Get Updates
Get notified of breaking news, exclusive insights, and must-see stories!

ವರ್ಷೇ ವರ್ಷೇ ಕುಸಿಯುತ್ತಿರುವ ಫಲಿತಾಂಶ: ಐಐಎಂನಿಂದ ಅಧ್ಯಯನ

ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಅತ್ಯಂತ ಮಹತ್ವದ ಘಟ್ಟವಾದ ದ್ವಿತೀಯ ಪಿ.ಯು.ಸಿ.ಯ ಶೇಕಡಾವಾರು ಫಲಿತಾಂಶ ವರ್ಷೇ ವರ್ಷೆ ಗಣನೀಯವಾಗಿ ಇಳಿಮುಖವಾಗುತ್ತಿರುವ ಬಗ್ಗೆ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಇಳಿಮುಖವಾಗುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ಅರಿಯಲು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐ.ಐ.ಎಂ.) ಅಧ್ಯಯನದಿಂದ ಅರಿಯಲು ತೀರ್ಮಾನಿಸಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.

ಶನಿವಾರ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶದ ಬಗ್ಗೆ ವಿವರ ನೀಡಲು ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪಿ.ಯು.ಸಿ. ಶೇಕಡಾವಾರು ಫಲಿತಾಂಶ ಕುಸಿಯುವುದಕ್ಕೆ ನಿಖರವಾದ ಕಾರಣಗಳೇನು ಎಂಬುದು ತಿಳಿದಿಲ್ಲ. ಅದಕ್ಕಾಗಿ ಆಮೂಲಾಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ಐಐಎಂಗೆ ಕೋರಲಾಗಿದೆ ಎಂದರು.

ಕಳೆದ ವರ್ಷದ ಶೇಕಾಡಾವಾರು ಫಲಿತಾಂಶಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶ ಶೇ. 7ರಷ್ಟು ಕುಸಿದಿದೆ. ರಾಜ್ಯದ ಫಲಿತಾಂಶ ಶೇ.50ನ್ನೂ ದಾಟದಿರುವುದು ವಿಷಾದದ ಸಂಗತಿ. ಇತರ ರಾಜ್ಯಗಳಲ್ಲಿ ಶೇ.70ರಿಂದ 80ರಷ್ಟು ಫಲಿತಾಂಶ ಬರುತ್ತಿದೆ. ಪರೀಕ್ಷೆ ಬರೆದ 3,94,201 ವಿದ್ಯಾರ್ಥಿಗಳ ಪೈಕಿ ಕೇವಲ 1,54,840 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ರಾಜ್ಯದ ಶೇಕಡಾವಾರು ಫಲಿತಾಂಶ ಕೇವಲ 39.28 ಎಂದು ಹೇಳಿದರು.

ಮನೆಪಾಠ ಮಾಡುವ ಶಿಕ್ಷಕರ ವಿರುದ್ಧ ಕ್ರಮ: ಶೇಕಡಾವಾರು ಫಲಿತಾಂಶ ಕುಸಿಯಲು ಮನೆಪಾಠ ಮಾಡುವ ಶಿಕ್ಷಕರೂ ಕಾರಣ ಎನ್ನಿಸುತ್ತದೆ. ಮಕ್ಕಳು ಮನೆಪಾಠಕ್ಕೆ ಬರಲೆಂದು ಕಾಲೇಜಿನಲ್ಲಿ ಶ್ರದ್ಧೆಯಿಂದ ಪಾಠ ಪ್ರವಚನ ಮಾಡದಿರುವುದೂ ಇದಕ್ಕೆ ಒಂದು ಕಾರಣ. ಹೀಗಾಗಿ ಮನೆ ಪಾಠ ಮಾಡುವ ಅಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಚಿಂತಿಸುತ್ತಿದೆ ಎಂದರು.

ಮರುಎಣಿಕೆ - ಫೋಟೋಪ್ರತಿ: ಇದೇ ತಿಂಗಳ 23ರೊಳಗೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಅರ್ಜಿ ಪಡೆದು ಪ್ರಾಂಶುಪಾಲರ ಮೂಲಕ ಮರುಎಣಿಕೆಗೆ ಮನವಿ ಸಲ್ಲಿಸಬಹುದು, ಉತ್ತರ ಪತ್ರಿಕೆಗಳ ಫೋಟೋ ಪ್ರತಿ ಪಡೆಯಬಯಸುವ ವಿದ್ಯಾರ್ಥಿಗಳು ಪ್ರತಿ ಉತ್ತರ ಪತ್ರಿಕೆಗೆ 200 ರುಪಾಯಿ ಶುಲ್ಕ ಪಾವತಿ ಮಾಡಿ ಜೂ. 23ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಮರುಮೌಲ್ಯಮಾಪನಕ್ಕೆ ಪತ್ರಿಕೆಯಾಂದಕ್ಕೆ 500 ರುಪಾಯಿ. ಅದಕ್ಕೂ ಕೊನೆ ದಿನ 23.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+