Get Updates
Get notified of breaking news, exclusive insights, and must-see stories!

ಪೇಸ್‌- ಭೂಪತಿ ಜೋಡಿಗೆ ಫ್ರೆಂಚ್‌ ಓಪನ್‌ ಡಬಲ್ಸ್‌ ಪ್ರಶಸ್ತಿ

ಪ್ಯಾರಿಸ್‌ : ಭಾರತದ ಯಶಸ್ವಿ ಟೆನಿಸ್‌ ಜೋಡಿ ಪೇಸ್‌- ಭೂಪತಿಗೆ ಇನ್ನೊಂದು ಗರಿ. ಈ ಜೋಡಿ ಶನಿವಾರ ನಡೆದ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದೆ.

ಹದಿಮೂರನೇ ಶ್ರೇಯಾಂಕಿತ ಜೆಕ್‌ ಗಣರಾಜ್ಯದ ಪಾವೆಲ್‌ ವಿಜ್ನರ್‌ ಮತ್ತು ಪೀಟರ್‌ ಪಾಲಾ ಜೋಡಿಯನ್ನು 7-6(7-5), 6-3ರ ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಭಾರತದ ಶ್ರೇಯಾಂಕ ರಹಿತ ಜೋಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 1999ರಲ್ಲಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದ ಪೇಸ್‌- ಭೂಪತಿ, ಶನಿವಾರದ ಫೈನಲ್ಸ್‌ನ ಮೊದಲ ಸೆಟ್‌ನಲ್ಲಿ 2-5ರಿಂದ ಹಿಂದಿದ್ದರು. ನಂತರ ಚೇತರಿಸಿಕೊಂಡ ಭಾರತದ ಜೋಡಿ ಜೆಕ್‌ ಗಣರಾಜ್ಯದ ಜೋಡಿಯ ಹೊಡೆತಗಳಿಗೆ ದಿಟ್ಟ ಉತ್ತರ ನೀಡಿತು.

ಈ ವರ್ಷ ಅಟ್ಲಾಂಟ ಮತ್ತು ಹ್ಯೂಸ್ಟನ್‌ಗಳಲ್ಲೂ ಪ್ರಶಸ್ತಿ ಗೆದ್ದುಕೊಂಡಿರುವ ಭಾರತದ ಪೇಸ್‌- ಭೂಪತಿ ಜೋಡಿ ಗೆಲ್ಲುತ್ತಿರುವ ವರ್ಷದ 3ನೇ ಡಬಲ್ಸ್‌ ಪ್ರಶಸ್ತಿ ಇದಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+