• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ವೀರಪ್ಪನ್‌ ಶಿಕಾರಿಯ ಕುರಿತಾದ ಕೊನೆಯ ಸುದ್ದಿಯೂ ಇರಬಹುದು !

By Staff
|

* ಪಾಪ್ರಿ ಶ್ರೀರಾಮ್‌

ಚೆನ್ನೈ : ಇನ್ನು ಮುಂದೆ ಆಪರೇಷನ್‌ ವೀರಪ್ಪನ್‌ ವಿಷಯದ ಸಣ್ಣ ಎಳೆಯೂ ಮಾಧ್ಯಮಗಳಿಗೆ ಸಿಗುವುದಿಲ್ಲ. ವೀರಪ್ಪನ್‌ನನ್ನು ಕಂಡಿರುವ, ಆತನೊಟ್ಟಿಗೆ ಮಾತಾಡಿರುವ ಯಾರ ನೆರವನ್ನೂ ಎಸ್‌ಟಿಎಫ್‌ ಪಡೆಯುವುದಿಲ್ಲ !

ತಮಿಳುನಾಡು ಸರ್ಕಾರ ಈ ಆಶ್ಚರ್ಯಕರ ನಿರ್ಧಾರ ಕೈಗೊಂಡಿದೆ. ಹಿಂದಿನ ತಮಿಳುನಾಡು ಸರ್ಕಾರದ ಆಡಳಿತದ ವೇಳೆ ರೇಡಿಯೋದಲ್ಲಿ ಬಿತ್ತರವಾದ, ದೂರದರ್ಶನದಲ್ಲಿ ಪ್ರಸಾರವಾದ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ವೀರಪ್ಪನ್‌ಗೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸಿದವು ಎಂಬ ಕಾರಣಕ್ಕೆ ಜಯಲಲಿತಾ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.

ಗೋಪಾಲ್‌, ನೆಡುಮಾರನ್‌ ಇಬ್ಬರ ನೆರವೂ ಬೇಡ :ಜೂನ್‌ 11ನೇ ತಾರೀಖು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ವೀರಪ್ಪನ್‌ ಶಿಕಾರಿಗೆ ಹೊಸ ಕಾರ್ಯತಂತ್ರ ರೂಪಿಸುವ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಬಾರಿ ಜಂಟಿ ಎಸ್‌ಟಿಎಫ್‌ ಯಾವುದೇ ಅಧಿಕೃತ ಹಾಗೂ ಅನಧಿಕೃತ ಸಂಧಾನಕಾರರ ನೆರವು ಪಡೆಯುವುದಿಲ್ಲ. ಜೂನ್‌ 5ರಂದು ಎಸ್‌ಟಿಎಫ್‌ ಪಡೆಯಲ್ಲಿ ಮಾಡಲಾದ ಬದಲಾವಣೆ ಬಗೆಗೆ ಚರ್ಚಿಸಿದ ತಂಡದಲ್ಲಿ ನಕ್ಕೀರನ್‌ ಸಂಪಾದಕ ಹಾಗೂ ವೀರಪ್ಪನ್‌ ಭೇಟಿ ಮಾಡಬಲ್ಲ ದೂತ ಎಂದೇ ಹೆಸರಾಗಿರುವ ಆರ್‌.ಆರ್‌.ಗೋಪಾಲ್‌ ಇರಲಿಲ್ಲ. ಹಿಂದಿನ ಡಿಎಂಕೆ ಸರ್ಕಾರದ ವೀರಪ್ಪನ್‌ ಶಿಕಾರಿ ಕಾರ್ಯಾಚರಣೆಯಲ್ಲಿ ಈತ ಮುಖ್ಯ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಜಯಾ ಸರ್ಕಾರ ಈತನಿಗೆ ಬುಲಾವು ಕೊಡಲಿಲ್ಲ, ಕೊಡುವುದೂ ಇಲ್ಲ.

‘ಗದ್ದುಗೆ ಏರುವ ಹಕ್ಕು ಥೇವರಂಗಿಲ್ಲ’ :Tamil Nationalist Leader Nedumaran ವೀರಪ್ಪನ್‌ ಪಡೆಯ ಹೊಕ್ಕು, ಆತನೊಟ್ಟಿಗೆ ಕೆಲ ದಿನ ಇದ್ದು ಬಂದಿರುವ ಯಾರ ನೆರವನ್ನೂ ಎಸ್‌ಟಿಎಫ್‌ ಪಡೆಯುವುದಿಲ್ಲ. 62ರ ಹರೆಯದ ನಿವೃತ್ತ ಪೊಲೀಸ್‌ ಅಧಿಕಾರಿ ವಾಲ್ಟರ್‌ ಥೇವರಂ ಅವರನ್ನು ಎಸ್‌ಟಿಎಫ್‌ ಮುಖ್ಯಸ್ಥರನ್ನಾಗಿ ನೇಮಿಸಿದ್ದನ್ನು ತಮಿಳು ರಾಷ್ಟ್ರೀಯವಾದಿ ನಾಯಕ ಪಳ ನೆಡುಮಾರನ್‌ ಜೂನ್‌ 11ರಂದು ಮತ್ತೆ ಟೀಕಿಸಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಮುಂದೆ ವಿಚಾರಣೆಗಿರುವ ಥೇವರಂ ವಿರುದ್ಧದ ದೂರುಗಳ ಇತ್ಯರ್ಥವಾಗುವವರೆಗೆ ಎಸ್‌ಟಿಎಫ್‌ ಮುಖ್ಯಸ್ಥರಾಗುವ ಯಾವುದೇ ಹಕ್ಕು ಅವರಿಗಿಲ್ಲ ಎಂಬುದು ನೆಡುಮಾರನ್‌ ವಾದ.

ವೀರಪ್ಪನ್‌ ಗುಮ್ಮ, ಕರ್ನಾಟಕ ಮುಗುಮ್ಮ ?

ಡಿಎಂಕೆ ಆಡಳಿತಕ್ಕೆ ಬಂದ 1996ರಿಂದ ವೀರಪ್ಪನ್‌ ವಿಷಯ ತಣ್ಣಗಾಗಿಹೋಗಿತ್ತು. ಡಾ.ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸುವವರೆಗೆ (ಜುಲೈ 31, 2000) ವೀರಪ್ಪನ್‌ ಜನಮನದಿಂದ ಹೆಚ್ಚೂಕಮ್ಮಿ ಮರೆಯಾಗಿದ್ದ. ಏನೇನೋ ತೆರೆಮರೆಯ ಕೊಡು-ಕೊಳ್ಳುವಿಕೆಯಿಂದ (?), ಅದೂ ಪಳ ನೆಡುಮಾರನ್‌ ಸಹಾಯದಿಂದ ರಾಜ್‌ ಬಿಡುಗಡೆಯಾಯಿತು. ನೆಮ್ಮದಿಯ ನಿಟ್ಟುಸಿರಿಟ್ಟ ಕರ್ನಾಟಕ ವೀರಪ್ಪನ್‌ ವಿರುದ್ಧದ ಎಸ್‌ಟಿಎಫ್‌ ಕಾರ್ಯಾಚರಣೆಯ ವಿಷಯದಲ್ಲಿ ಕೈತೊಳೆದುಕೊಂಡಿತು.

ಈಗಲೂ ಕರ್ನಾಟಕ ಥೇವರಂ ಆಯ್ಕೆಗೆ ತಲೆಯಾಡಿಸಿರುವುದು ಅದರ ಮುಗುಮ್ಮು ಧೋರಣೆಗೆ ಹಿಡಿದ ಕನ್ನಡಿ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಥೇವರಂ ಆಪ್ತರು. ಈ ಕಾರಣಕ್ಕೇ ಥೇವರಂ ಅವರಿಗೆ ಈ ಪಟ್ಟವೇ? ಹಾಗಿದ್ದೂ ಕರ್ನಾಟಕ ಅವರ ಆಯ್ಕೆಗೆ ತಲೆಯಾಡಿಸಿದ್ದು ಯಾಕೆ? ಕರ್ನಾಟಕದ ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ ನೇತೃತ್ವದ ತಂಡ ಜೂನ್‌ 11ರಂದು ನಡೆದ ಹೊಸ ಕಾರ್ಯತಂತ್ರ ಸಭೆಯ ಒಪ್ಪುಗಳನ್ನು ತನ್ನೊಳಗೇ ಇಟ್ಟುಕೊಂಡಿದೆ. ಸಭೆ ಮುಗಿದ ನಂತರ ಒಂದೇ ಒಂದು ಮಾಧ್ಯಮ ಗೋಷ್ಠಿ ನಡೆದಿಲ್ಲ. ಜಂಟಿ ಎಸ್‌ಟಿಎಫ್‌ ಪಡೆ ಮುಖ್ಯಸ್ಥರಾಗಿ ಥೇವರಂ ಅವರನ್ನು ನೇಮಿಸಲಾಗಿದೆ ಎಂಬ ವಿಷಯ ಬಿಟ್ಟು ಯಾವುದೇ ವಿಶೇಷ ಅಥವಾ ಸ್ಕೂಪ್‌ ಸುದ್ದಿಯನ್ನು ಯಾವ ಮಾಧ್ಯಮವೂ ಪ್ರಕಟಿಸಲು ಸಾಧ್ಯವಾಗಿಲ್ಲ.

ಇದು ಯಾಕೆ ? ಶ್‌.. ಬಾಯಿ ಬಿಟ್ಟೀರಾ, ಬಿಟ್ಟರೆ ವೀರಪ್ಪನ್‌ ಸಿಕ್ಕ ಅಂತ ಜಯಲಲಿತಾ ಹಾಗೂ ಥೇವರಂ ತಾಕೀತು ಮಾಡಿದ್ದಾರೆ. ಇವರ ಠರಾವು ತೀರಾ ಬಲವೇ ಆದರೆ, ವೀರಪ್ಪನ್‌ ಶಿಕಾರಿಯ ಜಾಡು ಹಿಡಿಯಲು ಮಾಧ್ಯಮಗಳು ತನಿಖಾ ವರದಿಗಾರರನ್ನೇ ನೆಚ್ಚಿಕೊಳ್ಳಬೇಕು.

(ಐಎಎನ್‌ಎಸ್‌)

What do you feel about this article

ವಾರ್ತಾ ಸಂಚಯ

ಉಭಯ ಪಡೆಗಳ ಸೇನಾಪತಿಯಾಗಿ 62 ವರ್ಷದ ವಾಲ್ಟರ್‌ ಥೇವರಂ

ನರಹಂತಕನ ಹುಟ್ಟಡಗಿಸಲು ಹೊಸತಂತ್ರಕ್ಕಾಗಿ ಸೋಮವಾರ ಸಭೆ

ವೀರಪ್ಪನ್‌ ಸುಳಿವಿಗೆ ನೀಡುವಬಹುಮಾನದ ಮೊತ್ತದಲ್ಲಿ ಹೆಚ್ಚಳ

ವೀರಪ್ಪನ್‌ ಬಂಧನಕ್ಕೆ ಶೀಘ್ರವೇ ಜಂಟಿ ಕಾರ್ಯಾಚರಣೆ : ಜಯಲಲಿತಾ

ನಾನು ವೀರಪ್ಪನ್‌ ಬೆನ್ನು ಹತ್ತಿದ ಬೇತಾಳ : ವಾಲ್ಟರ್‌ ಥೇವಾರಂ

ಥೇವಾರಂ ನೇಮಕ ಪ್ರಶ್ನಿಸಲು ಮಾನವ ಹಕ್ಕು ಸಂಘಟನೆ ನಿರ್ಧಾರ

ನರಹಂತಕ ವೀರಪ್ಪನ್‌ಗೆ ಕ್ಷಮೆ,ಜಯಲಲಿತಾಗೆ ಮುತ್ತುಲಕ್ಷ್ಮಿ ಮೊರೆ

ವೀರಪ್ಪನನ್ನು ಬಗ್ಗುಬಡಿಯಲು ಜಯಲಲಿತಾ ಸರ್ಕಾರ ಸಂಕಲ್ಪ

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more