ದಿನಕ್ಕೆ ಲಕ್ಷ ಸಂಪಾದಿಸುವಟಿಪ್ಪುವಿನ ಬೇಸಿಗೆ ಅರಮನೆ
ಬೆಂಗಳೂರು : ಅದು ಕೊಳಕು ಪ್ರದೇಶ. ಕಲಾಸಿ ಪಾಳ್ಯಂ ಎಂದರೆ ನೆನಪಾಗುವುದೇ ಕಸದ ರಾಶಿ.
ಅರ್ಧಂಬರ್ಧ ನಿರ್ಮಾಣವಾಗಿ ಜೋತಾಡುತ್ತಿರುವ ಫ್ಲೈ ಓವರ್, ಗಂಧದ ಗುಡಿ ಎಂಬ ಹೆಸರಿಗೆ ಅಪವಾದ ತರುವಂಥಾ ಗಬ್ಬೆನ್ನುವ ಕೊಳೆತ ಗಮಲು, ಬಾಣಲೆಗೆ ಸಟ್ಟುಗವನ್ನು ಬಡಿದು ಸದ್ದು ಮಾಡುವ ಕಡಲೇಕಾಯಿವಾಲಾ , ಮತ್ತೊಂದು ಕಡೆ ಚೌಕಾಸಿ ಮಾಡುವ ಗ್ರಾಹಕನ ಮುಂದೆ ತಾನೂ ಚೌಕಾಸಿ ಮಾಡುತ್ತಾ ನಿಂತಿರುವ ತರಕಾರೀ ಸಾಹೇಬರು, ಬಗಲಲ್ಲೇ ವಾಣಿ ವಿಲಾಸ ಹೆರಿಗೆ ಆಸ್ಪತ್ರೆ, ಒಳಹೊಕ್ಕೆ ವಿಕ್ಟೋರಿಯಾ ಎಂಬ ಹೆಣಗಳ ಆಸ್ಪತ್ರೆ, ಒಂದೆರಡು ಹೆಜ್ಜೆ ಮುಂದಕ್ಕೆ ಜಯದೇವ ಹೃದ್ರೋಗ ಕೇಂದ್ರ ... ಈ ಎಲ್ಲದರ ನಡುವೆ 210 ವರ್ಷದಷ್ಟು ಹಳೆಯದಾದ ಅರಮನೆ; ಟಿಪ್ಪುವಿನ ಬೇಸಿಗೆ ಅರಮನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕ್ಕೆ ಅತೀ ಹೆಚ್ಚು ವೀಕ್ಷಕರು ಭೇಟಿ ಕೊಡುವ ಪ್ರೇಕ್ಷಣೀಯ ಸ್ಥಳ ಎಂಬ ಹೆಗ್ಗಳಿಕೆ ಪಡೆದ ಟಿಪ್ಪುವಿನ ಬೇಸಿಗೆ ಅರಮನೆ ದಿನಕ್ಕೆ ಲಕ್ಷ ರೂಪಾಯಿಗಳನ್ನು ಯಾವುದೇ ಮುಲಾಜಿಲ್ಲದೇ ಗಳಿಸುತ್ತದೆ ಎಂದರೆ ನಂಬುತ್ತೀರಾ ?
ಅರಮನೆಯ ರಕ್ಷಣಾ ದಳದವರ ಪ್ರಕಾರ ದಿನಕ್ಕೆ ಒಂದು ಸಾವಿರ ಮಂದಿ ವೀಕ್ಷಕರು ಇಲ್ಲಿಗೆ ಆಗಮಿಸುತ್ತಾರೆ. ದೇಶಿಯರಿಗೆ ಪ್ರವೇಶ ಶುಲ್ಕ ಐದು ರೂಪಾಯಿಯಾದರೆ ವಿದೇಶಿಯರಿಗೆ ಐದು ಡಾಲರ್. ಈ ಅರಮನೆ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯವರಿಗೆ ಹಣ ಉಗುಳುವ ಸ್ಥಳವಾಗಿದೆ. ವಿದೇಶೀ ಹಣದ ಹೊರತಾಗಿಯೂ ಈ ಅರಮನೆ, ತಿಂಗಳಿಗೆ 1.5 ಲಕ್ಷ ರೂಪಾಯಿ ಸಂಪಾದಿಸುತ್ತದೆ.
ಅರಮನೆಯ ರಕ್ಷಣಾಧಿಕಾರಿಗಳಲ್ಲಿ ಒಬ್ಬರಾದ ಕೆಂಪೇಗೌಡ ಹೇಳುತ್ತಾರೆ - ‘1998ರಲ್ಲಿ ಕೆಲಸಕ್ಕೆ ಸೇರಿದ್ದೆ. ಇತ್ತೀಚಿನ ವರ್ಷಗಳಲ್ಲಿ ಅರಮನೆ ನೋಡಲು ಬರುವವರ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ’
ವಿದ್ಯಾರ್ಥಿಗಳು, ಮಕ್ಕಳು, ಗೃಹಿಣಿಯರು, ಪ್ರವಾಸ ಪ್ರಿಯರು ... ಹೀಗೆ ಅರಮನೆ ಸಮಾಜದ ಎಲ್ಲ ವರ್ಗದ ಮಂದಿಯನ್ನು ಆಕರ್ಷಿಸಿದೆ. ಇತಿಹಾಸ ಮತ್ತು ಪುರಾತತ್ವ ವಿಷಯವನ್ನು ಅಧ್ಯಯನ ಮಾಡುವವರಿಗೂ ಅರಮನೆ ಒಂದು ಮಾಹಿತಿ ಸಂಪನ್ಮೂಲ.
ಸ್ಟಾರ್ ಪ್ಲಸ್‌ನ ಸೀರಿಯಲ್‌ನಿಂದಾಗಿ ಅರಮನೆಗೆ ಪುಕ್ಕಟೆ ಜಾಹೀರಾತು
ಹೈದರ್ ಆಲಿ ಮತ್ತು ಟಿಪ್ಪುವಿನ ಬದುಕಿನ ಕುರಿತ ಸೀರಿಯಲ್ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಮರು ಪ್ರಸಾರವಾದ ನಂತರ ಗಣನೀಯ ಪ್ರಮಾಣದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ.
ಮುಚ್ಚಿಗೆ ಹಾಕಲ್ಪಟ್ಟ ಛಾವಣಿ, ಕಂಬಗಳ ಕೆತ್ತನೆಗಳು ಮತ್ತು ಹಳೇ ಕಾಲದ ಕಮಾನಿನ ಕಲಾಕೃತಿಗಳು ಅರಮನೆಯಾಳಗೆ ಹೊಕ್ಕವರಿಗೆ ಕಲೆಯ ಔತಣವೀಯುತ್ತವೆ. ಆಕಾಶಕ್ಕೆ ಮುಖವೊಡ್ಡಿ ನಿಂತ ಬಾಲ್ಕನಿ, ಮತ್ತೆ ಅಲ್ಲಿನ ನಯವಾದ ಕೆತ್ತನೆಗಳು ಪ್ರೇಕ್ಷಕರಿಗೆ ಮರು ಆಹ್ವಾನ ನೀಡುತ್ತವೆ. ಕಲಾಸಿ ಪಾಳ್ಯಂ ನ ಕೊಚ್ಚೆಯನ್ನೆಲ್ಲಾ ದಾಟಿ ಅರಮನೆಗೆ ಬಂದ , ಕೂಲಿಂಗ್ ಗ್ಲಾಸ್, ಜರ್ಕಿನ್ ತೊಟ್ಟ ಜಬಲ್‌ಪುರದ ಹುಡುಗಿಯಾಬ್ಬಳು ಈ ಅದ್ಭುತ ಅರಮನೆಯನ್ನು ನೋಡದೇ ಇದ್ದರೆ ನಾನು ಏನನ್ನೋ ಕಳೆದುಕೊಳ್ಳುತ್ತಿದ್ದೆ ಎಂದೆನಿಸುತ್ತದೆ ಎಂದು ಹೇಳುತ್ತಾಳೆ. ಹಳೇ ಕಲಾಕೃತಿಯನ್ನು ಎಷ್ಟು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ ಎಂದು ಉದ್ಘರಿಸುತ್ತಾಳೆ.
