ಇನ್ನು 8 ತಿಂಗಳಲ್ಲಿ ಬೆಂಗಳೂರು ನಲ್ಲಿಯಲ್ಲಿ ನಿತ್ಯ ಹರಿಯಲಿದೆ ನೀರು!
ಬೆಂಗಳೂರು: ಕೇಳಿದಿರಾ ಈ ಸುದ್ದಿ! ಕೇಳಿ ಬೆಚ್ಚಿ ಬೀಳದಿರಿ! ಅತ್ಯುತ್ತಮ ಜೋಕ್ ಎಂದು ನಕ್ಕು ಸುಮ್ಮನಾಗದಿರಿ. ಇದು ನಿಜವಾದರೂ ಅಚ್ಚರಿಯಿಲ್ಲ. ಆಗದಿದ್ದರೂ ಆಶ್ಚರ್ಯವಿಲ್ಲ. ಅಂದ ಹಾಗೆ ಸುದ್ದಿ ಏನು ಗೊತ್ತೆ?
ಮುಂಬರುವ ಏಪ್ರಿಲ್ 1ರಿಂದ ಬೆಂಗಳೂರಿನ ನಾಗರಿಕರಿಗೆ ನಿತ್ಯವೂ ಕುಡಿಯುವ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉದ್ದೇಶಿಸಿದೆ. ನಗರಕ್ಕೆ 270 ದಶಲಕ್ಷ ಲೀಟರ್ ಹೆಚ್ಚುವರಿ ನೀರು ಪೂರೈಸುವ ಕಾವೇರಿ ನಾಲ್ಕನೇ ಹಂತದ ಮೊದಲ ಘಟಕದ ಕಾಮಗಾರಿ ಮಾರ್ಚ್ 2002ರ ವೇಳೆಗೆ ಪೂರ್ಣವಾಗಲಿದ್ದು, ಏಪ್ರಿಲ್ 1ರಿಂದ ಪ್ರತಿನಿತ್ಯ ನಲ್ಲಿಯಲ್ಲಿ ನೀರು ಧಾರಾಕಾರವಾಗಿ ಹರಿಯಲಿದೆ.
ಅಂದರೆ, ಪ್ರತಿದಿನ ಕನಿಷ್ಠ 5ರಿಂದ 6 ಗಂಟೆಗಳ ಕಾಲ ಕುಡಿಯುವ ನೀರು ಬಿಡಲಾಗುವುದು ಎಂಬುದು ನೀರು ಸರಬರಾಜು ಮಂಡಳಿಯ ಅಧ್ಯಕ್ಷ ಎನ್. ವಿದ್ಯಾಶಂಕರ್ ಅವರ ಹೇಳಿಕೆ. ಈ ವಿಷಯವನ್ನು ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ.
ವಾರದಲ್ಲಿ ಎರಡು ದಿನ ಅದೂ ಅವೇಳೆಯಲ್ಲಿ ತಮ್ಮ ನಲ್ಲಿಯಲ್ಲಿ ತೊಟ್ಟಿಕ್ಕುವ ನೀರಿಗಾಗಿ ಕಾಯುವ ಬೆಂಗಳೂರಿಗರು ಈ ಸುದ್ದಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ. ಕಾರಣ ಅಧ್ಯಕ್ಷರು 2002ರ ಏಪ್ರಿಲ್ 1ರಿಂದ ಎಂದು ಹೇಳಿದ್ದಾರಲ್ಲ ! ಹೇಳಿ ಕೇಳಿ ಏಪ್ರಿಲ್ 1 ಮೂರ್ಖರ ದಿನ. ನಮ್ಮನ್ನು ಜಲಮಂಡಳಿ ಮೂರ್ಖರನ್ನಾಗಿಸುತ್ತಿದೆ ಎಂದು ಜನ ಭಾವಿಸಿದಂತಿದೆ.
ಎರಡು ದಿನಕ್ಕೊಮ್ಮೆ ನೀರು: ಹಾಲಿ ಜಲಮಂಡಳಿ ಬೆಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದೆ. (ಕೆಲವು ಬಡಾವಣೆಗಳಲ್ಲಿ ಹಾಗೂ ಎತ್ತರ ಪ್ರದೇಶದಲ್ಲಿರುವ ಮಂದಿಗೆ ವಾರದಲ್ಲಿ ಎರಡು ದಿನ ಮಾತ್ರ.) ಕಾವೇರಿ 4ನೇ ಹಂತದ ಯೋಜನೆಯ ಮೊದಲ ಘಟಕದ ಕಾಮಗಾರಿ ಬಳಿಕ 270 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ದೊರಕುವುದರಿಂದ ಯಾವುದೇ ಅಡೆತಡೆ ಇಲ್ಲದೆ ಪ್ರತಿನಿತ್ಯ ನೀರು ಪೂರೈಸಲು ಸಾಧ್ಯ ಎಂದು ಅಧ್ಯಕ್ಷರು ಹೇಳಿದ್ದಾರೆ.
ಶಿವನಸಮುದ್ರದ ನೆಟ್‌ಕಲ್ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿದು ಬರಲಿದೆ. ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಬೆಂಗಳೂರಿಗೆ ಇಲ್ಲಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಆದರೆ, ಅಧ್ಯಕ್ಷರ ಈ ಹೇಳಿಕೆಯನ್ನು ಜಲಮಂಡಳಿಯ ಬಹುಪಾಲು ಸಿಬ್ಬಂದಿಯೇ ನಂಬಿದಂತಿಲ್ಲ. ಇದನ್ನು ಅರಿತೋ ಏನೋ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇದು ಖಂಡಿತಾ ಸಾಧ್ಯ ಅನುಮಾನ ಬೇಡ ಎಂದು ಅಧ್ಯಕ್ಷರು ಸ್ಪಷ್ಟೀಕರಣ ನೀಡಿದ್ದಾರೆ. ಯೋಜನೆಯಡಿ ತೊರೆಕಾಡನ ಹಳ್ಳಿಯಿಂದ ಬೆಂಗಳೂರಿಗೆ ನೀರು ತರಲು 91 ಕಿಲೋ ಮೀಟರ್ ಉದ್ದದ ಪೈಪ್ ಅಳವಡಿಸಲಾಗುತ್ತಿದೆ.
ಎರಡನೇ ಘಟಕ: ಕಾವೇರಿ ನಾಲ್ಕನೇ ಹಂತದ ಎರಡನೇ ಘಟಕವನ್ನು ಕೂಡ ಅತಿ ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಅದಕ್ಕೆ 2400 ಕೋಟಿ ರುಪಾಯಿ ವೆಚ್ಚ ತಗುಲಲಿದ್ದು, ಎರಡನೇ ಘಟಕದಿಂದ ನಗರಕ್ಕೆ 589 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರಕಲಿದೆ ಎಂದು ಅವರು ಹೇಳಿದರು. ಜಪಾನ್ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್‌ನ 804 ಕೋಟಿ ರುಪಾಯಿ ನೆರವಿನಲ್ಲಿ ಒಳಚರಂಡಿ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಕಂಪ್ಯೂಟರೀಕರಣ : ಜೂನ್ 1ರಿಂದ ಜಲ ಮಂಡಳಿಯನ್ನು ಸಂಪೂರ್ಣ ಕಂಪ್ಯೂಟರೀಕರಣ ಗೊಳಿಸಲಾಗುತ್ತಿದೆ. ಇದಕ್ಕಾಗಿ 2.6 ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಈ ಕಾರ್ಯಪೂರ್ಣಗೊಂಡ ಬಳಿಕ ಕಂಪ್ಯೂಟರ್ ಬಿಲ್‌ಗಳನ್ನು ನೀಡಲಾಗುವುದು ಎಂದ ಅವರು, ನೀರಿನ ಶುಲ್ಕ ಪಾವತಿಯಲ್ಲಿನ ಅನನುಕೂಲತೆ ತಪ್ಪಿಸಲು ಗ್ರಾಹಕರ ಬ್ಯಾಂಕ್ ಖಾತೆಯಿಂದೇ ನೇರವಾಗಿ ನೀರಿನ ಬಿಲ್ ಶುಲ್ಕ ಪಡೆಯುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
(ಇನ್‌ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications