Get Updates
Get notified of breaking news, exclusive insights, and must-see stories!

ಆರು ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಗೆ ಕೆಎಸ್‌ಓಯು ಇಚ್ಛೆ

ಹಾಸನ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ರಾಜ್ಯದಲ್ಲಿ ಆರು ಮುಕ್ತ ವಿಶ್ವ ವಿದ್ಯಾಲಯಗಳನ್ನು ಆರಂಭಿಸುವ ಯೋಜನೆ ಇದೆ ಎಂದು ಮುಕ್ತ ವಿವಿಯ ಕುಲಪತಿ ಡಾ. ರಾಮೇ ಗೌಡ ತಿಳಿಸಿದ್ದಾರೆ.

ಅವರು ಮಂಗಳವಾರ ಹಾಸನ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಈಗ 50 ಅಧ್ಯಯನ ಕೇಂದ್ರಗಳಿದ್ದು, ಇನ್ನು ಒಂದು ವರ್ಷದಲ್ಲಿ 30 ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ. ಪ್ರಸ್ತುತ ಉದ್ಘಾಟನೆಗೊಂಡಿರುವ ಹಾಸನ ಅಧ್ಯಯನ ಕೇಂದ್ರಕ್ಕೆ ಕೊಡಗು, ತುಮಕೂರು ಚಿಕ್ಕಮಗಳೂರು ಜಿಲ್ಲೆಗಳು ಸೇರುತ್ತವೆ ಎಂದು ರಾಮೇಗೌಡ ಹೇಳಿದರು.

ಒಂದು ಜಿಲ್ಲೆಯಲ್ಲಿ 8ರಿಂದ 14 ಕೇಂದ್ರಗಳನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು , ಉಳಿದ ಅಧ್ಯಯನ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ನಂತರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು ಮುಕ್ತ ವಿವಿಗೆ ವರ್ಷಕ್ಕೆ 20 ಕೋಟಿ ರೂಪಾಯಿ ಅಗತ್ಯವಿದೆ. ಆದರೆ 8 ಕೋಟಿ ರೂ.ಗಳ ಅನುದಾನ ದೊರೆತಿದೆ. ಕೇಂದ್ರದಿಂದ 2 ಕೋಟಿ ರೂಪಾಯಿ ನೆರವು ಸಿಕ್ಕಿದೆ. ಇನ್ನುಳಿದ ಹಣವನ್ನು ಬೇರೆ ಮೂಲಗಳಿಂದ ಸಂಗ್ರಹಿಸಬೇಕಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಜಿ. ಪುಟ್ಟ ಸ್ವಾಮಿಗೌಡ, ರಾಜ್ಯಸಭಾ ಸದಸ್ಯ ಎಚ್‌. ಕೆ. ಜವರೇ ಗೌಡ ಅವರು ಉಪಸ್ಥಿತರಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+