Get Updates
Get notified of breaking news, exclusive insights, and must-see stories!

ಕ್ರಿಕೆಟ್‌ : ಜೈತ್ರಯಾತ್ರೆಯ ನಡುವೆ ಎಡವಿದ ಇಬ್ಬರು ಭಾರತೀಯರು

ಹರಾರೆ : ಶಡಗೋಪನ್‌ ರಮೇಶ್‌ಗೆ ಬೆನ್ನು ನೋವು. ಆಶಿಶ್‌ ನೆಹ್ರ ಬೌಲ್‌ ಮಾಡಿದ ನಂತರ ಪಿಚ್‌ ಮೇಲೆ ಓಡುತ್ತಾರೆಂಬ ಆರೋಪ. ಭಾರತದ ಕ್ರಿಕೆಟ್‌ ಪಾಳಯದಲ್ಲಿ ಈ ಹೊತ್ತು ಚಿಂತೆಗೀಡುಮಾಡಿರುವ ವಿಷಯ ಇದು.

ಎರಡನೇ ಟೆಸ್ಟ್‌ಗೆ ಇನ್ನೂ ಎರಡು ದಿನ ಇದೆ. ತಂಡದ ಫಿಸಿಯೋ ಆ್ಯಂಡ್ರೂ ಲೀಪಸ್‌ ರಮೇಶ್‌ ಬೆನ್ನು ನೋವು ಕಳಕೊಳ್ಳುವಂತೆ ಸರಳ ವ್ಯಾಯಾಮ ಮಾಡಿಸುತ್ತಿದ್ದಾರೆ. ರಮೇಶ್‌ ಮರಳುತ್ತಾರೆ ಎಂಬ ಭರವಸೆ ನನ್ನದು ಎನ್ನುತ್ತಾರೆ ತಂಡದ ಕೋಚ್‌ ಜಾನ್‌ ರೈಟ್‌. ಬೌಲಿಂಗ್‌ ಮಾಡಿ, ಪಿಚ್‌ ಮೇಲೆ ಓಡುವುದು ಕ್ರಿಕೆಟ್‌ನಲ್ಲಿ ತಾಂತ್ರಿಕ ತಪ್ಪು. ನೆಹ್ರ ಇದನ್ನು ಮಾಡಿದರು. ಬುಲವೆಯೋ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಕಾರಣಕ್ಕೇ ಅವರು ಬೌಲಿಂಗ್‌ ಮುಂದುವರಿಸಲಾಗಲಿಲ್ಲ.

ಗಂಗೂಲಿ ಈಗ ಏನು ಯೋಚಿಸುತ್ತಿದ್ದಾರೆ... ಕೆದಕಿದಾಗ, ಅವರು ಬಾಯಿ ತೆರೆದರು...

ನೆಹ್ರ ವಿಷಯ ಗಂಭೀರವಾದದ್ದೇ. ಜಹೀರ್‌ ಕೂಡ ಇದೇ ತಪ್ಪನ್ನು ಆಗಾಗ ಮಾಡುತ್ತಾರೆ. ಅವರೂ ಹುಷಾರಾಗಿರಬೇಕು. ಒಂದು ವೇಳೆ ಶುಕ್ರವಾರ (ಜೂನ್‌ 15) ಪ್ರಾರಂಭವಾಗಲಿರುವ 2ನೇ ಟೆಸ್ಟ್‌ನಲ್ಲಿ ರಮೇಶ್‌ ಆಡಲಾಗದಿದ್ದರೆ, ದ್ರಾವಿಡ್‌ ಅಥವಾ ಹೇಮಾಂಗ್‌ ಬದಾನಿ ದಾಸ್‌ ಜೊತೆ ಬ್ಯಾಟಿಂಗ್‌ ಇನ್ನಿಂಗ್ಸ್‌ ಶುರುಮಾಡುವ ಯೋಚನೆಯಿದೆ.

ನನ್ನ ವೈಯಕ್ತಿಕ ಆಟ ಸುಧಾರಿಸಬೇಕಿದೆ (ಕಳೆದ 4 ಟೆಸ್ಟ್‌ಗಳಲ್ಲಿ ಗಂಗೂಲಿ ಗಳಿಸಿರುವುದು 111 ರನ್‌ ಮಾತ್ರ). ನಾಯಕತ್ವವೇನೂ ನನ್ನ ಆಟದ ಎಡರಾಗಿಲ್ಲ. 18 ತಿಂಗಳಿಂದ ಈ ಭಾರ ಹೊತ್ತಿದ್ದೇನೆ. ಫಾರ್ಮ್‌ ಕಳೆದುಕೊಂಡಿದ್ದೇನೆ. ವಾಪಸ್ಸಾಗಬೇಕಷ್ಟೆ.

ಜಿಂಬಾಬ್ವೆ ಪಾಳಯದಲ್ಲಿ.... ಹೀತ್‌ ಸ್ಟ್ರೀಕ್‌ಗೆ ಸಣ್ಣಗೆ ಕಾಲುನೋವು ಕಾಣಿಸಿಕೊಂಡಿದ್ದರಿಂದ ಬುಲೆವಿಯೋ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಬೌಲ್‌ ಮಾಡಲಿಲ್ಲ. ಹೆನ್ರಿ ಒಲಾಂಗ ಅವರಿಗೆ ಮಂಡಿ ನೋವು. ಒಲಾಂಗ ಆಡದಿರುವ ಸಾಧ್ಯತೆಯೇ ಹೆಚ್ಚು. ಅವರ ಬದಲಿಗೆ ಟ್ರ್ಯಾವಿಸ್‌ ಫ್ರೆಂಡ್‌ ತಂಡ ಸೇರುವ ನಿರೀಕ್ಷೆಯಿದೆ.

ಭಾರತಕ್ಕೆ ವಿಶ್ವಾಸ : 15 ವರ್ಷಗಳ ನಂತರ ವಿದೇಶೀ ನೆಲದಲ್ಲಿ ಟೆಸ್ಟ್‌ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ವಿಜಯ ಯಾತ್ರೆ ಮುಂದುವರೆಸುವ ಆತ್ಮವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನಾವು ಕಳಕೊಳ್ಳಲು ಸಿದ್ಧರಿಲ್ಲ ಎನ್ನುತ್ತಾರೆ ಗಂಗೂಲಿ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+