಿಂದ ಅಮೇರಿಕೆಯ ಮಹಿಳೆಗೆ ವಿವಾಹ ಬಾಹಿರ ಸಂಬಂಧದಲ್ಲಿ ಜನಿಸುವ ಮಗುವಿಗೆ ಪೌರತ್ವ ನೀಡುವ ವಿಷಯದಲ್ಲಿ ನ್ಯಾಯಾಲಯ ಮೆದು ಧೋರಣೆಯನ್ನು ಅನುಸರಿಸಿದೆ.
ಅಂದರೆ : ಮದುವೆಯ ಚೌಕಟ್ಟಿನಿಂದ ಆಚೆಗೆ ಜನಿಸಿದ ಮಗುವಿಗೆ ಪೌರತ್ವ ಬೇಕೆಂದಿಟ್ಟುಕೊಳ್ಳೋಣ. ಆಗ , ಅಂಥ ಮಗುವಿಗೆ ಪೌರತ್ವ ದೊರಕಿಸಿಕೊಡುವುದು ಆ ಮಗುವಿನ ತಾಯಿಗೆ ಕಷ್ಟ. ಆದರೆ ಆ ಮಗುವಿನ ತಂದೆಗೆ ಇನ್ನೂ ಕಷ್ಟ. ಅಂತೂ ತೀರ್ಪು ಮಹಿಳೆಯರ ಪರ !
ವಿವಾಹ ಬಾಹಿರ ಸಂಬಂಧದಲ್ಲಿ ಜನಿಸುವ ಮಗುವಿನ ತಂದೆ ಅಥವಾ ತಾಯಿ ಅಮೇರಿಕನ್ನರಾಗಿದ್ದ ಸಂದರ್ಭದಲ್ಲಿ - ಆ ಮಗು ಪೌರತ್ವ ಹೊಂದುವಲ್ಲಿ ಸಾಮಾಜಿಕ ಹಾಗೂ ಭೌತಿಕ ಸಂಬಂಧಗಳನ್ನು ಹೊಂದಿರುವ ಬಗ್ಗೆ ಆಡಳಿತ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ವಿವಾದಾಸ್ಪದ ತೀರ್ಪಿಗೆ ಪೀಠದಲ್ಲಿನ ಐವರು ನ್ಯಾಯಾಧೀಶರ ಪೈಕಿ ನಾಲ್ವರು ನ್ಯಾಯಾಧೀಶರ ಬೆಂಬಲ ದೊರೆಯಿತು.
ಲಿಂಗ ವಿವೇಚನೆಯನ್ನು ಸಂವಿಧಾನಬದ್ಧಗೊಳಿಸುವ ಕುರಿತು ಅಮೇರಿಕನ್ ಕಾಂಗ್ರೆಸ್ ಕಾರ್ಯಪ್ರವೃತ್ತವಾಗಿದೆ ಎಂದೂ ನ್ಯಾಯಪೀಠ ತಿಳಿಸಿದೆ. ಪೋಷಕರ ಪಾತ್ರದಲ್ಲಿ ತಂದೆ ಅಥವಾ ತಾಯಿಯ ಪಾತ್ರಗಳು ಬದಲಾಗದ ಬಗ್ಗೆ ವಿವಿಧ ಮಹಿಳಾ ಹಕ್ಕುಗಳ ಒಕ್ಕೂಟಗಳು ದನಿಯೆತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications