Get Updates
Get notified of breaking news, exclusive insights, and must-see stories!

ಶ್ರೀಕಂಠನ ವೈಭವಕ್ಕೆ‘ಕೃಷ್ಣ ’ ನಿಶಾನೆ

Nanjanagudu Srikanteshwara Temple(ಇನ್ಫೋ ವಿಶೇಷ)

ಮೈಸೂರು : ಕಪಿಲಾ ನದಿ ದಂಡೆಯಲ್ಲಿರುವ ಶ್ರೀಕಂಠನಿಗೆ ಅದೃಷ್ಟ ಖುಲಾಯಿಸಿದೆ. 11 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ಸದ್ಯದಲ್ಲಿಯೇ ಜಗಮಗಿಸಲಿದೆ. ನಂಜನಗೂಡು ದೇವಸ್ಥಾನವನ್ನು ಪ್ರವಾಸೀ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಘೋಷಿಸಿದ್ದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಮ್ಮ ಮಾತು ಉಳಿಸಿಕೊಂಡಿದ್ದಾರೆ.

ನಂಜನಗೂಡು ಶ್ರೀಕಂಠ ದೇಗುಲವನ್ನು ಪ್ರವಾಸಿಕೇಂದ್ರವಾಗಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ಬುಧವಾರ ಕೃಷ್ಣ ಉದ್ಘಾಟಿಸಿದರು. ದೇವಸ್ಥಾನದ ಕಟ್ಟಡಗಳಿಗೆ ಕೆಸರು ಕಲ್ಲು ಹಾಕುವುದು, ಜೀರ್ಣೋದ್ಧಾರಕ್ಕೆ ಚಾಲನೆ ನೀಡುವುದು, ಪ್ರವಾಸಿಗಳಿಗಾಗಿ ಯಾತ್ರಿ ನಿವಾಸ, ಆಸ್ಪತ್ರೆಯ ಉದ್ಘಾಟನೆ, ರಂಗಮಂಟಪ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಯೋಜನೆಯ ಪಟ್ಟಿಯಲ್ಲಿವೆ.

ಯೋಜನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸುವ ಮುನ್ನ - ಅವರನ್ನು ಉಲ್ಲಹಳ್ಳಿ ವೃತ್ತದಿಂದ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೇಷ್ಮೆ ಖಾತೆ ಸಚಿವ ಎಂ. ಮಹಾದೇವು ವಹಿಸಿದ್ದರು. ಅತಿಥಿಗಳಾಗಿ ಸಚಿವರಾದ ಬಾಬುರಾವ್‌ ಚಿಂಚನಸೂರ್‌, ಎಚ್‌. ವಿಶ್ವನಾಥ್‌, ಎಂ. ಶಿವಣ್ಣ, ಧರ್ಮಸಿಂಗ್‌ ಹಾಗೂ ಡಾ.ಮಲಕರೆಡ್ಡಿ ಭಾಗವಹಿಸಿದ್ದರು.

ವರ್ಷವೊಂದರಲ್ಲಿ ಎಲ್ಲ ಯೋಜನೆಗಳು ಪೂರ್ತಿ
ರಾಜ್ಯರೇಷ್ಮೆ ಮತ್ತು ಜವಳಿಖಾತೆ ಸಚಿವ ಎಂ. ಮಹದೇವ್‌ ಅವರ ಪ್ರಕಾರ ಈ ಎಲ್ಲ ಕಾಮಗಾರಿಗಳು ಒಂದೇ ವರ್ಷದಲ್ಲಿ ಮುಗಿಯಲಿವೆ. ಪೊಲೀಸ್‌ ಮಹಾ ನಿರ್ದೇಶಕ ಎಲ್‌. ರೇವಣ್ಣ ಸಿದ್ಧಯ್ಯ ಅವರ ನೇತೃತ್ವದಲ್ಲಿ ಕಾಮಗಾರಿಯ ಉಸ್ತುವಾರಿಗೆ ಸಮಿತಿಯಾಂದನ್ನು ನೇಮಿಸಲಾಗಿದೆ. ಮಹದೇವ್‌ ಅವರು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಮಂತ್ರಿಗಳು. ಇತ್ತೀಚಿನ ವರ್ಷಗಳಲ್ಲಿ ನಂಜುಂಡೇಶ್ವರ ದೇವಸ್ಥಾನಕ್ಕೆ ಬರುವ ಯಾತ್ರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎನ್ನುತ್ತಾರೆ ಮಹಾದೇವು.

1994-95ರಲ್ಲಿ ಇದು ಕೇವಲ 80 ಲಕ್ಷ ರುಪಾಯಿ ಆದಾಯ ಗಳಿಸಿದ್ದು ದೇವಸ್ಥಾನ, ಕಳೆದ ಸಾಲಿನಲ್ಲಿ 3 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಹೆಚ್ಚು ತ್ತಿರುವ ಯಾತ್ರಿಕರ ಸಂಖ್ಯೆಗೆ ಪೂರಕವಾಗಿ ಅನುಕೂಲಗಳನ್ನು ಕಲ್ಪಿಸಿಕೊಡುವತ್ತ ಈಗ ಸರಕಾರ ಹೆಜ್ಜೆ ಹಾಕಿದೆ. ಇದರಿಂದ ಸರಕಾರಕ್ಕೆ ಮತ್ತಷ್ಟು ಲಾಭವಾಗಲಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ ಎಂಬುದನ್ನು ಮಹದೇವ್‌ ಒಪ್ಪಿಕೊಳ್ಳುತ್ತಾರೆ.

ಈಗ ಕೈಗೆತ್ತಿಕೊಂಡಿರುವ ಯೋಜನೆಗಳಲ್ಲಿ ಬರೇ ಕಟ್ಟಡಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾತ್ರ ಸೇರಿಲ್ಲ. 2.24 ಕೋಟಿ ರೂ. ವೆಚ್ಚದಲ್ಲಿ ಟಾಯ್ಲೆಟ್‌, ಕುಡಿಯುವ ನೀರು, ಬಸ್‌ ಸ್ಟಾಂಡ್‌, ಡ್ರೆೃನೇಜ್‌ಗಳ ಕಾಮಗಾರಿಯೂ ಸೇರಿದೆ. ಉಳಿದಂತೆ 48 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ, 70 ಲಕ್ಷ ರೂ. ಖರ್ಚಿನಲ್ಲಿ 1,200 ಮಂದಿಗೆ ಸಾಕಾಗುವಷ್ಟು ವಿಶಾಲವಾದ ವಿಶ್ರಾಂತಿ ಕೊಠಡಿ, 1000 ಮಂದಿ ಉಣ್ಣ ಬಹುದಾದ ದಾಸೋಹ ಭವನಗಳ ನಿರ್ಮಾಣ ಕಾರ್ಯವನ್ನೂ ಆರಂಭಿಸಲಾಗಿದೆ.

ನಂಜನಗೂಡಿನ ನಿಮ್ಮ ಮುಂದಿನ ಪ್ರವಾಸ ಸಂತೋಷಕರವಾಗಲಿದೆ
ನಂಜನಗೂಡು ದೇವಸ್ಥಾನದ ಬಳಿ ಇರುವ ಮೈಸೂರು ಮಹಾರಾಜರ ರಥ ನಿಲ್ಲಿಸುವ ಮಂಟವನ್ನೂ ಸುಂದರಗೊಳಿಸಲಾಗುವುದು. ಹೊಸದಾಗಿ ಸಿದ್ಧವಾಗಲಿರುವ ರಂಗಮಂಟಪ ಸಾಂಸ್ಕೃತಿಕ , ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿದೆ.

ಇವೆಲ್ಲದರ ಹೊರತಾಗಿ ನೂರು ಹಾಸಿಗೆಗಳಿರುವ ಆಸ್ಪತ್ರೆ 2.47 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ನಿರ್ಮಾಣವಾಗಿದೆ. ರಕ್ತ ನಿಧಿ, ಉತ್ತಮ ಚಿಕಿತ್ಸಾ ಸೌಲಭ್ಯ ನೀಡಲು ಆಸ್ಪತ್ರೆ ಸಜ್ಜಾಗಿದೆ. ನಂಜನಗೂಡಿಗೆ ಪ್ರವಾಸ ಹೋದಾಗ ತೊಂದರೆ ಪಟ್ಟಿ ಇರಲಿಕ್ಕಿಲ್ಲ ಅಲ್ವೇ ?

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+