ಪ್ರಭಾವೀ ಸಂವಹನಕಾರರ ಪಟ್ಟಿಯಲ್ಲಿ ಇನ್ಫೋಸಿಸ್ ಮೂರ್ತಿಗೆ ಬಡ್ತಿ
ನವದೆಹಲಿ : ಏಷ್ಯಾದ ಉತ್ತಮ 50 ಪ್ರಭಾವಿ ಸಂವಹನಾಕಾರರ ಪಟ್ಟಿಯಲ್ಲಿ ಬೆಂಗಳೂರಿನ ಐಟಿ ದಿಗ್ಗಜ, ಇನ್ಫೋ ಸಿಸ್‌ನ ನಾರಾಯಣ ಮೂರ್ತಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡಿದ್ದಾರೆ. ಆದರೆ ರಿಲಯನ್ಸ್‌ನ ಧೀರೂಭಾಯ್ ಅಂಬಾನಿ ಮತ್ತು ವಿಪ್ರೋದ ಅಜೀಮ್ ಪ್ರೇಮ್‌ಜೀ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಪಟ್ಟಿಯಲ್ಲಿ ಮಹಿಳಾವಾದಿ ವಂದನಾ ಶಿವ ಐದನೇ ಸ್ಥಾನಸಂಪಾದಿಸಿದರೆ, ತೆಹಲ್ಕಾ ಡಾಟ್ ಕಾಮ್‌ನ ಸಂಪಾದಕ ತರುಣ್ ತೇಜಪಾಲ್ ಮತ್ತು ಟಿವಿ ಸೀರಿಯಲ್‌ನ ಯುವ ನಿರ್ಮಾಪಕಿ, ಜಿತೇಂದ್ರ ಅವರ ಮಗಳು ಏಕ್ತಾ ಕಪೂರ್ ಅವರು ಪ್ರಥಮ ಬಾರಿಗೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಹಾಂಕಾಂಗ್ ಮೂಲದ ಏಷ್ಯಾ ವೀಕ್ ಮ್ಯಾಗಸೀನ್ ಸರ್ವೆ ವರದಿ ತಿಳಿಸಿದೆ.
ನಾರಾಯಣ ಮೂರ್ತಿ, ಕಳೆದ ವರ್ಷದ ತಮ್ಮ 40ನೇ ಸ್ಥಾನದಿಂದ 27ನೇ ಸ್ಥಾನಕ್ಕೇರಿದ್ದಾರೆ. 15ನೇ ಸ್ಥಾನದಲ್ಲಿದ್ದ ಪ್ರೇಮ್‌ಜೀ 50ನೇ ರ್ಯಾಂಕಿಗಿಂತ ಆಚೆಗುಳಿದುಬಿಟ್ಟಿದ್ದಾರೆ.
‘ಇಂಡಿಯಾಸ್ ಎಥಿಕಲ್ ಸಾಫ್ಟ್‌ವೇರ್ ಕಿಂಗ್’
ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರನ್ನು ‘ಇಂಡಿಯಾಸ್ ಎಥಿಕಲ್ ಸಾಫ್ಟ್‌ವೇರ್ ಕಿಂಗ್’ ಎಂದು ಮ್ಯಾಗಸೀನ್ ಬಣ್ಣಿಸಿದೆ. ಅವರು ತಮ್ಮ ಕಾರ್ಯಕ್ರಮಗಳಲ್ಲಿ ಯಾವತ್ತೂ ಮ ಒಂದು ಉತ್ತಮ ಸಂದೇಶವನ್ನು ಹೊಂದಿರುವುದು , ನೈತಿಕವಾಗಿ ಹಾಗೂ ಕಾನೂನು ಸಮ್ಮತವಾಗಿ ಉದ್ಯಮವನ್ನು ನಿರ್ವಹಿಸಿಕೊಂಡು ಹೋಗುವುದನ್ನು ಪತ್ರಿಕೆ ಹೊಗಳಿದೆ.
ವಂದನ ಶಿವ ಅವರು ಜಾಗತಿಕ ಹಳ್ಳಿ ಕಲ್ಪನೆಯನ್ನು ಒಪ್ಪಿದರೂ ಪರಿಸರವ ರಕ್ಷಣೆ ಮತ್ತು ಕೃಷಿಯನ್ನು ಬೆಂಬಲಿಸುತ್ತಲೇ ಬಂದವರು. ಜೊತೆಗೆ ಮಹಿಳಾವಾದಿ ಕೂಡ. 48ನೇ ಸ್ಥಾನದಲ್ಲಿ ನಿಂತಿರುವ ತರುಣ್ ತೇಜಪಾಲ್ ಅವರ ಸಾಧನೆಯನ್ನು ಶ್ಲಾಘಿಸಿರುವ ಪತ್ರಿಕೆ, ಲಂಚ ಪಡೆದಿರುವ ವಿಷ್ಯ ಸುಳ್ಳಾಗಿರಲಿ ಅಥವಾ ಸತ್ಯವಾಗಿರಲಿ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ಭಾರತೀಯ ಯುವಜನತೆಗೆ ಅವರು ಆದರ್ಶ ಎನಿಸಿದ್ದಾರೆ ಎಂದು ಹೊಗಳಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications