‘ಕಾರ್ಟೂನ್‌ಗಳಲ್ಲಿನ ನನ್ನ ಮೂಗನ್ನು ಹೆಂಡತಿಗೆತೋರಿಸಿ ಖುಷಿಪಡುತ್ತೇನೆ’
ಬೆಂಗಳೂರು : ವ್ಯಂಗ್ಯಚಿತ್ರಕಾರರಿಗೆ ರಾಜಕಾರಣಿಗಳೇ ಪ್ರಧಾನ ವಸ್ತು. ಆ ಚಿತ್ರಗಳಲ್ಲಿನ ನನ್ನ ಮೂಗು, ತಲೆಗೂದಲಿನ ವಿವಿಧ ಬಗೆಗಳನ್ನು ನನ್ನ ಹೆಂಡತಿಗೆ ತೋರಿಸಿ ಹೇಳುತ್ತೇನೆ- ಇದು ಒಳ್ಳೆಯ ವ್ಯಂಗ್ಯಚಿತ್ರ. ಈ ಮಾತನ್ನು ಹೇಳಿದವರು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಏರ್ಪಡಿಸಿದ್ದ ಸಮಾರಂಭದಲ್ಲಿ ಶನಿವಾರ 7 ಹೆಸರಾಂತ ವ್ಯಂಗ್ಯಚಿತ್ರಕಾರರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು. ಇತಿಹಾಸ ಪ್ರಜ್ಞೆ, ಪ್ರಸ್ತುತತೆಯ ಔಚಿತ್ಯ ಹಾಗೂ ಭವಿಷ್ಯದ ಬೆಳವಣಿಗೆಗಳ ಎಳೆಯನ್ನು ತೋರುವ ವ್ಯಂಗ್ಯಚಿತ್ರಗಳಲ್ಲಿ ಸಂದೇಶವೂ ಇರುತ್ತದೆ. ವ್ಯಂಗ್ಯಚಿತ್ರವಿಲ್ಲದ ದಿನಪತ್ರಿಕೆಯಲ್ಲಿ ಜೀವಂತಿಕೆ ಇರುವುದಿಲ್ಲ ಎಂದರು.
ಶಂಕರ್ ಪಿಳ್ಳೈ ಅವರು ಭಾರತದ ವ್ಯಂಗ್ಯಚಿತ್ರ ಪರಿಕಲ್ಪನೆಯ ಪಿತಾಮಹ. ನಮ್ಮ ಕಾಲೇಜು ದಿನಗಳಲ್ಲಿ ಅವರ ಕಾರ್ಟೂನ್‌ಗಳನ್ನು ಪತ್ರಿಕೆಗಳಲ್ಲಿ ನೋಡಲು ಪ್ರತಿ ವಾರ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಪತ್ರಿಕೆಗಳಿಗೆ ತಾಜಾತನ ತುಂಬಬಲ್ಲ ವ್ಯಂಗ್ಯಚಿತ್ರಗಳ ಮಹತ್ವ ಅಷ್ಟಿಷ್ಟಲ್ಲ ಎಂದು ಬಣ್ಣಿಸಿದರು.
ಸನ್ಮಾನಿತ ಕಾರ್ಟೂನಿಸ್ಟ್‌ಗಳು : ಕೇರಳದ ಮರಿಯಾ ಡಿ ಮಿರಾಂಡ, ಯೇಸುದಾಸನ್, ಮಹಾರಾಷ್ಟ್ರದ ಫಡ್ನಿಸ್, ಕರ್ನಾಟಕದ ಎಸ್.ಕೆ.ನಾಡಿಗ್, ತಮಿಳುನಾಡಿನ ಗೋಪುಲು, ಆಂಧ್ರಪ್ರದೇಶದ ಬಾಪು ಮತ್ತು ದೆಹಲಿಯ ಪ್ರಾಣ್ - ಇವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಮುಖ್ಯಮಂತ್ರಿ ಕೃಷ್ಣ ಕುರಿತ ವಿವಿಧ ಭಂಗಿಗಳ ಕಾರ್ಟೂನ್‌ಗಳನ್ನು ಬಿಡಿಸಿ, ಅವರಿಗೆ ತೋರಿದರು.
ವೆಬ್‌ಸೈಟ್ ಉದ್ಘಾಟನೆ : ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಂಸ್ಥೆಯ ವೆಬ್‌ಸೈಟ್ www.cartoonistindia.com ಅನ್ನು ಉದ್ಘಾಟಿಸಿದರು. ಸಂಸ್ಥೆಯ ಸದಸ್ಯರ ಬೇಡಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಸಂಸ್ಥೆಯ ಭವಿಷ್ಯತ್ತಿನ ಚಟುವಟಿಕೆಗಳಿಗೆ ಸರ್ಕಾರದ ಸಂಪೂರ್ಣ ನೆರವು ಕೊಡುವುದಾಗಿ ಭರವಸೆ ಕೊಟ್ಟರು. ಸಂಸ್ಥೆಯ ಅಧ್ಯಕ್ಷ ಬಿ.ವಿ.ರಾಮಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೀವಮಾನದ ಶ್ರೇಷ್ಠ ಸಾಧನೆಗಾಗಿ ಆಯ್ಕೆಯಾಗಿರುವ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅನಾರೋಗ್ಯದ ಕಾರಣ ಸಭೆಗೆ ಬಂದಿರಲಿಲ್ಲ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications