ಹಾಡು ಹಗಲೇ ಮಾಜಿ ‘ಮಿಸ್ಟರ್ ಬೆಂಗಳೂರ್’ ಕಗ್ಗೊಲೆ
ಬೆಂಗಳೂರು : ಅಶೋಕನಗರದಲ್ಲಿ ಜೋಡಿ ಕೋಲೆ, ಬೆಂಗಳೂರಲ್ಲಿ ಕೋಟ್ಯಧಿಪತಿಯ ಕಗ್ಗೊಲೆ, ಆಗಂತುಕನ ಗುಂಡಿಗೆ ಚಾರ್ಟರ್ಡ್ ಅಕೌಂಟೆಂಟ್ ಬಲಿ, ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ.... ನಿತ್ಯವೂ ಬೆಂಗಳೂರಿನಲ್ಲಿ ಇದೇ ಸುದ್ದಿ. ಪತ್ರಿಕೆಗಳ ಮೂರನೇ ಪುಟವಂತೂ ಕೊಲೆ, ದರೋಡೆ, ಸುಲಿಗೆಯ ಸುದ್ದಿಯಿಂದಲೇ ತುಂಬಿರುತ್ತದೆ.
ಜೂನ್ 11ರ ಸೋಮವಾರ ಕೂಡ ಇಂತಹ ಒಂದು ಭೀಕರ ಕೊಲೆ ಬೆಂಗಳೂರಲ್ಲಿ ನಡೆದಿದೆ. ಶಿವಾಜಿ ನಗರದ ಜಲಜಂಗುಳಿ ಇರುವ ಬಟ್ಟೆ ಅಂಗಡಿಯಾಂದಕ್ಕೆ ಸೋಮವಾರ ಮಧ್ಯಾಹ್ನ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಈ ದುಷ್ಕರ್ಮಿಗಳನ್ನು ಕುಖ್ಯಾತ ರೌಡಿಯ ಸಹಚರರೆಂದೂ, ಕೊಲೆಯಾದ ವ್ಯಕ್ತಿ ಮಾಜಿ ಮಿಸ್ಟರ್ ಬೆಂಗಳೂರ್ ಮಹಮದ್ ಅಜಮ್ ಎಂದೂ ಪೊಲೀಸರು ತಿಳಿಸಿದ್ದಾರೆ. ಅರುಣಾಚಲ ಮೊದಲಿಯಾರ್ ರಸ್ತೆಯ ಬೈತುಲ್ ಮಹಲ್ ಸರ್ಕಲ್ ಬಳಿಯ ಬಟ್ಟೆ ಅಂಗಡಿಯಲ್ಲಿ ಜಲಾಲುದ್ದೀನ್ ಎಂಬುವವರ ಪುತ್ರ ದೇಹದಾರ್ಢ್ಯ ಪಟು ಮಹಮದ್ ಅಜಮ್ (28) ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ತೀವ್ರ ಹಲ್ಲೆಗೀಡಾಗಿದ್ದ ಅಜಮ್‌ನನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆತ ಅಲ್ಲಿ ಮೃತಪಟ್ಟ. ಪೊಲೀಸರ ಪ್ರಕಾರ ಇಷ್ತಿಯಾಕ್‌ನ ಸೋದರರಾದ ಅಷ್ವಾಕ್, ಅಫ್ತಾಕ್ ಹಾಗೂ ಇತರ ಏಳು ಜನರು ಸೋಮವಾರ ಮಧ್ಯಾಹ್ನ 2.50ರಲ್ಲಿ ಈ ಕೃತ್ಯ ಎಸಗಿ, ಮೋಟಾರ್ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಬಂದ ಮನಸ್ತಾಪ ಹಾಗೂ ಕೊಲೆಗೀಡಾದ ವ್ಯಕ್ತಿಯ ತಂದೆ ಹಾಗೂ ಅಷ್ವಾಕ್ ನಡುವೆ ಅಂಗಡಿ ಭೋಗ್ಯದ ವಿಚಾರದಲ್ಲಿ ಉಂಟಾಗಿದ್ದ ವೈಮನಸ್ಯವೇ ಈ ಕೊಲೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ತನಿಖೆ ನಡೆಯುತ್ತಿದೆ.
ಕೊಲೆ ನಡೆದ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಹಿರಿಯ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಗಲಿನಲ್ಲೇ ನಡೆಯುತ್ತಿರುವ ಕೊಲೆ, ಸುಲಿಗೆಗಳಿಂದ ಬೆಂಗಳೂರು ತಲ್ಲಣಗೊಂಡಿದೆ. ಬೆಂಗಳೂರಿಗರು ಭಯಭೀತರಾಗಿದ್ದಾರೆ.
ಕೊಲೆ, ಸುಲಿಗೆ, ದರೋಡೆಗಳ ಊರು ನಿಮ್ಮ ಬೆಂಗಳೂರು
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications