Get Updates
Get notified of breaking news, exclusive insights, and must-see stories!

ಅಕ್ಷರ ಹೋರಾಟ : ನಿಮ್ಮ ಪುಟ್ಟನನ್ನು ಬಾಲವಾಡಿಗೆ ಸೇರಿಸಿಯಮ್ಮಾ...

* ಇಮ್ರಾನ್‌ ಖುರೇಷಿ

ಬೆಂಗಳೂರು : ಆಕೆಗೆ ಈಗ ಹದಿನೆಂಟು ವರ್ಷ. ಹತ್ತನೇ ತರಗತಿವರೆಗೆ ಓದಿದ್ದಾಳೆ. ಉಲ್ಫತ್‌ ಅಂತ ಹೆಸರು. ಇನ್ನೇನು ಮನೆಯಲ್ಲಿ ಕುಳಿತು ಮದುವೆಯ ಕನಸು ಕಾಣುವ ವಯಸ್ಸು. ಆದರೆ ಆಕೆ ಹೊಸದೊಂದು ಗುರಿ ಇಟ್ಟುಕೊಂಡಿದ್ದಾಳೆ. ಮನೆಯ ನಾಲ್ಕು ಗೋಡೆಗಳಿಂದ ಆಚೆಗೆ ಬಂದಿದ್ದಾಳೆ.

ಅಕ್ಕ ಪಕ್ಕದ ಮನೆಯವರಿಗೆ, ಪರಿಚಯದ ಕುಟುಂಬಗಳಲ್ಲಿ ಶಾಲೆಗೆ ಸೇರುವ ವಯಸ್ಸಿನ ಮಕ್ಕಳು ಶಾಲೆಗೆ ಹೋಗದೇ ಇದ್ದರೆ ಅವರಿಗೆ ವಿದ್ಯೆ ಕಲಿಯುವಂತೆ ಹೇಳುತ್ತಾಳೆ. ಆ ಕೂಸಿನ ಅಪ್ಪ ಅಮ್ಮನಿಗೆ ವಿದ್ಯೆಯ ಮಹತ್ವವನ್ನು ವಿವರಿಸುತ್ತಾಳೆ. ಈ ಪುಟ್ಟನನ್ನು ಬಾಲವಾಡಿಗೆ ಸೇರಿಸಿಯಮ್ಮಾ ಎನ್ನುತ್ತಾಳೆ.

ಉಲ್ಫತ್‌ ಒಂಟಿಯಾಗಿ ಈ ಆಂದೋಲನವನ್ನು ಹಮ್ಮಿಕೊಂಡಿಲ್ಲ. ಜೊತೆಗೆ ಲಲಿತಾ ಬಾಯಿ ಇದ್ದಾಳೆ. ಆರು ವರ್ಷದ ಹುಡುಗಿಯಾಬ್ಬಳು ಹಸುಳೆ ತಮ್ಮನನ್ನೆತ್ತಿಕೊಂಡಿರುವುದನ್ನು ನೋಡಲಿಕ್ಕಾಗುವುದಿಲ್ಲ ಎಂದು ಲಲಿತಾ ಹೇಳುತ್ತಾರೆ.

ಬೆಂಗಳೂರಿನಲ್ಲಿ 2003ರ ವೇಳೆಗೆ ಪ್ರತಿ ಮಗುವಿಗೂ ಶಿಕ್ಷಣ ಎಂಬ ಸರಕಾರದ ಘೋಷಣೆಯನ್ನು ವಾಸ್ತವವಾಗಿಸಲು ಹೋರಾಡುತ್ತಿರುವವರು ಇವರು. ಮೂರರಿಂದ ಐದು ವರ್ಷದ ವರೆಗಾದರೂ ಕನಿಷ್ಠ ವಿದ್ಯಾಬ್ಯಾಸ ಪಡೆವಂತೆ ಮಾಡುವ, ಅರ್ಧದಲ್ಲಿಯೇ ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಹೊಣೆಯನ್ನು ಹೆಗಲ ಮೇಲೆ ಹೊತ್ತುಕೊಂಡ ಈ ಇಬ್ಬರೂ ಹುಡುಗಿಯರು, ಆರ್ಥಿಕ ಸಹಾಯ ನೀಡಲೂ ದುಡಿಯುತ್ತಿದ್ದಾರೆ. ಜೊತೆಗೊಂದು ಗುಂಪೇ ಇದೆ. ಅದು ಅಕ್ಷರ ಸಂಘಟನೆ.

ಪುಟ್ಟ ಮಕ್ಕಳು ಶಾಲೆಯಲ್ಲಿಯೇ ಇರಬೇಕು

ಐಸಿಐಸಿಐ ಬ್ಯಾಂಕ್‌ನ ಅಧ್ಯಕ್ಷ ಎನ್‌. ವೇಣುಗೋಪಾಲ್‌, ಅಜೀಮ್‌ ಪ್ರೇಮ್‌ಜೀ ಫೌಂಡೇಷನ್‌, ಮೈಂಡ್‌ ಟ್ರೀ ಕನ್ಸಲ್ಟಿಂಗ್‌, ಬಿಪಿಎಲ್‌ ಇನೊವೇಷನ್‌, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ , ಜಾರ್ಜ್‌ ಫೌಂಡೇಷನ್‌, ಮತ್ತಿತರರು ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತಾರೆ. ಉಲ್ಫತ್‌ ಖುಷಿಯಿಂದ ಹೇಳುತ್ತಾರೆ- ಇದೆಲ್ಲಾ ಸಾಧ್ಯವಾಗುತ್ತದೆ ಅಂತ ನಾನು ಯೋಚಿಸಿಯೇ ಇರಲಿಲ್ಲ. ಈಗ ಹೆತ್ತವರೇ ತಮ್ಮ ಅಕ್ಕಪಕ್ಕದ ಮನೆ ಮತ್ತು ಪರಿಚಯದವರಿಗೆ ಮಕ್ಕಳನ್ನು ಬಾಲವಾಡಿಗೆ ಸೇರಿಸುವಂತೆ ಒತ್ತಾಯಿಸುತ್ತಿರುವುದು ನೋಡಿದಾಗ ಖುಷಿಯಾಗುತ್ತದೆ.

ಹೆತ್ತವರ ಬಳಿ ಮಕ್ಕಳಿಗಾಗಿ ಖರ್ಚು ಮಾಡಲು ಹಣ ಇಲ್ಲ ಎಂಬ ಕಾರಣಕ್ಕಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಅಜೀಮ್‌ ಪ್ರೇಮ್‌ಜಿ ಫೌಂಡೇಷನ್‌ನ ಕಾರ್ಯನಿರ್ವಾಹಕ ಸದಸ್ಯ ಸಿ.ವಿ. ಮಧುಕರ್‌ ಹೇಳುತ್ತಾರೆ. ಅಕ್ಷರ ವೇದಿಕೆಯ ಮುಖ್ಯ ಉದ್ದೇಶವೇ ಬೆಂಗಳೂರಿನ ಪ್ರತಿ ಮಗುವೂ ಶಾಲೆಯಲ್ಲಿ ಇರಬೇಕೆಂಬುದು.

ಪ್ರತಿಯಾಬ್ಬರಿಗೂ ಶಿಕ್ಷಣ ಎಂಬುದು ಬರೀ ಘೋಷಣೆಯಲ್ಲ. ಬೆಂಗಳೂರು ಆ ನಿಟ್ಟಿನಲ್ಲಿ ಸಾಗುತ್ತಿದೆ ಎಂಬ ಹೆಮ್ಮೆ ಅಕ್ಷರ ಸಂಘಟನೆಗಿದೆ. ಸರಕಾರದ ಘೋಷಣೆ ಕಾರ್ಯರೂಪಕ್ಕೆ ಬರಲು ಅವಿರತ ಹೋರಾಟ ನಡೆಯುತ್ತಿದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+