ಆದರೆ ಕೆಂಪೇಗೌಡ ಪ್ರೇಕ್ಷಕರಿಗೆ ಅರಮನೆಯ ಭಾಗಗಳನ್ನು ವಿವರಿಸುತ್ತಾ ಪಶ್ಚಿಮದ ದಿಕ್ಕಿಗೆ ಬಂದವರೇ ನಿಲ್ಲುತ್ತಾರೆ. ಆ ಐದು ರೂಮ್‌ಗಳ ಬಾಗಿಲು ಹಾಕಿವೆ, ಯಾಕೆಂದರೆ ಅವು ಅಂದಿನ ಕಾಲದ ಮಹಿಳೆಯರ ಕೊಠಡಿಗಳು. ತಗ್ಗಾದ ಮತ್ತು ಸುಂದರ , ನಾಜೂಕು ಕೆತ್ತನೆಗಳಿರುವ ಕೋಣೆಗಳು. ನೋಡುಗರು ಈ ಕೆತ್ತನೆಗಳಿಗೆ ಹಾನಿ ಮಾಡಬಹುದು ಎಂಬ ಭಯದಿಂದ ಅವನ್ನು ಮುಚ್ಚಲಾಗಿದೆ. ಅವನ್ನು ನೋಡಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಸ್ಟಾಫ್ ಇಲ್ಲ ಎನ್ನುತ್ತಾರೆ. ಆದರೆ ನೀವು ಅಧ್ಯಯನಕಾರರಾದರೆ ಆ ಬಾಗಿಲು ನಿಮಗೆ ತೆರೆದುಕೊಳ್ಳುತ್ತವೆ.
ಎರಡು ಅಂತಸ್ತಿನ ಈ ಅರಮನೆಯಲ್ಲಿ ವಿಶಾಲವಾದ ವೆರಾಂಡ, ಅದರ ಮುಂದೆ ಕೈ ತೋಟ ನಗುತ್ತಿದೆ. ಅರಮನೆಯ ವಿವರ ಹೊತ್ತ ಮೆಸೇಜ್ ಬೋರ್ಡ್ ಮತ್ತು ಹದಿನೆಂಟನೇ ಶತಮಾನದ ಫೋಟೋಗಳ ಪ್ರದರ್ಶನದಲ್ಲಿ ಬಳ್ಳಾರಿಯ ಕೋಟೆ, ವಿವಿಧ ನಮೂನೆಯ ವಿಶೇಷ ಕತ್ತಿ, ಕಠಾರಿಗಳು, ಟಿಪ್ಪುವಿನ ಕತ್ತಿ, ಫ್ರೆಂಚರು ಟಿಪ್ಪುವಿಗೆ ಉಡುಗೊರೆಯಾಗಿ ನೀಡಿದ ಹಳೇ ಕಾಲದ ಗಡಿಯಾರ ಇಲ್ಲಿ ಮೌನವಾಗಿ ಕುಳಿತಿದೆ.
ತಂಪು ಬೆಂಗಳೂರು ಟಿಪ್ಪುವಿನ ಬೇಸಿಗೆ ತಾಣವಾದ ಪರಿಣಾಮ ಆತ ಅರಮನೆಗೆ ಚೆಂದದ ರೂಪು ಕೊಟ್ಟ . ಈ ಕಾರಣಕ್ಕೇ ಈಗ ಇದು ಟಿಪ್ಪುವಿನ ಬೇಸಿಗೆ ಅರಮನೆ ಎಂದೇ ಪ್ರಸಿದ್ಧವಾಗಿದೆ. ಸದ್ಯಕ್ಕೆ ಸಾಕಷ್ಟು ಕಾಸು ಗಳಿಸುವ ಹಳೇ ಬಂಗಲೆಯೂ ಹೌದು !
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications