ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ವಂಚಿತರ ಪಾಲಿಗೆ ಉದಿಸಿದ ಅಜೀಂಪ್ರೇಂಜಿ ಎನ್ನುವ ಸೂರ್ಯ

By Staff
|
Google Oneindia Kannada News

ಬೆಂಗಳೂರು : ನಾನಾ ಕಾರಣಗಳಿಂದ ಬೀದಿಯಲ್ಲೇ ಉಳಿದು ಶಿಕ್ಷಣದಿಂದ ವಂಚಿತರಾಗಿರುವ 10 ಲಕ್ಷ ಮಕ್ಕಳನ್ನು ಪ್ರಾಥಮಿಕ ಶಿಕ್ಷಣದ ಮುಖ್ಯವಾಹಿನಿಗೆ ಕರೆ ತರುವ ರಾಜ್ಯ ಸರ್ಕಾರದೊಂದಿಗಿನ ಮಹತ್ವದ ಒಪ್ಪಂದಕ್ಕೆ ವಿಫ್ರೋದ ಮುಖ್ಯಸ್ಥ ಅಜೀಂ ಪ್ರೇಂಜಿ ಮಂಗಳವಾರ ಸಹಿ ಹಾಕಿದರು.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಅವರು ಒಪ್ಪಂದಕ್ಕೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಪ್ರೇಂಜಿ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದರು. ಶಾಲೆಯಿಂದ ಹೊರಗುಳಿದ 14 ವರ್ಷದೊಳಗಿನ ಮಗುವನ್ನು ಶಾಲೆಗೆ ಸೇರಿಸುವುದು, ಶಾಲೆಯಲ್ಲಿ ಗುಣಾತ್ಮಕ ಕಲಿಕೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಸಮುದಾಯದ ಸಹಭಾಗಿತ್ವ ಉದ್ದೇಶಗಳನ್ನು ಈ ಒಪ್ಪಂದ ಒಳಗೊಂಡಿದೆ.

ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ ವರದಾನವೆಂದು ನಂಬಲಾಗಿರುವ ಈ ಯೋಜನೆ, ಅಜೀಂ ಪ್ರೇಂಜಿ ಪ್ರತಿಷ್ಠಾನದಿಂದ ಈಗಾಗಲೇ ಕೋಲಾರ ಮತ್ತು ಮಂಡ್ಯ ಜಿಲ್ಲೆಯ 1300 ಗ್ರಾಮಗಳಲ್ಲಿ ಪ್ರಾರಂಭವಾಗಿದ್ದು, ಇದೀಗ ರಾಯಚೂರು, ಗುಲ್ಬರ್ಗಾ, ಬಳ್ಳಾರಿ, ಬೀದರ್‌, ಬಿಜಾಪುರ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ ಎಂದು ಒಪ್ಪಂದದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಂಜಿ ಹೇಳಿದರು.

ಶಾಲೆ ಬಿಟ್ಟ ಮಕ್ಕಳನ್ನು ಆಕರ್ಷಿಸಲು ಹಾಗೂ ಈ ಆಂದೋಲನವನ್ನು ಪ್ರತಿ ಮನೆಯ ಬಾಗಿಲಿಗೂ ಒಯ್ಯಲು ಯುವ ಸಮುದಾಯ ಮತ್ತು ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು. ಬೆಂಗಳೂರು ನಗರವೊಂದರಲ್ಲಿಯೇ 2003 ರ ವೇಳೆಗೆ 50 ಸಾವಿರ ಶಾಲೆ ಬಿಟ್ಟ ಮಕ್ಕಳನ್ನು ಗುರ್ತಿಸಿ ಶಿಕ್ಷಣ ನೀಡುವ ಗುರಿಯನ್ನು ಪ್ರೇಂಜಿ ಪ್ರತಿಷ್ಠಾನ ಹೊಂದಿದೆ ಎಂದು ಪ್ರೇಂಜಿ ತಿಳಿಸಿದರು.

ಪ್ರಾಥಮಿಕ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ - ಎಸ್‌.ಎಂ. ಕೃಷ್ಣ
ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಸವಲತ್ತುಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರೇಂಜಿ ಪ್ರತಿಷ್ಠಾನದೊಂದಿಗಿನ ಒಪ್ಪಂದದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಆದ್ಯತ ವಲಯವನ್ನಾಗಿ ತಮ್ಮ ಸರ್ಕಾರ ಗುರ್ತಿಸಿದೆ. ಆ ಕಾರಣದಿಂದಲೇ ರಾಜ್ಯ ಆಯವ್ಯಯದಲ್ಲಿ ಉನ್ನತ ಶಿಕ್ಷಣಕ್ಕೆ ಮೀಸಲಾಗಿದ್ದ ಹಣದಲ್ಲಿ ಪ್ರತಿಶತ 15 ರಷ್ಟನ್ನು ಕಡಿತಗೊಳಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೃಷ್ಣ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X