ಎಂ.ಪಿ.ಹುಸೇನ್ ಸೂಪರ್ ಟ್ಯಾಂಕರ್ಮುಳುಗಡೆ, 4 ಸಾವು ?
(ಮಂಗಳೂರು ಪ್ರತಿನಿಧಿಯಿಂದ)
ಮಂಗಳೂರು : ಇಲ್ಲಿಗೆ 380 ನಾಟಿಕಲ್ ಮೈಲ್ ದೂರದಲ್ಲಿ ಹಡಗೊಂದು ಸಮುದ್ರದಲ್ಲಿ ಮುಳುಗಿ ಕನಿಷ್ಠ 4 ಮಂದಿ ಜಲ ಸಮಾಧಿಯಾಗಿದ್ದಾರೆಂದು ಶಂಕಿಸಲಾಗಿದೆ.
ಸಿಂಗಾಪುರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನ ಫ್ಯುಜಿಯಾಪುರಕ್ಕೆ ಹೊರಟಿದ್ದ ಎಂ.ಪಿ.ಹುಸೇನ್ ಸೂಪರ್ ಟ್ಯಾಂಕರ್ ಮಂಗಳವಾರ ರಾತ್ರಿ 11 ಗಂಟೆ 15 ನಿಮಿಷಕ್ಕೆ ಆಳ ಸಮುದ್ರದಲ್ಲಿ ಮುಳುಗಿತು ಎಂದು ನವ ಮಂಗಳೂರು ಬಂದರು ಮಂಡಳಿ ಟ್ರಾಫಿಕ್ ಮೇನೇಜರ್ ರೇವಣ್ಕರ್ ಇಂಡಿಯಾಇನ್ಫೋಗೆ ತಿಳಿಸಿದ್ದಾರೆ.
ಮುಳುಗಿರುವ ಹಡಗು ಯಾವುದೇ ಸರಕು ಕೊಂಡೊಯ್ಯುತ್ತಿರಲಿಲ್ಲ . ಗೋವಾಕ್ಕೆ 290 ನಾಟಿಕಲ್ ಮೈಲ್ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಡಗಿನಲ್ಲಿ 42 ಸಿಬ್ಬಂದಿಯಿದ್ದು , 38 ಮಂದಿಯನ್ನು ಕರಾವಳಿ ತಟ ರಕ್ಷಣಾ ಪಡೆ ರಕ್ಷಿಸಿದೆ ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ. ಕರಾವಳಿ ತಟ ರಕ್ಷಣಾ ಪಡೆಯ ಮುಂಬಯಿ ಕೇಂದ್ರದಡಿ ಪರಿಹಾರ ಕಾರ್ಯಗಳು ಸಾಗುತ್ತಿದ್ದು , ಕಣ್ಮರೆಯಾಗಿರುವ ನಾಲ್ವರು ಜಲ ಸಮಾಧಿಯಾಗಿರಬೇಕೆಂದು ಶಂಕಿಸಲಾಗಿದೆ.
ಹಡಗು ಮುಳುಗಲು ಸ್ಫೋಟ ಕಾರಣವೆಂದು ಪ್ರಾಥಮಿಕ ವರದಿಗಳು ಹೇಳಿದ್ದರೂ, ದುರಂತಕ್ಕೆ ಕಾರಣವಾದ ಅಧಿಕೃತ ಮಾಹಿತಿ ಇದುವರೆಗೂ ಬಂದಿಲ್ಲ .More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications