Get Updates
Get notified of breaking news, exclusive insights, and must-see stories!

ಭವಿಷ್ಯವಿಲ್ಲದ ಐಟಿ ಹಿಂದೆ ಓಡುವುದು ಸರಿಯಲ್ಲ -ಸಿಎನ್‌ಆರ್‌ರಾವ್‌

ಬೆಂಗಳೂರು : ವಿಜ್ಞಾನ ಜಗತ್ತಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚಿನ ಆಯುಷ್ಯವೇ ಇಲ್ಲ ಎಂದು ಖ್ಯಾತ ವಿಜ್ಞಾನಿ ಡಾ. ಎನ್‌. ರಾಮಚಂದ್ರ ರಾವ್‌ ಹೇಳಿದ್ದಾರೆ.

ಅದು ನಾಡಿನ ಅತ್ಯುನ್ನತ ಪುರಸ್ಕಾರ ಕರ್ನಾಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ. ಹೈಟೆಕ್‌ ಮುಖ್ಯಮಂತ್ರಿ ಎಂದೇ ಕರೆಸಿಕೊಳ್ಳುತ್ತಿರುವ ಎಸ್‌. ಎಂ. ಕೃಷ್ಣ ರವೀಂದ್ರಕಲಾ ಕ್ಷೇತ್ರದಲ್ಲಿ ಮಂಗಳವಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಜ್ಞಾನಿ ಸಿ.ಎನ್‌. ರಾಮಚಂದ್ರ ರಾವ್‌ ಅವರಿಗೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ರಾವ್‌ ವಿಜ್ಞಾನದ ಪ್ರಯೋಗಗಳನ್ನು ಮೂಲೆಗೆ ತಳ್ಳಿ ಎಲ್ಲರೂ ಕಂಪ್ಯೂಟರ್‌ಹಿಂದೆ ಓಡುತ್ತಿರುವುದು ಸರಿಯಲ್ಲ . ಸೆಮ್ಕಿಂಡಕ್ಟರ್‌ ಭೌತ ಶಾಸ್ತ್ರ ಈಗ ಅಂತಿಮ ಹಂತ ತಲುಪಿದೆ. ಆದರೆ ವಿಜ್ಞಾನದ ಸಂಶೋಧನೆಗಳು, ಪ್ರಯೋಗಾಲಯಗಳು, ವಿದ್ಯಾಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು ಕಷ್ಟದಲ್ಲಿ ನಡೆಯುತ್ತಿವೆ. ಎಲ್ಲರೂ ಬರೀ ಕಂಪ್ಯೂಟರ್‌ಗೇ ಎಲ್ಲ ಗಮನವನ್ನೂ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ನೀಡಿದ ಕೃಷ್ಣ ಅವರು ಮಾತನಾಡಿ ಅಪ್ಪಟ ಕನ್ನಡ ಪ್ರತಿಭೆ ಸಿ.ಎನ್‌. ಆರ್‌. ರಾವ್‌ ಗ್ರಾಮೀಣ ಶಾಲೆಯಲ್ಲಿ ಕಲಿತು ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಕ್ಷೇತ್ರದಲ್ಲಿ ಕೀರ್ತಿ ಗಳಿಸಿರುವುದು ಶ್ಲಾಘನಾರ್ಹ. ಒಂದು ಸಾವಿರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, 35 ಪುಸ್ತಕ, ವೈಜ್ಞಾನಿಕ ನಿಯತಕಾಲಿಕಗಳ ಸಂಪಾದಕತ್ವದಂತಹ ರಾವ್‌ ಅವರ ಸಾಧನೆಯನ್ನು ಪ್ರಶಂಸಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+