Get Updates
Get notified of breaking news, exclusive insights, and must-see stories!

ಉಭಯ ಪಡೆಗಳ ಸೇನಾಪತಿಯಾಗಿ 62 ವರ್ಷದ ವಾಲ್ಟರ್‌ ಥೇವರಂ

ಚೆನ್ನೈ : ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ಕರ್ನಾಟಕ- ತಮಿಳುನಾಡು ವಿಶೇಷ ಕಾರ್ಯಪಡೆಗಳ ನೇತೃತ್ವವನ್ನು ತಮಿಳುನಾಡಿನ ಎಸ್‌ಟಿಎಫ್‌ ನೂತನ ಮುಖ್ಯಸ್ಥ ವಾಲ್ಟರ್‌ ಥೇವರಂ ವಹಿಸುವರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಈ ವಿಷಯವನ್ನು ಪ್ರಕಟಿಸಿದರು. ಥೇವರಂ ಅವರನ್ನು ಉಭಯ ರಾಜ್ಯಗಳ ಎಸ್‌ಟಿಎಫ್‌ ಮುಖ್ಯಸ್ಥರನ್ನಾಗಿ ಒಪ್ಪಿಕೊಳ್ಳುವ ತಮಿಳುನಾಡು ಸರ್ಕಾರದ ಮನವಿಯನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿರುವುದಾಗಿ ಅವರು ಹೇಳಿದರು.

ವೀರಪ್ಪನ್‌ ಶಿಕಾರಿಯ ಬಗ್ಗೆ ಸೋಮವಾರ ಕರ್ನಾಟಕದ ನಾಲ್ವರು ಸದಸ್ಯರ ಉನ್ನತ ಸಮಿತಿ ನಿಯೋಗದೊಂದಿಗೆ ನಡೆಸಿದ ಮಾತುಕತೆಯ ಒಳಗುಟ್ಟುಗಳನ್ನು ಬಹಿರಂಗ ಪಡಿಸಲು ಜಯಲಲಿತಾ ನಿರಾಕರಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ತಮಿಳುನಾಡು ರಾಜ್ಯ ಕಾರ್ಯದರ್ಶಿ ಪಿ. ಶಂಕರ್‌ ಅವರು, ವೀರಪ್ಪನ್‌ ಶಿಕಾರಿ ಕಾರ್ಯಾಚರಣೆಗೆ ಉಭಯ ರಾಜ್ಯಗಳು ಆದ್ಯತೆ ನೀಡಲು ನಿರ್ಧರಿಸಿವೆ ಎಂದರು.

ಕಾರ್ಯಾಚರಣೆಯಲ್ಲಿ ಎರಡೂ ರಾಜ್ಯಗಳ ನಡುವಿನ ಸಹಕಾರ ಮನೋಭಾವನೆಯನ್ನು ಹೆಚ್ಚಿಸುವ ಕುರಿತ ಪ್ರಾಥಮಿಕ ಹಂತದ ಪ್ರಯತ್ನಗಳಾಗಿವೆ ಎಂದು ಸೋಮವಾರ ನಡೆದ ಮಾತುಕತೆಯನ್ನು ಥೇವರಂ ಬಣ್ಣಿಸಿದರು. ಜಯಲಲಿತಾ ಅಧಿಕಾರಕ್ಕೆ ಬಂದ ಮೇಲೆ 1 ವರ್ಷದ ಅವಧಿಯ ಮೇಲೆ 62 ವರ್ಷದ ಥೇವರಂ ಎಸ್‌ಟಿಎಫ್‌ ಪಡೆಗೆ ಮರಳಿದ್ದಾರೆ.

ಶಂಕರ್‌ ಹಾಗೂ ಥೇವರಂ ಅವರೊಂದಿಗೆ ಗೃಹ ಕಾರ್ಯದರ್ಶಿ ನರೇಶ್‌ ಗುಪ್ತ , ಡಿಜಿಪಿ ಆರ್‌.ರಾಜಗೋಪಾಲನ್‌ ಮತ್ತು ಇನ್ಸ್‌ಪೆಕ್ಟರ್‌ ಜನರಲ್‌ (ಎಸ್‌ಟಿಎಫ್‌) ವಿಜಯಕುಮಾರ್‌ ಮಾತುಕತೆಯಲ್ಲಿ ತಮಿಳುನಾಡಿನ ಪರ ಭಾಗವಹಿಸಿದ್ದರು. ಕರ್ನಾಟಕದ ಪರವಾಗಿ ಮುಖ್ಯ ಕಾರ್ಯದರ್ಶಿ ಥೆರೇಸಾ ಭಟ್ಟಾಚಾರ್ಯ, ಗೃಹ ಕಾರ್ಯದರ್ಶಿ ಎಂ.ಪಿ. ಪ್ರಕಾಶ್‌, ಡಿಜಿಪಿ ಶ್ರೀನಿವಾಸನ್‌ ಹಾಗೂ ಐಜಿ (ಎಸ್‌ಟಿಎಫ್‌) ಕೆಂಪಯ್ಯ ಸಭೆಯಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+