ಮಂಗಳೂರು ಮೇಯರ್ ಪೀಠಕ್ಕೆ ಕಾಂಗ್ರೆಸ್ನ ಅಬ್ದುಲ್ ಅಜೀಜ್
(ಮಂಗಳೂರು ಪ್ರತಿನಿಧಿಯಿಂದ)
ಮಂಗಳೂರು : ಮಂಗಳೂರಿನ 16ನೇ ಮೇಯರ್ ಆಗಿ ಅಬ್ದುಲ್ ಅಜೀಜ್ ಹಾಗೂ ಉಪ ಮೇಯರ್ ಆಗಿ ಲ್ಯಾನ್ಸಿ ಪಿಂಟೋ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸದಸ್ಯರ ಒಳಜಗಳದಿಂದಾಗಿ ಮೇಯರ್ ಆಯ್ಕೆ ಪ್ರಶ್ನೆ ಕೆಲದಿನಗಳಿಂದ ಕಗ್ಗಂಟಾಗಿಯೇ ಉಳಿದಿತ್ತು. ಮಂಗಳವಾರ ಕೈ ಎತ್ತುವ ಮೂಲಕ ನಡೆದ ಆಯ್ಕೆಯಲ್ಲಿ ಅಬ್ದುಲ್ ಅಜೀಜ್ 38 ಮತಗಳನ್ನು ಪಡೆದರು. ಎದುರಾಳಿ ಬಿಜೆಪಿಯ ನಾರಾಯಣ ಶೆಟ್ಟಿ ಅವರು 14 ಮತಗಳ ಅಂತರದಿಂದ ಸೋಲನುಭವಿಸಿದರು.
ಮಂಗಳೂರು ಮಹಾ ನಗರ ಪಾಲಿಕೆ 60 ಸದಸ್ಯ ಬಲವನ್ನು ಹೊಂದಿದ್ದು , ಮೇಯರ್ ಹಾಗೂ ಉಪಮೇಯರ್ ಸ್ಥಾನದೊಂದಿಗೆ ಪಾಲಿಕೆಯಲ್ಲಿ 33 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ತನ್ನ ಬಲ ವೃದ್ಧಿಸಿಕೊಂಡಿದೆ. ಪದವಿನಂಗಡಿ ಶಕ್ತಿ ನಗರ ವಾರ್ಡನ್ನು ಪ್ರತಿನಿಧಿಸುವ ಅಬ್ದುಲ್ ಅಜೀಜ್ ಮುಸ್ಲಿಂ ಸಮುದಾಯದ ಎರಡನೇ ಮೇಯರ್. ಉಪ ಮೇಯರ್ ಲ್ಯಾನ್ಸಿ ಪಿಂಟೋ ಬಿಜೈ ವಾರ್ಡನ್ನು ಪ್ರತಿನಿಧಿಸುತ್ತಾರೆ.ಆಯ್ಕೆ ಪ್ರಕ್ರಿಯೆಯ ನಂತರ ಇಂಡಿಯಾ ಇನ್ಫೋದೊಂದಿಗೆ ಮಾತನಾಡಿದ ಮೇಯರ್ ಅಬ್ದುಲ್ ಅಜೀಜ್, ಮೇಯರ್ ಆಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಮಂಗಳೂರು ನಗರ ಪಾಲಿಕೆಗೆ ಈಗಾಗಲೇ ಒಳ್ಳೆಯ ಹೆಸರಿದ್ದು , ಅದನ್ನು ಉಳಿಸಿ ಬೆಳಸಲು ಶ್ರಮಿಸುವುದಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವುದಾಗಿ ಹೇಳಿದರು.
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications