ಮೌನ ಸೀಳಿ ಮಾತು ಕಂಡ ನೇಪಾಳದಲ್ಲಿ ಸದ್ದೋ ಸದ್ದು
ಕಠ್ಮಂಡು : ಹನ್ನೊಂದು ದಿನಗಳಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳು ಮಂಗಳವಾರ ಮರುಜೀವ ಪಡೆದವು. ನಿಂತಲ್ಲೇ ನಿಂತಿದ್ದ ಬಸ್ಸುಗಳು ಬರ್ರೆಂದವು. ದೊರೆ ಬೀರೇಂದ್ರ ಕುಟುಂಬದ ರಕ್ತಪಾತದ ನಂತರ ಪ್ರಕ್ಷುಬ್ಧವಾಗಿದ್ದ ನಗರಿಯಲ್ಲಿ ಸರ್ಕಾರಿ ಕಚೇರಿಗಳು ಮಂಗ-ಳ-ವಾ-ರ ಬಾಗಿಲು ತೆಗೆದಿವೆ.
ನಾರಾಯಣ್‌ಹಿಟಿ ರಾಯಲ್ ಅರಮನೆ ದ್ವಾರದಲ್ಲಿ ಖಚಾಖಚಿ ಜನ ತುಂಬಿದ್ದಾರೆ. ಶ್ರದ್ಧಾಂಜಲಿ ಸಂದೇಶ ಬರೆಯಲಿ ಅಲ್ಲೊಂದು ಪುಸ್ತಕ ಇಡಲಾಗಿದೆ. ಜುಲೈ 1ರವರೆಗೆ ಜನ ತಮ್ಮ ಶ್ರದ್ಧಾಂಜಲಿ ದಾಖಲಿಸಬಹುದು. ರಾಜ ಕುಟುಂಬದ ಹಠಾತ್ ಕಲ್ಲೋಲದಿಂದ ಆವರಿಸಿದ್ದ ಅಘೋಷಿತ ಮೌನ ಬಿರಿದು ಕಠ್ಮಂಡು ಮಾತಾಡುತ್ತಿದೆ. ಮನಸ್ಸನ್ನು ತಹಬಂದಿಗೆ ತಂದುಕೊಂಡ ಜನರಲ್ಲಿ ಹೊಸ ಉತ್ಸಾಹ. ಈ ವಾತಾವರಣದಲ್ಲಿ ಕೆಲವು ನಾಗರಿಕರು ನಮ್ಮೊಟ್ಟಿಗೆ ಮಾತಾಡಿದ್ದಾರೆ....
ಭಕ್ತಾಪುರದಿಂದ ಓಡಾಡುವ ಸರ್ಕಾರಿ ನೌಕರ ದುರ್ಗ ಕರ್ಕಿ- ನನ್ನೂರು ಕಠ್ಮಂಡುವಿನಿಂದ 12 ಕಿಲೋಮೀಟರ್. ರಾಜ ಕುಟುಂಬದ ದುರಂತಕ್ಕೆ ಇಲ್ಲಿ ಬಂದು ಶ್ರದ್ಧಾಂಜಲಿ ಸಲ್ಲಿಸಲೂ ಆಗಲಿಲ್ಲ. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಶ್ರದ್ಧಾಂಜಲಿ ಪುಸ್ತಕದಲ್ಲಿ ಮೊದಲು ನನ್ನ ಕಣ್ಣೀರು ಬರೆದು, ಆಮೇಲೆ ಆಫೀಸಿಗೆ ಹೋಗುವೆ.
ಬನೇಶ್ವರ ಮೂಲದ ಅಂಗಡಿ ವ್ಯಾಪಾರಿ ಮಹೇಶ್ ಶ್ರೇಷ್ಠ- ಹತ್ತು ದಿನಗಳಿಂದ ವ್ಯಾಪಾರವೇ ಇಲ್ಲ. ರಾಜ ಪರಿವಾರದ ದುರ್ಘಟನೆಯ ನಂತರ ಮೂರು ದಿನ ಶೋಕಾಚರಣೆ. ಅಂಗಡಿ ಬಾಗಿಲು ತೆರೆಯಲೇ ಇಲ್ಲ. ಆಮೇಲೆ ಬಾಗಿಲು ತೆಗೆದು ನೊಣ ಹೊಡೆಯುತ್ತಾ ಕೂತೆ. ದಿನಕ್ಕೆ ಇಬ್ಬರೋ, ಮೂವರೋ ಗಿರಾಕಿಗಳು. ಇವತ್ತು (ಮಂಗಳವಾರ) ಕಚೇರಿಗಳು ಕೆಲಸ ಮಾಡುತ್ತಿವೆ. ಜನ ಓಡಾಡುತ್ತಿದ್ದಾರೆ. ಅನುಭವಿಸಿರುವ ನಷ್ಟ ತುಂಬಿಕೊಳ್ಳಲು ಹೆಚ್ಚು ಹೊತ್ತು ಕೆಲಸ ಮಾಡಬೇಕಿದೆ.
ಬ್ಯಾಂಕುಗಳಂತೂ ಉಸಿರಾಟಕ್ಕೂ ಅವಕಾಶವಿಲ್ಲದಂತೆ ತುಂಬಿಹೋಗಿವೆ. ಹನ್ನೊಂದು ದಿನಗಳಿಂದ ವಹಿವಾಟು ಸ್ಥಗಿತವಾಗಿದ್ದು ಈಗ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಮೇಲಾಗಿ ಗ್ರಾಹಕರ ಕೋಳಿ ಜಗಳ ಬೇರೆ. ಒಟ್ಟಿನಲ್ಲಿ ಕಠ್ಮಂಡುವಿನಲ್ಲಿ ಮರುಜೀವ ಸಂಚಾರವಾಗಿದೆ.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications