ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂತ್ರಿಕ ಶಿಕ್ಷಣ ವೃದ್ಧಿಗೆ 60 ಬಿಲಿಯನ್‌ ರು. ವಿಶ್ವಬ್ಯಾಂಕ್‌ ಸಾಲ ಯಾಚನೆ

By Staff
|
Google Oneindia Kannada News

ಭುವನೇಶ್ವರ್‌ : ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 50ರಿಂದ 60 ಉನ್ನತ ಗುಣಮಟ್ಟದ ತಾಂತ್ರಿಕ ವಿದ್ಯಾ ಸಂಸ್ಥೆಗಳ ಸ್ಥಾಪನೆಗಾಗಿ ಭಾರತ ವು ವಿಶ್ವ ಬ್ಯಾಂಕ್‌ ಬಳಿ 60 ಬಿಲಿಯನ್‌ ರೂಪಾಯಿಗಳ ಸಾಲ ಕೇಳಿದೆ. ಅಖಿಲ ಭಾರತ ತಾಂತ್ರಿಕ ಮಂಡಳಿಯಾಂದಿಗೆ ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಾನವ ಸಂಪನ್ಮೂಲ ಖಾತೆಯ ವಿಶೇಷ ಕಾರ್ಯದರ್ಶಿ ಅಶೋಕ್‌ ಚಂದ್ರ ಆರ್ಥಿಕ ಕ್ಷೇತ್ರಕ್ಕೆ ಅನುಕೂಲವಾಗುವಂತಹ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಅಮೆರಿಕಾದಲ್ಲಿ 1950- 80ರ ಅವಧಿಯಲಿ ಆರ್ಥಿಕ ಬೆಳವಣಿಗೆ ಶೇ 87ರಷ್ಟಿತ್ತು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. 80ರ ದಶಕದಲ್ಲಿ ಜಪಾನಿನಲ್ಲಿ 67 ಶೇ ಆರ್ಥಿಕ ಬೆಳೆವಣಿಗೆ ಕಂಡು ಬಂದಿದೆ. ಇವೆಲ್ಲವೂ ತಾಂತ್ರಿಕ ಸಾಮರ್ಥ್ಯ ಹೆಚ್ಚಳದ ಗುರುತುಗಳು ಎಂದು ಹೇಳಿದ ಅಶೋಕ್‌ ಚಂದ್ರ, ಭಾರತದಂತಹ ದೇಶದ ಆರ್ಥಿಕ ಬೆಳವಣಿಗೆಗಾಗಿ ತಾಂತ್ರಿಕ ಶಿಕ್ಷಣದ ಜರೂರು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. ಆದರೆ ರಾಜ್ಯ ಅಥವಾ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮುಂದುವರೆಯಲು ಆರ್ಥಿಕವಾಗಿ ಸಬಲವಾಗಿಲ್ಲ. ಆದ್ದರಿಂದ ವಿಶ್ವ ಬ್ಯಾಂಕ್‌ ನೆರವು ಪಡೆಯುವುದು ಅನಿವಾರ್ಯ ಎಂದರು. ತಾಂತ್ರಿಕ ಮಂಡಳಿಯಿಂದ ಮಾನ್ಯತೆ ಪಡೆದಿರುವ 3,500 ಕಾಲೇಜುಗಳ ಪೈಕಿ 60 ಕಾಲೇಜುಗಳನ್ನು ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣ ಅಳವಡಿಸಿಕೊಳ್ಳಲು ಆಯ್ಕೆ ಮಾಡಲಾಗುವುದು. ಈ ಆಯ್ಕೆಯಲ್ಲಿ ಖಾಸಗಿ ಮತ್ತು ಸರಕಾರಿ ಎಂಬ ಭೇದ ಇರುವುದಿಲ್ಲ ಎಂದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X