ಕೊಂಕಣ ರೈಲ್ವೇಯಿಂದ ಪ್ರಯಾಣಿಕರಿಗೆ ಗೋಲ್ಡ್ಕಾರ್ಡ್
ಮಂಗಳೂರು : ಕೊಂಕಣ ರೈಲ್ವೇ ನಿಗಮವು ಪ್ರಯಾಣಿಕರಿಗೆ ಗೋಲ್ಡ್ ಕಾರ್ಡ್ ಸ್ಕೀಮ್ನ್ನು ಪರಿಚಯಿಸಿದೆ. ಮುಂಬಯಿನಿಂದ ಮಂಗಳೂರಿಗೆ ಅಥವಾ ಮಡಗಾಂವ್ಗೆ ಬರುವ ಪ್ರಯಾಣಿಕರಿಗೆ ಈ ಸೌಲಭ್ಯದಿಂದ ಹೆಚ್ಚು ಅನುಕೂಲವಾಗಲಿದೆ.
ಗೋಲ್ಡ್ ಕಾರ್ಡ್ ಹೊಂದಿರುವವರು ಕೊಂಕಣ ಕನ್ಯಾ ಮತ್ತು ಮತ್ಯಗಂಧಾ ಎಕ್ಸ್ಪ್ರೆಸ್ಗಳಲ್ಲಿ ಕೊನೇ ಕ್ಷಣದಲ್ಲಿಯೂ ತಮಗೆ ಬೇಕಾದ ದರ್ಜೆಯ ಸೀಟು ಕಾದಿರಿಸಬಹುದು. ಅಲ್ಲದೆ ಪ್ರಯಾಣಿಕರಿಗೆ ವಸತಿ ವ್ಯವಸ್ಥೆಯನ್ನು ಮುಂಚಿತವಾಗಿಯೇ ಮಾಡಿಕೊಳ್ಳಲು ಕೂಡ ಗೋಲ್ಡ್ ಕಾರ್ಡ್ ಸಹಕರಿಸುತ್ತದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ಹೇಳಿದೆ. ರೈಲ್ವೇ ನಿಲ್ದಾಣಗಳಲ್ಲಿನ ವಿಶ್ರಾಂತಿ ಕೊಠಡಿಗಳಲ್ಲಿಯೂ ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ಈ ಎಲ್ಲ ಸೌಲಭ್ಯಗಳಿಗೆ ಪ್ರಯಾಣಿಕರು 2,500 ರೂಪಾಯಿ ಕೊಟ್ಟು ಗೋಲ್ಡ್ ಕಾರ್ಡ್ ಖರೀದಿಸಬೇಕು. ಆರು ತಿಂಗಳ ಕಾಲ ಮಾತ್ರ ಇದರ ಮೌಲ್ಯ ಚಾಲ್ತಿಯಲ್ಲಿರುತ್ತದೆ. ಯಾವುದೇ ಕಾರಣಕ್ಕೆ ರೈಲ್ವೇಯು ಹಣ ಹಿಂದಿರುಗಿಸುವುದಿಲ್ಲ.
ಈ ಹಿಂದೆ ಮಂಗಳೂರು ಮತ್ತು ಮಡಗಾಂವ್ನಿಂದ ಮುಂಬಯಿಗೆ ಪ್ರಯಾಣಿಸುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಆದರೆ ಈಗ ಮುಂಬೈನಿಂದ ಹಿಂದಿರುಗುವವರಿಗೂ ಈ ಕಾರ್ಡ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಹೆಚ್ಚಾಗಿ ಪ್ರವಾಸದ ಮೇಲಿರುವ ಉದ್ಯಮಿಗಳ ಮತ್ತು ಉದ್ಯೋಗಸ್ಥರ ಸಹಾಯಕ್ಕಾಗಿ ಈ ಸ್ಕೀಮನ್ನು ಜಾರಿಗೆ ತರಲಾಗಿದ್ದು , ಪ್ರಯಾಣವನ್ನು ಮೊದಲೇ ಅರೇಂಜ್ ಮಾಡುವ ಅಗತ್ಯ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications